ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಗದಗ ಪಶುಸಂಗೋಪನಾ ಕಾಲೇಜು ಎರಡನೇ ಹಂತ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ. ಹಾಗೂ ಪ್ರತಿ ಜಿಲ್ಲೆಗೆ ಗೋಶಾಲೆ ತೆರೆಯಲು ತೀರ್ಮಾನಿಸಲಾಗಿದ್ದು, ಮೊದಲ ಹಂತದಲ್ಲಿ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದು, ರೈತರು ಸ್ವಯಂ ಸಮೀಕ್ಷೆ ಮಾಡಿಕೊಳ್ಳಬಹುದು ಎಂದರು.
ಇನ್ವೆಸ್ಟ್ ಕರ್ನಾಟಕ 2022 ಮೂಲಕ ಫೆ 9, 10, 11ರಂದು ಪ್ಯಾಲೆಸ್ ಗ್ರೌಂಡ್‌ನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಸಮಾವೇಶಕ್ಕೆ ಕೈಗಾರಿಕಾ ನೀತಿ 2025 ಮೂಲಕ ಕೆಲವು ರಿಯಾಯ್ತಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಕೈಗಾರಿಕೆ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಿದ್ದು, ಹಣಕಾಸು ಇಲಾಖೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ 9 ಆಕ್ಸಿಜನ್ ಘಟಕ ಇದ್ದು, 815 ಉತ್ಪಾದನಾ ಸಾಮಮರ್ಥ್ಯವಿದೆ. 5000 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯ ಇದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಖಾಸಗಿ ಬಂಡವಾಳದಾರರು ಬಂದರೆ ಸಬ್ಸಿಡಿ ನೀಡಲಾಗುವುದು ಹಾಗೂ ಕನಿಷ್ಠ 10 ಕೋಟಿ ಬಂಡವಾಳ ಹೂಡಬೇಕು. ಶೇ.25ರಷ್ಟು ರಿಯಾಯ್ತಿ ವಿದ್ಯುತ್ ಸಬ್ಸಿಡಿ, ಲ್ಯಾಂಡ್ ಡೆವಲಡಪ್ ಮೆಂಟ್ ಫೀ ವಾಪಸ್ ನೀಡಲಾಗುವುದು ಎಂದರು.
ಸಹಕಾರ ಸಂಘಗಳ ಚುನಾವಣೆಗಳನ್ನು ಮಾಡಲು ಅವಕಾಶ ಕಲ್ಪಿಸಲಾಗುವುದು. ಆದರೆ ಡಿಸೆಂಬರ್‌ವರೆಗೆ ಜಿಪಂ ಮತ್ತು ತಾಪಂ ಚುನಾವಣೆ ಮಾಡದಿರಲು ತೀರ್ಮಾನಕೈಗೊಳ್ಳಲಾಗಿದೆ ಎಂದು ಹೇಳಿದರು.
ಮೈಸೂರು ಪೊಲೀಸ್ ಇಲಾಖೆ ಕಮೀಷನರ್ ಕೈಯಲ್ಲಿ ಇದೆ. ದರ್ಶನ ತಲೆ ಕಡಿಯುತ್ತೇನೆ ಎಂದು ಹೇಳಿರುವ ಪ್ರಕರಣ ಸೇರಿದಂತೆ ಎಲ್ಲವನ್ನು ಪರಿಶೀಲನೆ ನಡೆಸುವಂತೆ ಕಮೀಷನರ್‌ಗೆ ಸೂಚಿಸಿದ್ದೇನೆ ಎಂದರು.
ಸುದ್ದಿಗೋಷ್ಠಿಯ ಮುಖ್ಯಾಂಶಗಳು:
ದಾಸನಪುರ ಎಪಿಎಂಸಿಯಲ್ಲಿ 93 ಮಳಿಗೆಗಳಿವೆ. ಲಿಸ್ ಕಂ ಸೇಲ್ 24ಲಕ್ಷ ದಿಂದ 20 ಲಕ್ಷಕ್ಕೆ ಕಡಿಮೆ ಮಾಡಲಾಗಿದೆ. ಬಾಡಿಗೆ 20ಸಾವಿರದಿಂದ 15 ಸಾವಿರಕ್ಕೆ ಇಳಿಸಲು ತೀರ್ಮಾನಿಸಲಾಗಿದೆ.
ಜೆಒಸಿಯನ್ನು ಪಿಯುಸಿ ತತ್ಸಮಾನವಾದ ಶಿಕ್ಷಣ ಎಂದು ಪರಿಗಣಿಸಲು ತೀರ್ಮಾನಿಸಿದೆ.
ದೆವದುರ್ಗ ಎಂಜನೀಯರ್ ಕಾಲೇಜ್‌ಗೆ 58 ಕೋಟಿ ರೂ. ಹಣ ಬಿಡುಗಡೆಗೆ ನಿರ್ಧರಿಸಿಲಾಗಿದೆ.
ಕೆಎಸ್‌ಎಫ್‌ಸಿ ಕಟ್ ಬಾಕಿ ಆಗಿರುವವರಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, 15000 ಜನರು ಈಗಾಗಲೇ ಅನುಕೂಲ ಪಡೆದಿದ್ದಾರೆ. ಇನ್ನೂ 2-3 ಸಾವಿರ ಜನರು ಅನುಕೂಲ ಪಡೆಯಲಿದ್ದಾರೆ.
ಕಾರಾಗೃಹ ಅಭಿವೃದ್ಧಿ ಮಂಡಳಿ ಅಧಿವೇಶನದಲ್ಲಿ ತರಲು ತೀರ್ಮಾನಿಸಿದ್ದು, 139 ಖೈದಿಗಳ ಸನ್ನಡತೆ ಮೇಲೆ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.
ಪ್ರವಾಹ ಸಂದರ್ಭದಲ್ಲಿ ಮನೆ ಕಳೆದು ಕೊಂಡಿರುವ ಬಡವರಿಗೆ ಪರಿಹಾರ ನೀಡಲು ಅನುಮೋದನೆ ದೊರೆತಿದೆ.
ಕಂದಾಯ ಇಲಾಖೆಯಲ್ಲಿ ಸಾಮಾನ್ಯ ಹಿರಿತನ ಆಧಾರದಲ್ಲಿ ಬಡ್ತಿ ನೀಡುವ ಬಗ್ಗೆ ಬೇಡಿಕೆ ಇತ್ತು ಅದನ್ನು ಸಂಪುಟ ಒಪ್ಪಿಗೆ ನೀಡಿದೆ.
ಜರ್ಮನ್ ಟೆಕ್ನಾಲಜಿ ಇನ್‌ಸ್ಟಿಟ್ಯೂಷನ್ ಕಟ್ಟಡ ನಿರ್ಮಾಣಕ್ಕೆ ಮಂಗಳೂರು ಮತ್ತು ಬೆಳಗಾವಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ.
ಶಿರಗುಪ್ಪಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು 45 ಕೋಟಿ ರೂ, ರಾಣೆಬೆನ್ನೂರು 18 ಕೆರೆ ತುಂಬಿಸಲು 206 ಕೋಟಿ ರೂ. ಹಾಗೂ ಕೊಪ್ಪಳ ಜಿಲ್ಲೆ ಗಂಗಾವತಿ 5 ಕೆರೆ ತುಂಬಿಸಲು 93 ಕೋಟಿ ರೂ. ಗೆ ಅನುಮೋದನೆ ನೀಡಲಾಗಿದೆ.
ನೇತ್ರಾವತಿಗೆ ಅಡ್ಡಲಾಗಿ ದಕ್ಷಿಣಕನ್ನಡದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾನಕ್ಕೆ 66 ಕೋಟಿ ರೂ.ಗೆ ಅನುಮೋದನೆ
ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಮೂರ್ತಿ ಸ್ಥಾಪಿಸಲು ಸಂಪುಟ ಒಪ್ಪಿಗೆ.ಅಶ್ವಾರೂಢ ಬಸವಣ್ಣ ಬದಲು ವಚನ ಬರೆಯುವ ಬಸವಣ್ಣ ಮಾಡಬೇಕೆಂಬ ಅಭಿಪ್ರಾಯ ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post