ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ ಒಟಿಟಿ ವೇದಿಕೆಯನ್ನು ಸೃಜಿಸಲು ಪೂರಕವಾಗಿ ಅಗತ್ಯ ಮಾಹಿತಿಯನ್ನು ಪಡೆದು ಯೋಜನೆಯ ರೂಪುರೇಷೆಗಳನ್ನು ರಚಿಸಲು ಅನುವಾಗುವಂತೆ ರಾಜ್ಯ ಸರ್ಕಾರವು ತಜ್ಞರ ಸಮಿತಿಯೊಂದನ್ನು ರಚಿಸಿದ್ದು,ಅದರ ಸದಸ್ಯರಾಗಿ ಪತ್ರಕರ್ತ ದೇಶಾದ್ರಿ ಹೊಸ್ಮನೆ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸಾಧು ಕೋಕಿಲ, ಶ್ರೀ ಕಂಠೀರವ ಸ್ಟುಡಿಯೋದ ಅಧ್ಯಕ್ಷರಾದ ಮೆಹಬೂಬು ಪಾಷ, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಟ ದುನಿಯಾ ವಿಜಯ್ ಅವರನ್ನೊಳಗೊಂಡ ತಜ್ಞರ ನ್ನು ಸಮಿತಿಗೆ ನೇಮಕಮಾಡಲಾಗಿದ್ದು, ಅದರಲ್ಲಿ ದೇಶಾದ್ರಿ ಹೊಸ್ಮನೆ ಕೂಡ ಒಬ್ಬರಾಗಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


























Discussion about this post