ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಬನಶಂಕರಿಯ ಶ್ರೀ ದೇವಗಿರಿ ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ದೇವರಾತ ಜೋಷಿಗೆ “ಧ್ರುವ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ತಂಬಿಹಳ್ಳಿ ಮಠದ ಶ್ರೀ ಮಾಧವತೀರ್ಥ ಶ್ರೀಪಾದಂಗಳವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಶ್ರೀ ಪ್ರಸನ್ನ ವೆಂಕಟದಾಸರ ಚಲನಚಿತ್ರದ ಅಭಿನಯಕ್ಕಾಗಿ ದೇವರಾತ ಜೋಷಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
Also read: ಗ್ರಾಮೀಣಾಭಿವೃದ್ಧಿ, MSME ಗಳಿಗೆ ಬೆಂಬಲ | ನೀರಿನ ಭದ್ರತೆಗೆ ತುರ್ತು ಕ್ರಮ ವಹಿಸಲು ಕೇಂದ್ರಕ್ಕೆ ಹೆಚ್‌ಡಿಡಿ ಸಲಹೆ
ಕಾರ್ಯಕ್ರಮದಲ್ಲಿ ಡಾ. ಸಂತೋಷ ಹೆಗಡೆ, ಡಾ. ಆರ್.ಕೆ. ಪದ್ಮನಾಭ, ಡಾ. ರಾಯಚೂರು ಶೇಷಗಿರಿದಾಸ್ ಹಾಗೂ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ಗೌರಿ ನಾಗರಾಜ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post