Read - 2 minutes
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾಟ್ಯ ನಿಕೇತನ ವತಿಯಿಂದ ನ.4ರಂದು ಗುರು ರೇವತಿ ನರಸಿಂಹನ್ ರವರ ಶಿಷ್ಯೆ ಕು. ದಿಶಾ ಶ್ರೀನಿವಾಸ್ ರವರ ಭರತನಾಟ್ಯ ರಂಗಪ್ರವೇಶವನ್ನು ಬೆಂಗಳೂರು ಜಯನಗರ 8ನೇ ಬ್ಲಾಕ್ ಜೆಎಸ್‌ಎಸ್ ಸಭಾಂಗಣದಲ್ಲಿ ಸಂಜೆ 6ಗಂಟೆಗೆ ಆಯೋಜಿಸಲಾಗಿದೆ.
ಹಿರಿಯ ಗಾಯಕ, ಗಾನಕಲಾಭೂಷಣ, ವಿದ್ವಾನ್ ಆರ್.ಕೆ. ಪದ್ಮನಾಭ, ಶಾಂತಲಾ ಆರ್ಟ್ಸ್ ಆಕಾಡೆಮಿಯ ಕಲಾತ್ಮಕ ನಿರ್ದೇಶಕ ಕಲಾಯೋಗಿ ಪುಲಕೇಶಿ ಕಸ್ತೂರಿ ಮತ್ತು ಖ್ಯಾತ ಹಿಂದೂಸ್ತಾನಿ ಗಾಯಕ ನಿವೃತ್ತ ಐಎ ಎಸ್ ಅಧಿಕಾರಿ ಡಾ. ಮುದ್ದುಮೋಹನ್ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಟುವಾಂಗದಲ್ಲಿ ಗುರುಶ್ರೀಮತಿ ರೇವತಿ ನರಸಿಂಹನ್, ಗಾಯನದಲ್ಲಿ ವಿದ್ವಾನ್ ಡಿ.ಎಸ್. ಶ್ರೀವತ್ಸ, ಮೃದಂಗದಲ್ಲಿ ವಿದ್ವಾನ್ ಜಿ. ಗುರುಮೂರ್ತಿ, ಕೊಳಲು ವಿದ್ವಾನ್ ಮಹೇಶ ಸ್ವಾಮಿ, ವಯೋಲಿನ್ ವಿದ್ವಾನ್ ಪ್ರಾದೇಶ್ ಆಚಾರ್ ಸಾಥ್ ನೀಡುವರು, ವಿದುಷಿ ರೂಪಶ್ರೀ ಮಧುಸೂದನ್ ನಿರೂಪಣೆ ನಡೆಸಿಕೊಡುವರು
Also read: ಕನ್ನಡ ಭಾಷೆ, ಸಂಸ್ಕೃತಿ ರಕ್ಷಣೆಗೆ ಮುಂದಾಗಿ: ಪತ್ರಕರ್ತ ಅರುಣ್ ಕರೆ
Discussion about this post