ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತದ ದೇಶ, ಸನಾನತ ಪರಂಪರೆ ಕಂಡ ಮಹಾನ್ ಸನ್ಯಾಸಿ ಡಾ. ಶಿವಕುಮಾರ ಸ್ವಾಮೀಜಿಗಳ Dr. Shivakumara swamiji 115ನೆಯ ಜಯಂತಿಯನ್ನು ಇಂದು ಅದ್ದೂರಿ ಹಾಗೂ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಇಂತಹ ಶ್ರೇಷ್ಠ ಗುರುವಿನ ಕುರಿತಾಗಿ ತೆರೆಕಂಡ ಜ್ಞಾನ ಜ್ಯೋತಿ ಸಿದ್ಧಗಂಗಾ Gnanajyothi Siddaganga ಎಂಬ ಚಿತ್ರದಲ್ಲಿ ಸ್ವತಃ ಶ್ರೀಗಳು ನಟಿಸಿದ್ದರು.
2008ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಶ್ರೀಗಳು ನಟಿಸಿದ್ದರು ಎಂಬ ವಿಚಾರದ ಸಾಕಷ್ಟು ಮಂದಿಗೆ ತಿಳಿದಿಲ್ಲ. ಶ್ರೀಗಳ ಕುರಿತಾಗಿ ತೆಗೆಯಲಾಗಿದ್ದ ಈ ಚಿತ್ರದಲ್ಲಿ ಸ್ವತಃ ಅವರೇ ನಟಿಸಿದ್ದು ವಿಶೇಷ ವಿಚಾರ.

ಸಾಹಸಸಿಂಹ ಡಾ.ವಿಷ್ಣುವರ್ಧನ್, Dr. Vishnuvardhan ಭಾರತಿ ವಿಷ್ಣುವರ್ಧನ್ Bharathi Vishnuvardhan ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇನ್ನೊಂದು ವಿಶೇಷ ಸಂಗತಿ. ಇನ್ನು ನಟರಾದ ಸುಚೇಂದ್ರ ಪ್ರಸಾದ್, ಶ್ರೀನಿವಾಸ್ ಮೂರ್ತಿ, ಶಿವಧ್ವಜ್, ಮಧನ್ ಹಾಗೂ ಗುರುಪ್ರಸಾದ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದರು.
ಓಂಕಾರ್ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಶ್ರೀ ಮಠದ 700 ವರ್ಷದ ಇತಿಹಾಸ ಸಾರುವ ಸಿನಿಮಾ ಆಗಿತ್ತು. ಮಹಂತಪ್ಪ ಎನ್ನುವವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post