ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಫೆ.24ರಿಂದ ನೂತನ ಅಂಬಾರಿ ಉತ್ಸವ ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ಸುಗಳನ್ನು ನಾಳೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ.
ಬಸ್ಸುಗಳು ಹೊರಡುವ ಮಾರ್ಗ, ಹೊರಡುವ ಬಸ್ ನಿಲ್ದಾಣ, ಹೊರಡುವ ಸಮಯ ಈವರೆಗೂ ಮುಂಗಡ ಕಾಯ್ದಿರಿಸಿರುವ ಆಸನಗಳ ವಿವರ ಈ ಕೆಳಕಂಡಂತಿದೆ.
1 ಬೆಂಗಳೂರು-ಹೈದರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 22:15 ಬುಕ್ಕಿಂಗ್ ಸಂಖ್ಯೆ – 15 ಸೀಟುಗಳು
2 ಬೆಂಗಳೂರು-ಹೈಟೆಕ್ ಸಿಟಿ, ಕೆಂಪೇಗೌಡ ಬಸ್ ನಿಲ್ದಾಣ, 20:15 ಬುಕ್ಕಿಂಗ್ ಸಂಖ್ಯೆ- 21 ಸೀಟುಗಳು
3.ಬೆಂಗಳೂರು-ಸಿಕಂದ್ರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 21:00 ಬುಕ್ಕಿಂಗ್ ಸಂಖ್ಯೆ -22 ಸೀಟುಗಳು
4 ಬೆಂಗಳೂರು-ಪಣಜಿ, ಕೆಂಪೇಗೌಡ ಬಸ್ ನಿಲ್ದಾಣ, 19:28 ಬುಕ್ಕಿಂಗ್ ಸಂಖ್ಯೆ – 14 ಸೀಟುಗಳು
5 ಬೆಂಗಳೂರು-ತ್ರಿಶೂರು , ಶಾಂತಿನಗರ ಬಸ್ ನಿಲ್ದಾಣ, 21:30 ಬುಕ್ಕಿಂಗ್ ಸಂಖ್ಯೆ -35 ಸೀಟುಗಳು
6 ಬೆಂಗಳೂರು-ಎರ್ನಾಕುಲಂ, ಶಾಂತಿನಗರ ಬಸ್ ನಿಲ್ದಾಣ, 20:15 ಬುಕ್ಕಿಂಗ್ ಸಂಖ್ಯೆ – 33 ಸೀಟುಗಳು
7 ಬೆಂಗಳೂರು-ತಿರುವನಂತಪುರ, ಶಾಂತಿನಗರ ಬಸ್ ನಿಲ್ದಾಣ, 16:13 ಬುಕ್ಕಿಂಗ್ ಸಂಖ್ಯೆ -25 ಸೀಟುಗಳು
ಸಾರ್ವಜನಿಕ ಪ್ರಯಾಣಿಕರು ಮೇಲ್ಕಂಡ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಈ ನೂತನ ಅಂಬಾರಿ ಉತ್ಸವ
ಬಸ್ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post