ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡದಲ್ಲೀಗ ಹೊಸ ಪ್ರತಿಭೆಗಳ ವಿಭಿನ್ನ ಪರ್ವ ಕಾಲ ಶುರುವಾಗಿದ್ದು, ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾ ಡಾಲರ್ಸ್ ಪೇಟೆಯ ಟೀಸರ್ ಬಿಡುಗಡೆಗೊಂಡಿದೆ.
ಮಾರ್ಫಿ, ಮದಗಜ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೋಹನ್ ಎನ್. ಮುನಿನಾರಾಯಣಪ್ಪ ನಿರ್ದೇಶನದ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ.

ಇವತ್ತು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಟೀಸರ್ ರಿಲೀಸ್ ಮಾಡಿದ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಮೋಹನ್ ಮಾತನಾಡಿ, ಡಾಲರ್ಸ್ ಪೇಟೆ ಸತ್ಯ ಘಟನೆಯಾಧಾರಿತ ಚಿತ್ರವಾಗಿದ್ದು, ತಮಿಳುನಾಡಿನ ಬ್ಯಾಂಕ್ ಒಂದರಲ್ಲಿ ಬ್ಯಾಂಕ್ ಮ್ಯಾನೇಜರ್’ನಿಂದ 13 ಕೋಟಿ ಹಣ 100 ಜನಕ್ಕೆ ಮಿಸ್ ಆಗಿ ಡೆಪಾಸಿಟ್ ಆಗುತ್ತದೆ. ಅದು ಹೇಗೆ ಏನು ಅನ್ನೋದರ ಸುತ್ತ ಸಿನಿಮಾ ಸಾಗುತ್ತದೆ. ಇಡೀ ಸಿನಿಮಾವನ್ನು ಒಂದು ಪಾತ್ರದ ಮೇಲೆ ಡೆವಲಪ್ ಮಾಡಿಲ್ಲ. ಇದೊಂದು ಹೈಪರ್ ಲಿಂಕ್ ಹಾಗೂ ಡಾರ್ಕ್ ಕಾಮಿಡಿ ಥ್ರಿಲ್ಲರ್. ನಾಲ್ಕು ಐದು ಪಾತ್ರಗಳು ಒಂದು ಜಾಗದಲ್ಲಿ ಕ್ರಾಸ್ ಓರ್ವ ಆಗುತ್ತೇ ಅನ್ನೋದು ಚಿತ್ರದ ಹೈಲೆಟ್. 50ರಷ್ಟು ಸಿನಿಮಾ ಬ್ಯಾಂಕ್ ನಡೆಯಲಿದೆ.
ನಟಿ ಸೌಮ್ಯಾ ಮಾತನಾಡಿ, ನಾನು ಪೂಜಾ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಈ ಸಿನಿಮಾದ ಭಾಗವಾಗಿರುವುದು ನನಗೆ ಖುಷಿಕೊಟ್ಟಿದೆ. ನಿರ್ಮಾಪಕಿ ಪೂಜಾ ಬೆನ್ನೆಲುಬಾಗಿ ನಿಂತು ಯಾವುದೇ ಕುಂದುಕೊರೆತೆ ಬಾರದೆ ನೋಡಿಕೊಂಡಿದ್ದಾರೆ. ನಿರ್ದೇಶಕರು ನನಗೆ ಕಥೆ ಹೇಳಿದಾಗ ತಕ್ಷಣ ಸಿನಿಮಾ ಮಾಡಲು ಒಪ್ಪಿಕೊಂಡೆ. ಥ್ರಿಲ್ಲರ್ ಜಾನರ್ ಆದರೂ ಪಾತ್ರಗಳು ಅಳುತ್ತಿದ್ದರು ಪ್ರೇಕ್ಷಕರು ನಗುವಂತೆ ಮಾಡುವ ಸನ್ನಿವೇಶ ಚಿತ್ರದಲ್ಲಿದೆ. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು.

ಹೈರ್ಪ ಲಿಂಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಲೂಸಿಯಾ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ, ಮೆಟ್ರೋ ಸಾಗಾ ಖ್ಯಾತಿಯ ಆಕರ್ಷ್ ಕಮಲ, ವೆಂಕಟ್, ರಾಜ್, ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ದಿಯಾ ಪೃಥ್ವಿ ಅಂಬರ್ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿದೆ. ಉಳಿದಂತೆ ದತ್ತು ಬಣಕರ್, ಕೌಶಿಲ್, ರಾಘವೇಂದ್ರ, ಹೊನ್ನವಳ್ಳಿ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಒಳಗೊಂಡ ಕಲಾಬಳಗ ಚಿತ್ರದಲ್ಲಿದೆ.










Discussion about this post