ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಪೊಲೀಸ್ ಇಲಾಖೆ ಸಕ್ರಿಯವಾಗಿದ್ದರೂ ಕೂಡ ಡ್ರಗ್ಸ್ ವ್ಯಸನಿಗಳ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ, ಇದನ್ನು ಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಅಮಲು ಮುಕ್ತ ಕರ್ನಾಟಕವನ್ನಾಗಿ ಮಾಡಬೇಕು ಎಂದು ಗೃಹ ಸಚಿವರಾದ ಜಿ. ಪರಮೇಶ್ವರ್ ಅವರನ್ನು ಶಾಸಕ ಡಾ .ಧನಂಜಯ ಸರ್ಜಿ #Dr. Dhananjaya Sarji ಅವರು ಆಗ್ರಹಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ 153ನೇ ವಿಧಾನ ಮಂಡಲ ಅಧಿವೇಶನದಲ್ಲಿ ಗುರುವಾರ ಅವರು ಸದನಲ್ಲಿ ಮಾತನಾಡಿ, ಇಡೀ ಭಾರತದಲ್ಲೆ ನಮ್ಮ ರಾಜ್ಯವೂ ಮಾದಕ ವಸ್ತು ವ್ಯಸನ ಮತ್ತು ಸಾವಿನ ಸಂಖ್ಯೆಯಲ್ಲಿ 2 ನೇ ಸ್ಥಾನದಲ್ಲಿದ್ದು, ಗಾಂಜಾ, ಡ್ರಗ್ಸ್ ಹಾಗೂ ಅಪೀಮುಗಳ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು,

ಗೃಹ ಸಚಿವರು, #Home Minister ಪೋಲೀಸ್ ಇಲಾಖೆ #Police department ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಉತ್ತರ ನೀಡಿದ್ದಾರೆ, ಆದರೆ, ಕಳೆದ ತಿಂಗಳ 27 ರಂದು ಡ್ರಗ್ಸ್ ಸೇವಿಸಿ ಹಣಕ್ಕಾಗಿ ಇಬ್ಬರ ಕೊಲೆ ಹಾಗೂ ಮೇ 22 ರಂದು ರೇವ್ ಪಾರ್ಟಿಯಲ್ಲಿ 50 ಲಕ್ಷ ರೂ ಖರ್ಚು ಮಾಡಿ 500 ರೂ. ನೋಟಿನಲ್ಲಿ ಕೆನಬಿಸ್ ನ್ನು ಇಂಜೆಕ್ಟ್ ಮಾಡಿ ಡ್ರಗ್ಸ್ ಸೇವನೆ ಮಾಡಿದ ಕುರಿತು ಪತ್ರಿಕಾ ವರದಿಗಳ ದಾಖಲೆಗಳನ್ನು ಪ್ರದರ್ಶಿಸಿ ಪೊಲೀಸ್ ಇಲಾಖೆ ವೈಫಲ್ಯವನ್ನು ಪ್ರಶ್ನಿಸಿದರು.

Also read: ಸೌತ್ ಝೋನ್ ಹಾಕಿ ಚಾಂಪಿಯನ್’ಶಿಪ್ | ಕರ್ನಾಟಕ ತಂಡದಲ್ಲಿ 7 ಆಟಗಾರರು ಕೊಡಗಿನ ವೀರರು
ಹಾಗೆಯೇ ಮಹಿಳೆಯರ ಮಾದಕ ವಸ್ತು ಪುನರ್ವಸತಿ ಕೇಂದ್ರಗಳಿಲ್ಲ, ಆ ಕೇಂದ್ರಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದುರ ಬಗ್ಗೆ ಅನುಮಾನ ಬರುತ್ತಿದೆ. ಅಲ್ಲದೇ ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿ ತೂರಾಡುವಂತಹ ಘಟನೆಗಳು, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕೇಂದ್ರ ಸರ್ಕಾರದ ನಶಾ ಮುಕ್ತ ಭಾರತ ಅಭಿಯಾನದಡಿ ರಾಜ್ಯದಲ್ಲಿ ಮಾದಕ ವಸ್ತು ವ್ಯಸನ ಮುಕ್ತ ಕೇಂದ್ರಗಳನ್ನು ಮಾಡಬೇಕು. ಇದರಡಿಯಲ್ಲಿ ಸುಮಾರು 8 ಸಾವಿರ ಮಾಸ್ಟರ್ ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ 272 ಜಿಲ್ಲಗಳಲ್ಲಿ ಈ ಅಭಿಯಾನ ನಡೆಯುತ್ತಿದೆ, ವಿಶ್ವ ವಿದ್ಯಾಲಯಗಳು, ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿಯೂ ಇದು ಶುರುವಾಗಬೇಕು ಎಂದು ಆಗ್ರಹಿಸಿದರು.

ಪ್ರತಿ ವರ್ಷ 10 ಟನ್ ಗಾಂಜಾ ಸುಟ್ಟು ಹಾಕಲಾಗುತ್ತಿದೆ. 250 ರಿಂದ 400 ಸಿಂಥೆಟಿಕ್ ಎಂಡಿಎಂಎ ಡ್ರಗ್ಸ್ ಸುಡಲಾಗಿದೆ. 150 ಕೋಟಿ ರೂ. ಮೌಲ್ಯದ ಮಾದಕ ವಸ್ತು ಸುಟ್ಟು ಹಾಕಲಾಗಿದೆ ಎಂದು ಉತ್ತರಿಸಿದರು.

ಡಾ. ಧನಂಜಯ ಸರ್ಜಿ ಅವರು ಮೆಡಿಕಲ್ ಡಾಕ್ಟ್ರು, ನಾನು ಪಿಎಚ್’ಡಿ ಡಾಕ್ಟ್ರು, ಮಣಿಪಾಲ್’ನಲ್ಲಿ ಅಭ್ಯಾಸ ಮಾಡಿದವರು, ಸದನಕ್ಕೆ ಹೊಸದಾಗಿ ಬಂದಿದ್ದಾರೆ, ಬಹಳ ಒಳ್ಳೆಯದು, ಸರ್ಜಿ ಅವರಿಗೆ ಈ ಬಗ್ಗೆ ಅವರಿಗೆ ನನಗಿಂತ ಚೆನ್ನಾಗಿಯೇ ಈ ದುಷ್ಪರಿಣಾಮದಿಂದ ಬಗ್ಗ ಗೊತ್ತಿದೆ ಎಂದು ಈ ವೇಳೆ ಪ್ರಶಂಸಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post