ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ, ಹಿಂದಿ, ತಮಿಳು ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದ ನೈಜೀರಿಯನ್ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ಡ್ರಗ್ ಪೆಡ್ಲಿಂಗ್‌ನಲ್ಲಿ ನೈಜೀರಿಯನ್ ಆಕ್ಟರ್:
ಚಕ್ವಿಮ್ ಮಾಲ್ವಿನ್ ಬಂಧಿತ ಡ್ರಗ್ ಪೆಡ್ಲರ್ ಕಂ ಆಕ್ಟರ್ ಆಗಿದ್ದು, ಆರೋಪಿಯು ಮೆಡಿಕಲ್ ವೀಸಾದಲ್ಲಿ ಬಂದು ಮುಂಬೈನ ನ್ಯೂಯಾರ್ಕ್ ಫಿಲ್ಮ್ ಅಕಾಡಮಿಯಲ್ಲಿ ನಟನೆಯ ತರಬೇತಿ ಪಡೆದಿದ್ದ ಎನ್ನಲಾಗಿದೆ.
ನೈಜೀರಿಯಾದ (NOLLYWOOD) 3 ಚಿತ್ರಗಳಲ್ಲಿ ನಟಿಸಿದ್ದ ಈತ, ಕನ್ನಡದ ಅಣ್ಣಾಬಾಂಡ್, ಪರಮಾತ್ಮ, ತಮಿಳಿನ ಸಿಂಗಂ, ವಿಶ್ವರೂಪಂ ಸೇರಿ 20 ಚಿತ್ರಗಳಲ್ಲಿ ಸಹನಟನಾಗಿ ನಟಿಸಿದ್ದ ಎಂದು ತಿಳಿದುಬಂದಿದೆ.
ಆರೋಪಿಯಿಂದ 8 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್, ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಬ್ಯೂಸಿನೆಸ್ ಮಾಡುವ ವ್ಯಕ್ತಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post