ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬ್ಯಾನಿಯನ್ ಟ್ರೀ ಇವೆಂಟ್ಸ್ ಮತ್ತು ಆದಿತ್ಯ ಬಿರ್ಲಾ ಕ್ಯಾಪಿಟಲ್ ಅವರು ಹೆಸರಾಂತ ಕಲಾವಿದರಿಂದ ‘ತೀನ್ ಪ್ರಹಾರ್’ ಅಪರೂಪದ ರಾಗಗಳನ್ನು ಪ್ರಸ್ತುತ ಪಡಿಸುವ ಸಂಗೀತ ಕಛೇರಿ ಕಾರ್ಯಕ್ರಮವನ್ನು ಏಪ್ರಿಲ್ 17ರ ಶನಿವಾರ ಸಂಜೆ 5:30 ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ನೇರ ಹಾಗೂ ವರ್ಚುಯಲ್ ಮಾದರಿಯಲ್ಲಿ ಏರ್ಪಡಿಸಲಾಗಿದೆ.
ತೀನ್ ಪ್ರಹಾರ್ ಸಂಗೀತ ಕಾರ್ಯಕ್ರಮದಲ್ಲಿ ರಾಜಸ್ಥಾನದ ಹೆಸರಾಂತ ಮಂಗನಿಯಾರ್ ಗಾಯಕ ಮಾಮೆ ಖಾನ್ ಅವರ ಬ್ಯಾಂಡ್ ಜೊತೆಗೆ ಜಾನಪದ ಸಂಗೀತ ರಸದೌತಣ ನೀಡಲಿದ್ದಾರೆ. ಈ ಬಾರಿಯ ವಿಶೇಷವೆಂದರೆ ‘ರಿದಮ್ ಡಿವೈನ್’. ಮೂರು ತಾಳ ವಾದ್ಯದಿಂದ ಕೂಡಿದ ಜುಗಲ್ ಬಂದಿ ಕಾರ್ಯಕ್ರಮವನ್ನು ಮಾಸ್ಟರ್ಸ್ ಪಂಡಿತ್ ಅನಿಂದೋ ಚಟರ್ಜಿ (ತಬಲ), ಪಂಡಿತ್ ಭವಾನಿ ಶಂಕರ್ (ಮೃದಂಗ), ಗಿರಿಧರ್ ಉಡುಪ (ಘಟಂ) ಅವರು ನಡೆಸಿಕೊಡಲಿದ್ದಾರೆ. ಅಲ್ಲದೇ ಅಂತರರಾಷ್ಟ್ರೀಯ ಮನ್ನಣೆ ಪಡೆದ ಅಪ್ರತಿಮ ಸೀತಾರ್ ವಾದಕ ಉಸ್ತಾದ್ ಶುಜಾತ್ ಖಾನ್ ಅವರ ಸಂಗೀತ ಕಛೇರಿಯು ಇರಲಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ ತೀನ್ ಪ್ರಹಾರ್ ಜಾನಪದ, ಶಾಸ್ರ್ತೀಯ ಮತ್ತು ವಿವಿಧ ಸಂಗೀತ ಪ್ರಕಾರಗಳಿಂದ ಕೂಡಿದ ಪುಷ್ಪಗುಚ್ಚದಂತೆ ಸಂಗೀತ ಪ್ರಿಯರನ್ನು ಆಕರ್ಷಿಸುವ ಸಮ್ಮಿಲನವಾಗಿದೆ. ಈ ವರ್ಷ ಕೊರೋನ ಸೋಂಕು ಹಿನ್ನೆಲೆಯಲ್ಲಿ ತೀನ್ ಪ್ರಹಾರ್ ಸಂಗೀತ ಕಾರ್ಯಕ್ರಮವನ್ನು ‘ಮೇರಿ ಕಲಾ ಮೇರಿ ಪೆಹ್ಚಾನ್’ ಎಂಬ ವಿಶೇಷ ಯೋಜನೆಯೊಂದಿಗೆ ನಡೆಸಲಾಗುತ್ತಿದೆ. ಅದರಂತೆ ಭಾರತದ ಜಾನಪದ ಕಲಾವಿದರನ್ನು ಬೆಂಬಲಿಸುವ ಸದುದ್ದೇಶದಿಂದ ಸುಮಾರು 1200 ಜಾನಪದ ಕಲಾವಿದರ ಕುಟುಂಬಗಳಿಗೆ ತೀನ್ ಪ್ರಹಾರ್ ನಿಂದ ಬಂದ ದೇಣೆಗೆಯನ್ನು ನೀಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಚಿನ್ ಮಾನೆ ಮೊ: 9223231359. ಟೀಕೆಟ್ ಗಳು www.bookmyshow.com ನಲ್ಲಿ ಲಭ್ಯವಿದೆ ಎಂದು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















