ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪರಿಸರ, ರಕ್ತದಾನ ಸೇರಿದಂತೆ ಹಲವು ಸೇವಾ ಕಾರ್ಯಕ್ರಮದ ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿರುವ ಪುನೀತ್ ಜಿ ಕೂಡ್ಲೂರು ಇವರ ಸೇವೆಯನ್ನು ಗುರುತಿಸಿ ರಾಜ್ಯ ಮಟ್ಟದ ಸಮಾಜ ಸೇವೆ ಪ್ರಶಸ್ತಿ ಕರ್ನಾಟಕ ಎಕ್ಸಲೆನ್ಸ್ ಇನ್ ಕಮ್ಯೂನಿಟಿ ಡೆವೆಲಪ್ ಮೆಂಟ್ ಆಂಡ್ ಸೋಷಿಯಲ್ ಸರ್ವಿಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸದಾಶಿವನಗರದ ಹೈಡೆ ಪಾರ್ಕ್ ಹೋಟೆಲ್ ನಲ್ಲಿ ನೆಡೆದ ಕರ್ನಾಟಕ ಐಕಾನ್ ಎಕ್ಸೆಲೆಂಟ್ ಅವಾರ್ಡ್ -2025ರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪುನೀತ್ ಜಿ ಕೂಡ್ಲೂರು ರವರು ತಮ್ಮ ಸಾಫ್ಟ್‌ವೇರ್ ವೃತ್ತಿಯೊಂದಿಗೆ ವಿದ್ಯಾಸ್ಪಂದನ ಎಂಬ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿ ಪ್ರತಿ ವರ್ಷ 500ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಸಹಾಯ ಮಾಡುತ್ತಿದ್ದಾರೆ ಹಾಗೂ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರ ಸ್ಥಾಪಿಸಿ ಅದರಲ್ಲಿ ಹಲವು ವಿದ್ಯಾರ್ಥಿಗಳಿಗೆ ಶ್ಲೋಕ, ಸಂಸ್ಕಾರ ತರಗತಿಗಳನ್ನು ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಡಾ. ಅಂಜನಪ್ಪ, ಪ್ರಕೃತಿ ಪ್ರಸನ್ನ , ಪೂಜಾ ಎನ್ , ಡಾ. ಪೃಥು ಪಿ ಅದ್ವೈತ್, ಶೃತಿ ರಾಕೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post