ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ಯಾಂಡಲ್’ವುಡ್ #Sandalwood ನಟ ರಕ್ಷಿತ್ ಶೆಟ್ಟಿ #Rakshit Shetty ಅವರು ಅನುಮತಿ ಇಲ್ಲದೇ ಹಳೆಯ ಹಾಡುಗಳನ್ನು ತಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ಎಂದು ಅವರ ವಿರುದ್ಧ ಎಫ್’ಐಆರ್ ದಾಖಲಿಸಲಾಗಿದೆ.
ಕಾಪಿರೈಟ್ ಉಲ್ಲಂಘನೆ ಆರೋಪದಡಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಂಟಿಆರ್ ಮ್ಯೂಸಿಕ್ ಪಾಲುದಾರರಾದ ನವೀನ್ ಕುಮಾರ್ ಎನ್ನುವವರ ದೂರಿನ ಆಧಾರದಲ್ಲಿ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್’ಐಆರ್ ದಾಖಲಿಸಲಾಗಿದೆ.
ಬ್ಯಾಚುಲರ್ ಪಾರ್ಟಿ’ #Bachular Party ಸಿನಿಮಾದಲ್ಲಿ ಬಳಕೆ ಆದ ನ್ಯಾಯ ಎಲ್ಲಿದೆ..’ ಹಾಗೂ ಗಾಳಿಮಾತು..’ ಚಿತ್ರದ ಹಾಡುಗಳನ್ನು ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುರ್ಲ ಪಾರ್ಟಿ’ಯಲ್ಲಿ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
Also read: ಶಿವಮೊಗ್ಗ ಸೇರಿ ಈ ಜಿಲ್ಲೆಗಳಲ್ಲಿ 2-3 ದಿನ ರೆಡ್ ಅಲರ್ಟ್ | ಜುಲೈ 19ರವರೆಗೂ ಭಾರೀ ಮಳೆ
2024ರ ಮಾರ್ಚïನಲ್ಲಿ ಬ್ಯಾಚುಲರ್ ಪಾರ್ಟಿ ಚಿತ್ರ ರಿಲೀಸ್ ಆಗಿದೆ. ಬ್ಯಾಚುಲರ್ ಪಾರ್ಟಿ’ ಸಿನಿಮಾ ಗಮನಿಸಿದಾಗ 2 ಚಿತ್ರಗಳ ಹಾಡು ಬಳಕೆ ಆಗಿತ್ತು. ಹಕ್ಕುಸ್ವಾಮ್ಯ, ಪ್ರಸಾರದ ಹಕ್ಕನ್ನು ಖರೀದಿಸದೆ ಹಾಡುಗಳ ಬಳಕೆ ಮಾಡಿದ್ದಾಗಿ ನವೀನ್ ಆರೋಪಿಸಿದ್ದಾರೆ.
ಪೊಲೀಸರು ಎಫ್’ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ನಟ ರಕ್ಷಿತ್ ಶೆಟ್ಟಿಗೆ ಯಶವಂತಪುರ ಪೊಲೀಸರಿಂದ ಮೌಖಿಕ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post