ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಖಿಲ ಹವ್ಯಕ ಮಹಾಸಭೆಯ Havyaka Mahasabhe ನೇತೃತ್ವದಲ್ಲಿ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಜು.17ರಂದು ಉಚಿತ ವೈದ್ಯಕೀಯ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.
ಶ್ರೀಭಾರತೀ ಆರೋಗ್ಯಧಾಮ, ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಸುನೇತ್ರ ಕಣ್ಣಿನ ಆಸ್ಪತ್ರೆ, ಶ್ರೀ ರಕ್ಷಾ ಲ್ಯಾಬ್ಸ್, ಲಯನ್ಸ್ ಕ್ಲಬ್ ಹಾಗೂ ಆಸ್ಟರ್ ಆರ್.ವಿ ಆಸ್ಪತ್ರೆಗಳ ಸಹಯೋಗದೊಂದಿಗೆ ವೈದ್ಯಕೀಯ ಶಿಬಿರ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮಹಾಸಭೆಯ ಉಪಾಧ್ಯಕ್ಷ ಕೆಕ್ಕಾರು ಶ್ರೀಧರ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಿಬಿರದಲ್ಲಿ ಎಲ್ಲ ರೀತಿಯ ರೋಗಗಳಿಗೆ ಉಚಿತ ಸಲಹೆ, ಚಿಕಿತ್ಸೆ ನೀಡಲಾಗುವುದು. ರಕ್ತದ ಪರೀಕ್ಷೆ, ಸಕ್ಕರೆ ಕಾಯಿಲೆ, Echo Scan, ECG, BP, ಕಣ್ಣು, ಕಿವಿ ಮೂಗು ಗಂಟಲು ಬೇನೆ, ಕ್ಯಾನ್ಸರ್, Thyroid, ಸಂದಿವಾತ, ಮುಟ್ಟಿನ ತೊಂದರೆ, ಚರ್ಮ ಕಾಯಿಲೆ, ದಮ್ಮು,ಕೆಮ್ಮು, ಅಲರ್ಜಿ ಮುಂತಾದವುಗಳನ್ನು ಪರೀಕ್ಷಿಸಲಾಗುತ್ತದೆ.
Also read: ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ: ಸೂಕ್ತ ತನಿಖೆಗೆ ಎಎಪಿ ಆಗ್ರಹ
ಲಯನ್ಸ್ ಕ್ಲಬ್ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಲಿದ್ದು, ಆಸಕ್ತರು ರಕ್ತದಾನ ಮಾಡಲು ಅವಕಾಶವಿದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹವ್ಯಕ ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ್ ಸಂಪ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಚಾಲಕ ಡಾ. ಶ್ರೀಪಾದ ಹೆಗಡೆ (9448018654)ಯವರನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post