ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡದ ಪವರ್ ಸ್ಟಾರ್, ದಿವಂಗತ ಡಾ. ಪುನೀತ್ ರಾಜಕುಮಾರ್ Puneeth Rajkumar ಅವರ ಕನಸಿನ ಗಂಧದ ಗುಡಿ Gandhada gudi ಸಾಕ್ಷ್ಯಚಿತ್ರ ಅಕ್ಟೋಬರ್ 28ರಂದು ತೆರೆಗೆ ಬರಲಿದೆ.
ಈ ಕುರಿತಂತೆ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ Ashwini Puneeth Rajkumar ಅವರು ಸ್ವತಃ ಟ್ವೀಟ್ ಮಾಡಿದ್ದು, ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ ಎಂದಿದ್ದಾರೆ.
ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರ ಮುಂದೆ ತರುವ ಸಲುವಾಗಿ ಅಪ್ಪು ಬಹಳ ಶ್ರಮಪಟ್ಟು ಈ ಡಾಕ್ಯುಮೆಂಟರಿಯನ್ನು ನಿರ್ಮಿಸಿ ಕನ್ನಡ ರಾಜ್ಯೋತ್ಸವ ಸಮಯದಲ್ಲಿ ಗಂಧದ ಗುಡಿ ಹೆಸರಲ್ಲಿ ಬಿಡುಗಡೆ ಮಾಡುವ ಇಚ್ಛೆ ಹೊಂದಿದ್ದರು. ದುರಾದೃಷ್ಠವಶಾತ್ ಅದಕ್ಕೂ ಮುನ್ನವೇ ಪುನೀತ್ ನಿಧನರಾದ ಪರಿಣಾಮ ಅವರ ಆಸೆಯಂತೆ ರಾಜ್ಯೋತ್ಸವ ಸಂದರ್ಭದಲ್ಲಿ ಟ್ರೈಲರನ್ನು ಬಿಡುಗಡೆ ಮಾಡಲಾಗಿತ್ತು.
Also read: ಪತ್ನಿ ಮಂಗಳಸೂತ್ರ ತೆಗೆದಿಟ್ಟರೆ ಅದು ಪತಿಗೆ ನೀಡುವ ಅತಿ ಮಾನಸಿಕ ಕ್ರೌರ್ಯ: ಮದ್ರಾಸ್ ಹೈಕೋರ್ಟ್
ಗಂಧದಗುಡಿ ಡಾಕ್ಯುಮೆಂಟರಿಯನ್ನು ಥಿಯೇಟರ್‌ನಲ್ಲೇ ಪ್ರೇಕ್ಷಕರಿಗೆ ತೋರಿಸಬೇಕು ಎನ್ನುವುದು ಅಪ್ಪು ಪ್ಲ್ಯಾನ್ ಆಗಿತ್ತು. ಅದಕ್ಕಾಗಿ ಅವರು ಅನೇಕ ದಿನಗಳ ಕಾಲ ಕಾಡು ಮೇಡು ಸುತ್ತಿದ್ದರು. ಸಮುದ್ರದಾಳಕ್ಕೂ ಇಳಿದಿದ್ದರು. ಮುರುಡೇಶ್ವರ ಸೇರಿದಂತೆ ಹಲವು ಕಡೆ ಈ ಡಾಕ್ಯುಮೆಂಟರಿಯ ಚಿತ್ರೀಕರಣ ಮಾಡಿದ್ದರು. ಉನ್ನತ ತಂತ್ರಜ್ಞಾನ ಬಳಸಿ ಸಿನಿಮಾದ ಮಾದರಿಯಲ್ಲೇ ಶೂಟ್ ಆಗಿರುವುದರಿಂದ ಒಂದು ಗಂಟೆಗೂ ಅಧಿಕ ಸಮಯದ ಡಾಕ್ಯುಮೆಂಟರಿ ಇದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post