ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಮಿಳು ಚಿತ್ರರಂಗದ ಮಾಸ್ ಡೈರೆಕ್ಟರ್ ವೆಟ್ರಿಮಾರನ್ ನಿರ್ದೇಶನದ ವಿಡುದಲೈ ಸಿನಿಮಾ ಝೀ5 ಒಟಿಟಿಯಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ.
ವಿಜಯ್ ಸೇತುಪತಿ, ಸೂರಿ, ಕನ್ನಡದ ಸರ್ದಾರ್ ಸತ್ಯ, ಪ್ರಕಾಶ್ ರೈ, ಗೌತಮ್ ಮೆನನ್ ಸೇರಿದಂತೆ ಹಲವರು ನಟಿಸಿರುವ ಈ ಚಿತ್ರ ಈಗ ಕನ್ನಡದಲ್ಲಿಯೂ ಲಭ್ಯವಿದೆ.
ಇತ್ತೀಚೆಗೆ ಪರಭಾಷೆ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದ್ದು, ಪ್ರೇP್ಷÀಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಈಗ ವಿಡುದಲೈ ಸಿನಿಮಾ ಕೂಡ ಕನ್ನಡದಲ್ಲಿ ನೋಡುವ ಅವಕಾಶ ದೊರೆತಿದೆ. ಮೂಲ ತಮಿಳಿನ ಈ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಝೀ5 ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ.
Also read: ಹಿರಿತನ ನೋಡಿ ಮಂತ್ರಿ ಸ್ಥಾನ ನೀಡಿ: ಶಾಸಕ ಬಿ.ಕೆ. ಸಂಗಮೇಶ್ ಒತ್ತಾಯ
ಆರ್.ಎಸ್. ಇನ್ಫೋಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಎಸ್. ಎಲ್ರೆಡ್ ಕುಮಾರ್ ಅದ್ಧೂರಿಯಾಗಿ ವಿಡುದಲೈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಾನ್ಸೆö್ಟಬಲ್ ಹಾಗೂ ಶಸಸ್ತç ಕ್ರಾಂತಿಕಾರಿ ಹೋರಾಟಗಾರನೊಬ್ಬನ ನಡುವಿನ ಕತೆಯನ್ನು ಒಳಗೊಂಡ ಈ ಚಿತ್ರ ಎರಡು ಭಾಗದಲ್ಲಿ ತೆರೆಗೆ ಬರ್ತಿದೆ. ಮೊದಲ ಪಾರ್ಟ್’ಗೆ ಈಗಾಗ್ಲೇ ಭಾರೀ ರೆಸ್ಪಾನ್ಸ್ ಸಿಕ್ಕಿದ್ದು, ಸದ್ಯ ಎರಡನೇ ಭಾಗದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post