ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜರಾಜೇಶ್ವರಿನಗರದ ಬೆಮೆಲ್ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಗಸ್ಟ್ 10, 11 ಮತ್ತು 12ರಂದು ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆ ಪ್ರಯುಕ್ತ ಪ್ರತಿದಿನ ಬೆಳಗ್ಗೆ ಭಜನಾ ಕಾರ್ಯಕ್ರಮ ಹಾಗೂ ಸಂಜೆ 6*30ಕ್ಕೆ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಆಗಸ್ಟ್ 10, ಭಾನುವಾರ ಸಂಜೆ 6-30ಕ್ಕೆ “ಹರಿದಾಸ ವಾಣಿ”. ಗಾಯನ : ಸಂಗೀತ ವಿದುಷಿಯರಾದ ದಿವ್ಯಾ ಗಿರಿಧರ್ ಹಾಗೂ ನಂದಿನಿ ಗುಜಾರ್. ವಿದ್ವಾನ್ ಜಯರಾಮಾಚಾರ್ (ಕೀಬೋರ್ಡ್), ವಿದ್ವಾನ್ ರಾಜೇಂದ್ರ ನಾಕೋಡ್ (ತಬಲಾ), ವಿದ್ವಾನ್ ಶ್ರೀ ಶಿವಲಿಂಗ್ ರಾಜಪೂರ್ (ಕೊಳಲು), ವಿದ್ವಾನ್ ಶ್ರೀ ಪದ್ಮನಾಭ ಕಾಮತ್ (ರಿದಂಪ್ಯಾಡ್).
ಆಗಸ್ಟ್ 11, ಡಾ. ಜಯಂತಿ ಕುಮರೇಶ್ ಅವರಿಂದ “ವೀಣಾ ವಾದನ”, ವಿದ್ವಾನ್ ಶ್ರೀ ಕುಮರೇಶ್ ಅವರಿಂದ ಪಿಟೀಲು ವಾದನ.
ಆಗಸ್ಟ್ 12, ಬೆಳಗ್ಗೆ 9-30ಕ್ಕೆ ರಮಾ ಪ್ರಸನ್ನ ಮತ್ತು ರಾಹುಲ್ ರಾಮನ್ ರವರಿಂದ “ವೀಣಾವಾದನ”. ಸಂಜೆ 6-30ಕ್ಕೆ ಮೇಧಾ ವಿದ್ಯಾಭೂಷಣ್ ಮತ್ತು ಸಂಗಡಿಗರಿಂದ “ದಾಸವಾಣಿ”.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post