ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಮಲೆನಾಡು ಭಾಗದಲ್ಲಿ ರೈತರು ಕಲ್ಲಂಗಡಿ, ಅನಾನಸ್, ಶುಂಠಿ, ಕಾಳು ಮೆಣಸು ಇನ್ನಿತರ ಬೆಳೆಗಳನ್ನು ಏತೇಚ್ಛವಾಗಿ ಬೆಳೆಯುತ್ತಿದ್ದು, ಇವುಗಳಿಂದ, ಜೀವನ ಶೈಲಿ ಪೇಯ (ವೈನ್) ತಯಾರಿಕಾ ಘಟಕ ಸ್ಥಾಪಿಸುವಂತೆ ಶಾಸಕ ಎಚ್. ಹಾಲಪ್ಪ ಮನವಿ ಮಾಡಿದ್ದಾರೆ.
ಈ ಕುರಿತಂತೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಹಾಲಪ್ಪನವರು, ಈ ಭಾಗದಲ್ಲಿ ಘಟಕ ಸ್ಥಾಪಿಸುವುದರಿಂದ ಉದ್ಯಮಿಗಳಿಗೆ ಪ್ರೋತ್ಸಾಹ ದೊರೆಯುವ ಜೊತೆಯಲ್ಲಿ ರೈತರ ಬೆಳೆಗಳಿಗೆ ಬೇಡಿಕೆಯೂ ಸಹ ಹೆಚ್ಚುತ್ತದೆ ಎಂದು ಮನವಿ ಮಾಡಿದ್ದಾರೆ.

ಸಾಗರದ ಸುಪ್ರಿಮ್ ರೈಸ್ ಮಿಲ್ ನ ಗಿರೀಶ್ ಪ್ರಭು, ರಾಜೇಂದ್ರ ಪೈ ಉಪಸ್ಥಿತರಿದ್ದರು.
ರೈತರು ಆತಂಕ ಪಡುವ ಅಗತ್ಯವಿಲ್ಲ
ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯದೆ ಅದಿಸೂಚಿತ ಅರಣ್ಯ ಪ್ರದೇಶವನ್ನು ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ಮಾಡಿರುವುದನ್ನು ಹೈಕೋರ್ಟ್ ರದ್ದು ಪಡಿಸಿದ್ದು, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರನ್ನು ಭೇಟಿಯಾಗಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಕೈಗೊಳ್ಳ ಬೇಕಾದ ಕಾನೂನು ಕ್ರಮಗಳ ಬಗ್ಗೆ ಹಾಲಪ್ಪನವರು ಚರ್ಚಿಸಿದರು.
ಈ ಆದೇಶದಿಂದ ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ. ಸೆಕ್ಷನ್ 2 ಅಡಿಯಲ್ಲಿ ಮತ್ತೊಮ್ಮೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿ ಡಿನೋಟಿಫಿಕೇಷನ್ ಮಾಡಿ ಹಕ್ಕು ಪತ್ರ ಪಡೆಯಬಹುದು ಎಂದು ಅಡ್ವಕೇಟ್ ಜನರಲ್ ಮಾಹಿತಿ ನೀಡಿದರು.
ಶಾಸಕರಾದ ಆರಗ ಜ್ಞಾನೇಂದ್ರ, ಬೆಳ್ಳೂರು ತಿಮ್ಮಪ್ಪ, ಕಾಳನಾಯ್ಕ್ ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post