ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವ್ಯಕ್ತಿಯೊಬ್ಬರು ತೀವ್ರ ಹೃದಯಾಘಾತಕ್ಕೆ #Heartattack ಒಳಗಾಗಿ ನಡು ರಸ್ತೆಯಲ್ಲಿ ನರಳುತ್ತಾ, ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಸುತ್ತಲೂ ಇದ್ದ ಜನ ನೆರವಾಗದೇ ಅಮಾನವೀಯವಾಗಿ ನಡೆದುಕೊಂಡಿದ್ದು, ಆ ವ್ಯಕ್ತಿ ನರಳಿ ನರಳಿ ಪ್ರಾಣಬಿಟ್ಟ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ವೆಂಕಟರಮಣನ್(34) ಎಂದು ಗುರುತಿಸಲಾಗಿದೆ.
ಬನಶಂಕರಿ ಬಳಿಯ ಕದಿರೇನಹಳ್ಳಿ ಮುಖ್ಯರಸ್ತೆಯಲ್ಲಿ ಬೈಕ್’ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದೆ. ಇದರಿಂದ ನಡು ರಸ್ತೆಯಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದರು. ಜೊತೆಯಲ್ಲಿದ್ದ ಅವರ ಪತ್ನಿ ಸಹಾಯಕ್ಕಾಗಿ ಕೈ ಕೈ ಮುಗಿದು ಅಂಗಲಾಚುತ್ತಿದ್ದರು. ಆದರೆ, ನೋಡಕೊಂಡು ಸುಮ್ಮನೆ ಹೋಗುತ್ತಿದ್ದ ಜನರು ಯಾರೂ ಸಹ ಸಹಾಯಕ್ಕೆ ಬಾರಲಿಲ್ಲ. ಪರಿಣಾಮವಾಗಿ ವ್ಯಕ್ತಿ ನರಳಿ ನರಳಿ ರಸ್ತೆಯಲ್ಲೇ ಪ್ರಾಣ ಬಿಟ್ಟಿದ್ದಾರೆ.
ಚಲಿಸುತ್ತಿದ್ದ ಬೈಕ್’ನಲ್ಲಿಯೇ ವ್ಯಕ್ತಿಗೆ ಹೃದಯಾಘಾತವಾಗಿದೆ. ರಸ್ತೆಯಲ್ಲಿ ಬಿದ್ದು ಆತ ಒz್ದÁಟ ನಡೆಸುತ್ತಿದ್ದರೆ, ಗಂಡನನ್ನು ಉಳಿಸಿಕೊಡಿ ಎಂದು ಪತ್ನಿ ರಸ್ತೆಗೆ ಹೋಗುವ ಕಾರು, ಬೈಕ್, ಗೂಡ್ಸ್ ವಾಹನ ಎಲ್ಲದಕ್ಕೂ ಸಹಾಯಕ್ಕಾಗಿ ಕೈ ಹಾಕಿದ್ದಾರೆ. ಆದರೆ, ಯಾರೂ ಕೂಡ ತಮ್ಮ ವಾಹನ ನಿಲ್ಲಿಸಲಿಲ್ಲ. ಯಾರೂ ಸಹಾಯಕ್ಕೆ ಬಾರದೇ ವ್ಯಕ್ತಿ ಸಾವಿನ ಕೊನೆಯ P್ಷÀಣದಲ್ಲಿ ಒದ್ದಾಟ ಅನುಭವಿಸಿ ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.
ವೆಂಕಟರಮಣನ್ ಅವರಿಗೆ ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಹಾರ್ಟ್ ಅಟ್ಯಾಕ್ ಆದ ಸೂಚನೆ ಸಿಕ್ಕಿತ್ತು. ಆಂಬ್ಯುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಬೈಕ್’ನಲ್ಲೇ ದಂಪತಿ ಆಸ್ಪತ್ರೆಗೆ ಹೋಗುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ಬೈಕ್’ನಲ್ಲೇ ಮತ್ತೊಮ್ಮೆ ತೀವ್ರ ಹೃದಯಾಘಾತ ಸಂಭವಿಸಿದೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ವೆಂಕಟರಮಣನ್ ಕುಟುಂಬಸ್ಥರು, ಅವರ ಎರಡೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆದರೆ, ಒಬ್ಬ ವ್ಯಕ್ತಿ ಹೃದಯಾಘಾತದಿಂದ ನಡು ರಸ್ತೆಯಲ್ಲಿ ವಿಲವಿಲ ನರಳುತ್ತಾ, ಅವರ ಪತ್ನಿ ಅಂಗಲಾಚಿದರೂ ಸಹಾಯಕ್ಕೆ ಬಾರದ ಜನರ ಮನಃಸ್ಥಿತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















