ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿಯ ಕೆಆರ್ ಪುರಂ ಸಮೀಪದಲ್ಲಿ ವೃದ್ಧೆಯೊಬ್ಬರನ್ನು ಕೈ, ಕಾಲು ಕತ್ತರಿಸಿ ಅತ್ಯಂತ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ 24 ಗಂಟೆಯೊಳಗೇ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹತ್ಯೆಗೀಡಾದ ವೃದ್ಧೆಯನ್ನು ನಿಸರ್ಗ ಲೇಔಟ್ ನಿವಾಸಿ ಸುಶೀಲಮ್ಮ(76) ಎಂದು ಗುರುತಿಸಲಾಗಿದ್ದು, ಈಕೆ ಬಿಜೆಪಿಯ ಸಕ್ರಿಯ ಕಾರ್ಯಕರ್ತೆಯಾಗಿದ್ದರು ಎಂದು ಹೇಳಲಾಗಿದೆ.
ಸುಶೀಲಮ್ಮ ಅವರನ್ನು ಭೀಕರವಾಗಿ ಹತ್ಯೆ ಮಾಡಿ, ಶವವನ್ನು ಐದು ತುಂಡುಗಳಾಗಿ ಕತ್ತರಿಸಿ, ಪ್ಲಾಸ್ಟಿಕ್ ಡ್ರಂನಲ್ಲಿ ತುಂಬಲಾಗಿತ್ತು. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಡ್ರಮ್’ನಿಂದ ದುರ್ವಾಸನೆ ಬರಲಾರಂಭಿಸಿದ ಹಿನ್ನೆಲೆಯಲ್ಲಿ ಸಮೀಪದ ನಿವಾಸಿಗಳು ಅದನ್ನು ಪರಿಶೀಲಿಸಿದಾಗ ದೇಹದ ಮೇಲ್ಭಾಗವು ಹಾಗೇ ಇದ್ದು, ಕೈಗಳು ಮತ್ತು ಕಾಲುಗಳನ್ನು ನಿಖರವಾಗಿ ಕತ್ತರಿಸಲ್ಪಟ್ಟಿದ್ದವು ಎಂದು ವರದಿಯಾಗಿದೆ.
Also read: ಮುಸ್ಲೀಮರಿಗೆ ಮತ್ತೆ ಹಿನ್ನಡೆ | ಜ್ಞಾನವಾಪಿಯಲ್ಲಿ ಹಿಂದೂಗಳಿಂದ ಪೂಜೆ ತಡೆಗೆ ಹೈಕೋರ್ಟ್ ನಿರಾಕರಣೆ
ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲದ ಮೃತ ಸುಶೀಲಮ್ಮ ಅವರು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಮೃತರಿಗೆ ಓರ್ವ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಸ್ತಿ ಮಾರಾಟದಲ್ಲಿ ಬಂದ ಹಣದಲ್ಲಿ ಮನೆ ಭೋಗ್ಯಕ್ಕೆ ಪಡೆದು ಮಕ್ಕಳಿಂದ ಪ್ರತ್ಯೇಕವಾಗಿ ಅಜ್ಜಿ ವಾಸವಾಗಿದ್ದರು. ಅದೇ ಕಟ್ಟಡದಲ್ಲಿ ಅವರ ಕಿರಿಯ ಪುತ್ರಿ ಮತ್ತು ಮಗಳು ಹಾಗೂ ಅಜ್ಜಿ ಮನೆ ಸಮೀಪದಲ್ಲೇ ಅವರ ಮಗ ಕೂಡ ವಾಸವಾಗಿದ್ದರು ಎನ್ನಲಾಗಿದೆ.
ಇಬ್ಬರ ಬಂಧನ
ಪ್ರಕರಣ ಸಂಬಂಧ ಮೃತರ ಪರಿಚಿತನಾಗಿದ್ದ ದಿನೇಶ್ ಹಾಗೂ ಆತನ ಸಹಚರನನ್ನು ಬಂಧಿಸಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post