ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನವದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ರಾಜ್ಯ ರಾಜಧಾನಿಯಲ್ಲಿ ರಣ ಭಯಾನಕ ಹತ್ಯೆ ನಡೆದಿದ್ದು, ಸಿಲಿಕಾನ್ ಸಿಟಿ ಬೆಚ್ಚಿ ಬಿದ್ದಿದೆ.
ಹೌದು… ನಗರದ ಹೃದಯಭಾಗವಾದ ವೈಯಾಲಿಕಾವಲ್ ಮುನೇಶ್ವರ ಬ್ಲಾಕ್’ನಲ್ಲಿನ ಮನೆಯೊಂದರ ಮೊದಲ ಮಹಡಿಯಲ್ಲಿ ಈ ಘೋರ ಘಟನೆ ನಡೆದಿದ್ದು, ಯುವತಿಯೊಬ್ಬಳನ್ನು ಹತ್ಯೆ ಮಾಡಿ ತುಂಡುತುಂಡಾಗಿ ಕತ್ತರಿಸಿ, ಫ್ರಿಡ್ಜ್’ನಲ್ಲಿ ಇರಿಸಿರುವುದು ಪತ್ತೆಯಾಗಿದೆ.
ಈ ಕುರಿತಂತೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಯುವತಿಯನ್ನು ಕೊಲೆ ಮಾಡಿ ಬಳಿಕ ಮೃತದೇಹವನ್ನು ಫ್ರಿಡ್ಜ್’ನಲ್ಲಿ ಇಟ್ಟಿರುವ ಘಟನೆ ಪತ್ತೆಯಾಗಿದೆ. ಘಟನೆ ನಡೆದು ಸುಮಾರು ನಾಲ್ಕೈದು ದಿನಗಳಾಗಿದ್ದು, ಮೃತ ಯುವತಿಯ ಗುರುತು ಪತ್ತೆಯಾಗಿದೆ.
ಹೊರ ರಾಜ್ಯದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ತನಿಖೆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವೆ ಎಂದಿದ್ದಾರೆ.
ವರದಿಯ ಪ್ರಕಾರ, ಮೃತ ಯುವತಿ ಮೂರು ತಿಂಗಳ ಹಿಂದೆಯಷ್ಟೇ ಈ ಮನೆಗೆ ಬಂದಿದ್ದಳು. ಆಕೆಯ ತಾಯಿ ಹಾಗೂ ಸಹೋದರಿ ಇಂದು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹತ್ಯೆ ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇನ್ನು, ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ದೇಹದ ಭಾಗಗಳನ್ನು ರವಾನಿಸಿದ್ದಾರೆ. ತುಂಡು ತುಂಡಾಗಿರುವ ದೇಹದ ಭಾಗಗಳನ್ನು ಮೊದಲಿಗೆ ಜೋಡಿಸಿಕೊಂಡು, ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Also read: ವಾಲಿಬಾಲ್ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್ ತಂಡ ಸತತ ಎರಡನೇ ಬಾರಿಗೆ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ
Discussion about this post