ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಕರ್ಫ್ಯೂ ಜಾರಿಗೊಳಿಸುವುದರಿಂದ ಹೋಟೆಲ್ ಉದ್ಯಮಕ್ಕೆ ತೊಂದರೆಯಾಗುತ್ತಿದ್ದು, ಮುಂದಿನ ವಾರದಿಂದ ನೈಟ್ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂವನ್ನು ಬಹಿಷ್ಕರಿಸಲು ಹೋಟೆಲ್, ಬಾರ್ ಮತ್ತು ಕಲ್ಯಾಣ ಮಂಟಪಗಳ ಮಾಲಿಕರ ಸಂಘಗಳ ಒಕ್ಕೂಟ ತೀರ್ಮಾನಿಸಿದೆ.
ಕರ್ಫ್ಯೂ ಜಾರಿ ಬಗ್ಗೆ ಹೊಟೇಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೋವಿಡ್ ನಿಯಮಾವಳಿಗಳನ್ನೆಲ್ಲ ಪಾಲನೆ ಮಾಡಿದರೂ ಬಂದ್ ಮಾಡಿಸಲಾಗುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಹೋಟೆಲ್ ಉದ್ಯಮಕ್ಕೆ ಸರ್ಕಾರದ ನಿಯಮಗಳಿಂದ ಅನ್ಯಾಯವಾಗುತ್ತಿದೆ. ಹಾಗೂ ಕರ್ಫ್ಯೂ ಹೇರಿಕೆಯಿಂದ ಕೋವಿಡ್ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.
ವಾರಾಂತ್ಯದ ವ್ಯಾಪಾರ ವಹಿವಾಟನ್ನೇ ನಂಬಿಕೊಂಡು ಉದ್ಯಮ ನಡೆಸುತ್ತಿರುವ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಕಳೆದ ಎರಡು ಅಲೆಗಳ ಪರಿಣಾಮ ಸಂಕಷ್ಟದಲ್ಲಿದ್ದಾರೆ. ಈಗ ಪುನಃ ಲಾಕ್‌ಡೌನ್, ಕರ್ಫ್ಯೂ ಜಾರಿಮಾಡುವುದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಸಾಲ ಇದೆ, ಬಾಡಿಗೆ ಕಟ್ಟಬೇಕು, ನಮ್ಮ ಜೀವ ಉಳಿಸಿ ಎಂದು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post