ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದ್ವೇಷದ ವಿರುದ್ಧ ಮತ ನೀಡಿvನೆ ಹಾಗೂ ಬದಲಾವಣೆಗಾಗಿ ಮತ ನೀಡಿದ್ದೇನೆ ಎಂದು ನಟ ಪ್ರಕಾಶ್ ರಾಜ್ #Prakash Raj ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮತದಾನ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ದ್ವೇಷದ ವಿರುದ್ಧ ಹಾಗೂ ಬದಲಾವಣೆಗಾಗಿ ಮತ ನೀಡಿದ್ದು, ನಾನು ಮತ ಹಾಕಿದ ವ್ಯಕ್ತಿ ಪ್ರತಿನಿಧಿಯಾಗಿ ಸಂಸತ್ತಿನಲ್ಲಿ ನನ್ನ ಧ್ವನಿಯಾಗಲಿದ್ದಾರೆ ಎಂದು ನಂಬಿದ್ದೇನೆ ಎಂದಿದ್ದಾರೆ.
ವೀಡಿಯೋಗೆ ನೀಡಿದ ಶೀರ್ಷಿಕೆಯಲ್ಲಿ ಅವರು ನಾನು ಮತದಾನ ಮಾಡಿದ್ದೇನೆ. ದಯವಿಟ್ಟು ಹೋಗಿ ಮತದಾನ ಮಾಡಿ ಜಸ್ಟ್ ಆಸ್ಕಿಂಗ್ ಸೇವ್ ಡೆಮಾಕ್ರೆಸಿ ಸೇವ್ ಇಂಡಿಯಾ ಎಂದು ಬರೆದುಕೊಂಡಿದ್ದಾರೆ.
Also read: ನನ್ನ ಚಿಕ್ಕಪ್ಪ ಮಾಡಿದ ಕೆಲಸ ತಿಳಿಸಲು ಕೊರಿಯರ್ ಗರ್ಲ್ ಆಗಿ ಕೆಲಸ ಮಾಡಿದ್ದೀನಿ: ಡಿಕೆಶಿ ಪುತ್ರಿ ಐಶ್ವರ್ಯಾ
ಸಂಸತ್ತಿನಲ್ಲಿ ನನ್ನ ಧ್ವನಿಯಾಗಬಲ್ಲರು ಎಂದು ನಾನು ನಂಬುವ ವ್ಯಕ್ತಿಗೆ ಮತ ಹಾಕಿದ್ದೇನೆ. ನನ್ನಂತೆಯೇ ಎಲ್ಲರೂ ಮತದಾನ ಮಾಡಿ. ಮತದಾನ ಮಾಡುವ ಮೂಲಕ ಬದಲಾವಣೆ ತನ್ನಿ. ಎಲ್ಲರನ್ನೂ ಪ್ರೀತಿಸುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post