ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವೆಸ್ಟ್ ಎಂಡ್ ಹೋಟೆಲ್’ನಲ್ಲಿ ಸೋನಿಯಾಗಾಂಧಿ ಅವರು ಊಟಕ್ಕೆ ಕರೆದಿದ್ದರು. ಅದಕ್ಕಾಗಿ ಹೋಗಿದ್ದೆ. ಇದರಲ್ಲಿ ತಪ್ಪೇನಿದೆ ಎಂದು ಸ್ಪೀಕರ್ ಯು.ಟಿ. ಖಾದರ್ UTKhadar ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದಲ್ಲಿ ಮಹಾಘಟಬಂಧನ್ ಸಭೆ ನಡೆದ ವೇಳೆ ಸೋನಿಯಾ ಗಾಂಧಿ ಆಯೋಜಿಸಿದ್ದ ಡಿನ್ನರ್ ಪಾರ್ಟಿಗೆ ಖಾದರ್ ಹೋಗಿದ್ದರು. ಈ ವಿಚಾರವನ್ನು ಕಲಾಪದಲ್ಲಿ ಬಜೆಟ್ ಮೇಲೆ ಚರ್ಚೆ ನಡೆಯುವ ವೇಳೆ ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ನೀವು ಸೋನಿಯಾ ಗಾಂಧಿ ಮೀಟ್ ಮಾಡಿದ್ದಿರಂತೆ, ಡಿನ್ನರ್ ಪಾರ್ಟಿಗೆ ಹೋಗಿದ್ದಿರಂತೆ ಎಂದು ಸ್ಪೀಕರ್’ಗೆ ಕೇಳಿದರು. ಈ ಸ್ಥಾನದಲ್ಲಿದ್ದೂ ಡಿನ್ನರ್ ಪಾರ್ಟಿಗೆ ಹೋಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ನಾನೂ ಕೂಡ ಮನುಷ್ಯ, ನೀವು ಕರೆದರೂ ಊಟಕ್ಕೆ ಬರುತ್ತೇನೆ ಎಂದರು. ಮುಖ್ಯಮಂತ್ರಿಯವರು ನಿನ್ನೆ ರಾತ್ರಿ ಔತಣಕೂಟಕ್ಕೆ ಕರೆದಿದ್ದರು. ಆದ್ದರಿಂದ ವೆಸ್ಟ್ ಎಂಡ್ ಹೊಟೇಲ್’ಗೆ ಹೋಗಿz್ದೆ. ಅದರಲ್ಲಿ ಶಿಷ್ಟಾಚಾರ ಉಲ್ಲಂಘನೆ ಪ್ರಶ್ನೆ ಇಲ್ಲ ಎಂದು ತಿಳಿಸಿದರು.
Also read: ನಗರಾಭಿವೃದ್ಧಿಯ ಶೇಕಡಾವಾರು ಅನುದಾನ ಹೆಚ್ಚಳಕ್ಕೆ ಶಾಸಕ ಚನ್ನಬಸಪ್ಪ ಮನವಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post