ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಬೆಂಗಳೂರು |
ಬಡವರ ಕಲ್ಯಾಣ ಹಾಗೂ ನಗರಾಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಈಗ ನೀಡಲಾಗುತ್ತಿರುವ ಶೇ.7.25ರಷ್ಟು ಅನುದಾನವನ್ನು ಶೇ.15ಕ್ಕೆ ಏರಿಕೆ ಮಾಡಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ MLA Channabasappa ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಅವರಿಗೆ ಮನವಿ ಸಲ್ಲಿಸಿರುವ ಅವರು, ಸರ್ಕಾರದಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಡಜನರ ಕಲ್ಯಾಣಕ್ಕಾಗಿ ಶೇ.7.25% ರಷ್ಟು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯಡಿಯಲ್ಲಿ ವೈದ್ಯಕೀಯ, ಶೈಕ್ಷಣಿಕ, ಸ್ವಂತ ಉದ್ಯೋಗಕ್ಕಾಗಿ ಹಾಗೂಇತರೆ ಜನಪ್ರಿಯ ಯೋಜನೆಗಳನ್ನು ಹಮ್ಮಿಕೊಂಡಿದ್ದು ನಗರ ಪ್ರದೇಶಗಳಲ್ಲಿ ಬಡತನದಲ್ಲಿರುವ ಹಲವಾರು ಕುಟುಂಬಗಳಿಗೆ ಸಾಕಷ್ಟು ಪ್ರಯೋಜನವಾಗಿದೆ. ಆದರೆ ಶೇ.7.25ರಷ್ಟು ಯೋಜನೆಗಳಿಂದ ಎಲ್ಲಾ ವರ್ಗದ ಬಡಜನರಿಗೆ ಸಮರ್ಪಕವಾಗಿ ಸೌಲಭ್ಯಗಳನ್ನು ಒದಗಿಸುವುದು ಕಷ್ಟವಾಗಿದೆ. ಆದ್ದರಿಂದ ಶೇ.7.25 ರಷ್ಟಿರುವ ಮೊತ್ತವನ್ನು ಶೇ.15ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಜಗತ್ತಿನಾದ್ಯಂತ ನಗರೀಕರಣವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಕ್ರಿಯೆಯಾಗಿದ್ದು, ಭಾರತವು ಇದಕ್ಕೆ ಹೊರತಾಗಿಲ್ಲ. ಒಂದು ದೇಶದ ಆರ್ಥಿಕತೆ ಹಾಗೂ ನಗರೀಕರಣವು ನೇರವಾಗಿ ಅನುಪಾತದಲ್ಲಿರುತ್ತದೆ. ಅದರಂತೆ, ಭಾರತವು ಆರ್ಥಿಕವಾಗಿ ಬೆಳವಣಿಗೆ ಹೊಂದಿದಂತೆಲ್ಲ ನಗರಗಳೂ ಬೆಳವಣಿಗೆಯತ್ತ ಸಾಗಿದವು. ಇದೆಲ್ಲದಕ್ಕೂ ಕೂಡಿಕೊಂಡಂತೆ ನಗರಗಳ ಜನಸಂಖ್ಯೆಯೂ ಹೆಚ್ಚಾಯಿತು. ಹಿಂದಿನ ಜನಗಣತಿಯ ಪ್ರಕಾರ ಭಾರತದ ನಗರ ಪ್ರದೇಶಗಳಲ್ಲಿ ವಾಸಿಸುವ ಜನಸಂಖ್ಯೆ ಶೇ.11.4, 2001 ರ ಜನಗಣತಿಯ ಪ್ರಕಾರ ಈ ಎಣಿಕೆಯು ಶೇ.27.80ಕ್ಕೆ ಏರಿಕೆಯಾಗಿದ್ದು, 2011 ರ ಜನಗಣತಿಯ ಪ್ರಕಾರ ಶೇ.31.20 ದಾಟಿದೆ. ಇದಲ್ಲದೆ 2017 ರಲ್ಲಿ ಈ ಸಂಖ್ಯೆಯು ಶೇ.34ಕ್ಕೆ ಏರಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ. 2021 ರ ಜನಗಣತಿ ನಡೆಯಲಿದ್ದು ಶೇಕಡಾವಾರು ನಗರವಾಸಿಗಳ ಪ್ರಮಾಣವು ಶೇ. 40 ಕ್ಕಿಂತ ಅಧಿಕವಾಗುವ ಸಾಧ್ಯತೆ ಇರುತ್ತದೆ. ನಗರಗಳು ವ್ಯಾಪಾರ ವಹಿವಾಟುಗಳ ಕೇಂದ್ರವಾಗಿರುವುದರಿಂದಲೂ ಹಾಗೂ ನಿಚ್ಚಳ ಉದ್ಯೋಗಾವಕಾಶಗಳ ಲಭ್ಯತೆಯಿಂದಲೂ, ಸದೃಢ ಆರ್ಥಿಕತೆಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದಿದ್ದಾರೆ.
Also read: ಅಧಿಕಾರ ಲಾಲಸೆಗಾಗಿ ಸ್ವಾಭಿಮಾನಕ್ಕೆ ಘಟಶ್ರಾದ್ಧ: ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ
ಆದರೆ ತೀವ್ರಗತಿಯ ನಗರೀಕರಣದಿಂದ ಹಲವು ಸಮಸ್ಯೆಗಳೂ ಉದ್ಭವಿಸುತ್ತಿವೆ. ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮವಾಗಿ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ಸಾರಿಗೆ ಸಂಪರ್ಕಗಳನ್ನೊಳಗೊಂಡಂತಹ ಹತ್ತು ಹಲವು ಅವಶ್ಯಕ ಸೇವೆಗಳ ಮೇಲೆ ಒತ್ತಡ ಉಂಟಾಗಿ ಸರ್ಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸಮಸ್ಯೆ ತಂದೊಡ್ಡುತ್ತಿದೆ ಎಂದಿದ್ದಾರೆ.
ಪ್ರಮುಖವಾಗಿ ಯೋಜಿತವಲ್ಲದ ನಗರಗಳಲ್ಲಿ ಈ ಎಲ್ಲಾ ಸಮಸ್ಯೆಗಳ ದುಷ್ಪರಿಣಾಮಗಳನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಮೇಲ್ಕಂಡ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಲುವಾಗಿ, ಸರ್ಕಾರದಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಡಜನರ ಕಲ್ಯಾಣಕ್ಕಾಗಿ ಶೇ.7.25 ರಷ್ಟು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯಡಿಯಲ್ಲಿ ವೈದ್ಯಕೀಯ, ಶೈಕ್ಷಣಿಕ, ಸ್ವಂತ ಉದ್ಯೋಗಕ್ಕಾಗಿ ಹಾಗೂ ಇತರೆ ಜನಪ್ರಿಯ ಯೋಜನೆಗಳನ್ನು ಹಮ್ಮಿಕೊಂಡಿದ್ದು ನಗರ ಪ್ರದೇಶಗಳಲ್ಲಿ ಬಡತನದಲ್ಲಿರುವ ಹಲವಾರು ಕುಟುಂಬಗಳಿಗೆ ಸಾಕಷ್ಟು ಪ್ರಯೋಜನವಾಗಿದೆ. ಆದರೆ ಶೇ.7.25%ರಷ್ಟು ಯೋಜನೆಗಳಿಂದ ಎಲ್ಲಾ ವರ್ಗದ ಬಡಜನರಿಗೆ ಸಮರ್ಪಕವಾಗಿ ಸೌಲಭ್ಯಗಳನ್ನು ಒದಗಿಸುವುದು ಕಷ್ಟವಾಗಿದೆ. ಆದ್ದರಿಂದ ಶೇ.7.25 ರಷ್ಟಿರುವ ಮೊತ್ತವನ್ನು ಶೇ.15ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಪ್ರಸ್ತುತ ಶೇ.7.25 ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆಗಳ ಆದಾಯದಿಂದ ಹಾಗೂ ಸರ್ಕಾರದ ಎಸ್’ಎಫ್’ಸಿ ಮುಕ್ತ ನಿಧಿಯಿಂದ ಹಂಚಿಕೆಯಾಗುವ ಅನುದಾನದಿಂದ ಯೋಜನೆಗಳನ್ನು ರೂಪಿಸಿಕೊಳ್ಳಲಾಗುತ್ತಿದೆ. ಹೆಚ್ಚುವರಿ ಮೊತ್ತದಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ, ಬದಲಾಗಿ ಬಡಜನರು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಕಾರಣೀಕೃತವಾಗುತ್ತದೆ ಎಂದು ವಿವರಿಸಲಾಯಿತು.
ಶಾಸಕ ಚನ್ನಬಸಪ್ಪ ಅವರ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಸಿದ ಮುಖ್ಯಮಂತ್ರಿಗಳು ತಕ್ಷಣವೇ ಅಧಿಕಾರಿಗಳೊಂದಿಗೆ ಚರ್ಚಿಸಿ, ಇದನ್ನು ಪರಿಶೀಲನೆ ನಡೆಸಿ ತತಕ್ಷಣವೇ ಜಾರಿಗೆ ತರುವಂತೆ ಸೂಚಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post