ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮೀಸಲಾತಿ ರದ್ದತಿ ವಿಚಾರಲ್ಲಿ ಮುಸ್ಲೀಮರು ತಿರುಗಿ ಬಿದ್ದಿದ್ದರೆ ರಕ್ತಪಾತವಾಗುತ್ತಿತ್ತು ಎಂಬ ವಿವಾದಾತ್ಮಕ ಹೇಳಿಕೆಯನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ H D Kumaraswamy ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಮೀಸಲಾತಿ ರದ್ದಾದರೂ ಸಹ ಮುಸ್ಲೀಮರು ತಾಳ್ಮೆಯಿಂದ ವರ್ತಿಸುತ್ತಿದ್ದಾರೆ. ನಿಜಕ್ಕೂ ಈ ಸಮುದಾಯದ ತಾಳ್ಮೆ ಮೆಚ್ಚಬೇಕು. ಒಂದು ವೇಳೆ ಮುಸ್ಲೀಮರು ತಿರುಗಿ ಬಿದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳಿ. ರೊಚ್ಚಿಗೆದ್ದಿದ್ದರೆ ರಕ್ತಪಾತವಾಗುತ್ತಿತ್ತು ಎಂದು ಹೇಳುವ ಮೂಲಕ ವಿವಾದ ಸೃಷ್ಠಿಸಿದ್ದಾರೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಜಾರಿ ಮಾಡಿರುವ ಮೀಸಲಾತಿಯನ್ನು ರದ್ದು ಮಾಡುತ್ತೇವೆ ಎಂದು ಎಚ್’ಡಿಕೆ ಘೋಷಣೆ ಮಾಡಿದ್ದಾರೆ.
Also read: ಬಿಎಸ್’ವೈ ಮನೆ ಮೇಲೆ ದಾಳಿಯಲ್ಲಿ ಯಾರ ಕೈವಾಡ: ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















