ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕುಣಿತ ಒಂದೇ ಯಕ್ಷಗಾನವಲ್ಲ, ಕುಣಿತ ಯಕ್ಷಗಾನದ ಭಾಗವಷ್ಟೇ. ಯಕ್ಷಗಾನದಲ್ಲಿ ಮಾತಿನಶೈಲಿಯೂ ಬಹುಮುಖ್ಯವಾಗಿದ್ದು, ನಮ್ಮ ಮಾತು ಯಕ್ಷಗಾನದ ಚೌಕಟ್ಟು ಮೀರದಂತೆ ಇರಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಹೇಳಿದರು.
ಅಖಿಲ ಹವ್ಯಕ ಮಹಾಸಭೆಯ ಹವ್ಯಕ ಭವನದಲ್ಲಿ ನಡೆದ “ಯಕ್ಷಸಂಸ್ಕಾರ”, Yakshasamskara ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,, ಯಕ್ಷಗಾನಕ್ಕೆ ಅಧ್ಯಯನ ಹಾಗೂ ಸಂಶೋಧನೆ ಬೇಕಾಗಿದ್ದು, ನಿತ್ಯನಿರಂತರವಾದ ಅಧ್ಯಯನದಿಂದ ಮಾತ್ರ ನಿಜವಾದ ಯಕ್ಷಗಾನವನ್ನು ಉಳಿಸಿ ಬೆಳೆಸಲು ಸಾಧ್ಯ. ಹಾಗಾಗಿ ಇಲ್ಲಿ ನಡೆಯುವ ಯಕ್ಷಗಾನ ತರಬೇತಿಯಲ್ಲಿ ಕುಣಿತದಷ್ಟೇ ಪ್ರಾಮುಖ್ಯತೆ, ಮಾತಿನಶೈಲಿ ಹಾಗೂ ಅಧ್ಯನಾಸಕ್ತಿ ಹೆಚ್ಚಿಸುವುದಕ್ಕೂ ಸಿಗುವಂತಾಗಲಿ ಎಂದು ಕಿವಿಮಾತು ಹೇಳಿದರು.

ಯಕ್ಷಗಾನದಲ್ಲಿ ಇಂದಿಗೂ ಆಂಗ್ಲಭಾಷೆಯಲ್ಲಿ ಬೆರೆಸದೇ ಶುದ್ಧ ಕನ್ನಡದಲ್ಲೇ ಮಾತನಾಡುವ ಚೌಕಟ್ಟಿದ್ದು, ಶುದ್ಧವಾದ ಕನ್ನಡ ಉಳಿದುಕೊಂಡಿರುವುದಕ್ಕೆ ಯಕ್ಷಗಾನವೂ ಬಹುಮುಖ್ಯ ಕಾರಣವಾಗಿದೆ. ಹವ್ಯಕ ಮಹಾಸಭೆಯ ಈ ಪ್ರಯತ್ನಕ್ಕೆ ಅಭಿನಂದನೆ ತಿಳಿಸಿ, ಯಕ್ಷನಿಧಿಗೆ ಅಗತ್ಯವಾದ ಸಹಕಾರ ನೀಡುವುದಾಗಿ ತಿಳಿಸಿದರು.
Also read: ಮಹಿಳಾ ವಿವಿ ಪ್ರಾದೇಶಿಕ ಕೇಂದ್ರದಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲ: ಕೇಂದ್ರ ಸಚಿವ ಭಗವಂತ ಖೂಬಾ
ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ಯಕ್ಷಗಾನ ಹವ್ಯಕರ ಕಲೆಯಾಗಿದ್ದು, ಯಕ್ಷಗಾನವನ್ನು ಉಳಿಸಿ-ಬೆಳೆಸುವ ಕರ್ತವ್ಯ ಹವ್ಯಕರ ಮೇಲಿದೆ. ಎಲ್ಲಾ ಸಮುದಾಯದವರೂ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದರೂ, ಹವ್ಯಕ ಸಮಾಜದ ಜೊತೆಗೆ ಯಕ್ಷಗಾನ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದರು.



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















