ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಕ್ತವನ್ನು ದಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ರಕ್ತದ ಗುಣಮಟ್ಟದ ಪರೀಕ್ಷೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಯಾಕೆಂದರೆ ಒಬ್ಬ ಹೆಚ್.ಐ.ವಿ #HIV ಸೋಂಕಿತನ ರಕ್ತದಲ್ಲಿ ಸೊಂಕು ದೃಡಪಡುವುದು ಆ ವ್ಯಕ್ತಿಗೆ ಸೊಂಕು ತಗುಲಿ ಕನಿಷ್ಠ 2 ರಿಂದ 4 ವಾರಗಳ ನಂತರವಾಗಿರುವುದರಿಂದ, ಆ ಸಮಯದ ಒಳಗೆ ಸೊಂಕಿತ ವ್ಯಕ್ತಿ ರಕ್ತ ನೀಡಿದಲ್ಲಿ ಅದನ್ನು ಹೇಗೆ ಪತ್ತೆಹಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಹಾಗೆಯೇ ಹೆಪಟೈಟಿಸ್, ಮಲೇರಿಯಾದಂತ #Malaria ಸೊಂಕುಗಳ ಪತ್ತೆಯಲ್ಲೂ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಕುರಿತು ಆರೋಗ್ಯ ಇಲಾಖೆ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸದನದಲ್ಲಿ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ #Dr. Dhananjaya Sarji ಸರ್ಕಾರವನ್ನು ಒತ್ತಾಯಿಸಿದರು.
ಸಮಾಜದಲ್ಲಿ ದಾನಕ್ಕಿಂತ ದೊಡ್ಡದಿಲ್ಲ. ದಾನಮಾಡಿ ಕೆಟ್ಟವರಿಲ್ಲ, ಅದರಲ್ಲೂ ರಕ್ತದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ ಎಂಬ ಮಾತು ಪ್ರಚಲಿತವಾಗಿರುವ ಸಂದರ್ಭದಲ್ಲಿ “ದಾನ ಕೊಟ್ಟ ರಕ್ತದಲ್ಲಿ ಹೆಚ್.ಐ.ವಿ/ಪರೀಕ್ಷೆ ವೇಳೆ ಹೆಪಟಿಟಿಸ್, ಮಲೇರಿಯಾದಂತ ಗಂಭೀರ ಸೊಂಕು ದೃಡ”ವಾಗಿದೆ ಎಂದು ರಾಜ್ಯ ಪತ್ರಿಕೆಯೊಂದು ವರದಿ ಮಾಡಿದೆ. ಪತ್ರಿಕೆಯ ವರದಿ ಅತ್ಯಂತ ಕಳವಳ ಉಂಟುಮಾಡುವುದರೊಂದಿಗೆ ಆತಂಕವನ್ನೂ ಸೃಷ್ಟಿಸಿದೆ.
ವರ್ಷದಿಂದ ವರ್ಷಕ್ಕೆ ದೇಶದಾದ್ಯಂತ ರೋಗಿಳಿಗೆ ಅಗತ್ಯವಿರುವ ರಕ್ತದ ಕೊರತೆ ಹೆಚ್ಚಳವಾಗುತ್ತಿದ್ದು ಪ್ರತಿ ಒಂದು ನಿಮಿಷಕ್ಕೆ ಜಗತ್ತಿನಲ್ಲಿ 1000 ಜನಕ್ಕೆ ಹಾಗೂ ಭಾರತದಲ್ಲಿ ಒಂದು ನಿಮಿಷಕ್ಕೆ 50 ಜನರಿಗೆ ರಕ್ತದ ಅವಶ್ಯಕತೆ ಇದೆ. ಪ್ರತಿ ಒಂದು ನಿಮಿಷಕ್ಕೆ ಜಗತ್ತಿನಾದ್ಯಂತ 12 ಜನ ರಕ್ತದ ಕೊರತೆಯಿಂದ ಸಾವನ್ನಪ್ಪುತ್ತಿರುವ ಗಂಭೀರ ಸಮಸ್ಯೆ ಒಂದೆಡೆಯಾದರೆ ಇನ್ನೊಂದೆಡೆ ರಕ್ತದಾನ ಶಿಬಿರಗಳಲ್ಲಿ ಸಂಗ್ರಹವಾದ ರಕ್ತದಲ್ಲಿ ಪರೀಕ್ಷೆ ವೇಳೆ ಹೆಚ್.ಐ.ವಿ/ಹೆಪಟೈಟಿಸ್, ಮಲೇರಿಯಾದಂತ ಸೊಂಕು ಪತ್ತೆಯಾಗಿ 2024-25ರಲ್ಲಿ ಸಂಗ್ರಹಿತ 44,776 ಯೂನಿಟ್ ರಕ್ತ ವ್ಯರ್ಥವಾಗಿದೆ.
ರಾಜ್ಯದಲ್ಲಿ 230 ರಕ್ತನಿಧಿ ಕೇಂದ್ರಗಳು, 43 ಸರ್ಕಾರಿ ರಕ್ತನಿಧಿ ಕೇಂದ್ರ, 108 ಖಾಸಗಿ ಕೇಂದ್ರಗಳೂ ಸೇರಿದಂತೆ ಕೆಲವೊಂದು ಸ್ವತಂತ್ರ ಮತ್ತು ರೆಡ್ ಕ್ರಾಸ್ ರಕ್ತನಿಧಿ ಕೇಂದ್ರಗಳಿದ್ದು, ಅನೇಕ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತವೆ. ಹೀಗೆ ಆಯೋಜನೆ ಆಗುವ ರಕ್ತದಾನ ಶಿಬಿರಗಳಲ್ಲಿ ದಾನಿಗಳ ಆರೋಗ್ಯ ತಪಾಸಣೆ ಇಲ್ಲದೇ ಸಂಗ್ರಹಿಸಲಾಗುವ ರಕ್ತವನ್ನು ರೋಗಿನಗಳಿಗೆ ನೀಡುವಾಗ ದೇಶದಲ್ಲಿ 2018-2019ರಲ್ಲಿ ಒಂದು ಆರ್.ಟಿ.ಐ ವರದಿಯ ಉಲ್ಲೇಖದಲ್ಲಿ 1342 ಜನರಿಗೆ ಹೆಚ್.ಐ.ವಿ ಸೋಂಕಿತ ರಕ್ತ ನೀಡಿರುವುದು ದೃಡಪಟ್ಟಿರುವ ಅಂಶ. ಅತ್ಯಂತ ಕಳವಳಕಾರಿಯಾಗಿದೆ. ರಾಜ್ಯದ ಅಂಕಿ ಅಂಶಗಳ ಪ್ರಕಾರ 2024-25ರಲ್ಲಿ 44,776 ಯೂನಿಟ್, 2022-2023ರಲ್ಲಿ 43,857 ಯೂನಿಟ್ ರಕ್ತಗಳಲ್ಲಿ ಸೊಂಕು ಪತ್ತೆಯಾಗಿ ಅಂತಹ ರಕ್ತವನ್ನು ಡಿಸ್‌ಕಾರ್ಡ್ ಮಾಡಲಾಗಿದೆ ಆದ್ದರಿಂದ ರಕ್ತವನ್ನು ದಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ರಕ್ತದ ಗುಣಮಟ್ಟದ ಪರೀಕ್ಷೆ ಮಾಡುವುದು ಅವಶ್ಯಕ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post