ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಎಂಎಸ್’ಎಂಇ ಕೈಗಾರಿಕೆಗಳಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ನಿರ್ಲಕ್ಷವಾಗುತ್ತಿದೆ ಎಂದು ಎಂಎಲ್’ಸಿ ರುದ್ರೇಗೌಡರು MLC Rudregowda ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಕುರಿತಂತೆ ಕಲಾಪದಲ್ಲಿ ಗಮನ ಸೆಳೆದು ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ 29 ಜಿಲ್ಲೆಗಳಲ್ಲಿ ಒಟ್ಟು 1188 ಕೈಗಾರಿಕಾ ಪ್ರದೇಶಗಳಿವೆ, ಸುಮಾರು 85 ಲಕ್ಷ ಎಂಎಸ್’ಎಂಇಗಳಿದ್ದು 55 ಲಕ್ಷ ಜನಗಳಿಗೆ ಉದ್ಯೋಗವನ್ನು ಕೊಟ್ಟಿವೆ, 2023, 24ರ ಆಯವ್ಯಯದಲ್ಲಿ ಕೇವಲ 2,152 ಕೋಟಿ ರೂಗಳನ್ನು ಮೀಸಲಿಡಲಾಗಿದೆ, ಎಂಎಸ್‌ಎAಇಗಳಿರುವ ಕೈಗಾರಿಕಾ ಪ್ರದೇಶಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ ಎಂದರು.
ನಮ್ಮ ದೇಶದಲ್ಲಿ ಎಂಎಸ್’ಎಂಇನಿಂದ ದೇಶದ ಒಟ್ಟು ಎಕ್ಸ್ಪೋರ್ಟ್’ನಲ್ಲಿ ಶೇ. 62.67ರಷ್ಟು ಇದೆ, ಆದಕಾರಣ ಕೈಗಾರಿಕಾ ಪ್ರದೇಶಗಳಿಗೆ ಹೊರದೇಶದ ಗ್ರಾಹಕರು ಬರುತ್ತಾರೆ, ಕಡಿಮೆ ಬಂಡವಾಳದಲ್ಲಿ ಹೆಚ್ಚು ಉದ್ಯೋಗ ಕೊಡುವ ಕ್ಷೇತ್ರ ಎಂಎಸ್’ಎಂಇ, ಕ್ಷೇತ್ರಕ್ಕೆ ವಿಶೇಷವಾಗಿ ಕೌಶಲ್ಯ ತರಬೇತಿ ಪಡೆದ ವಿದ್ಯಾರ್ಥಿಗಳ ಅವಶ್ಯಕತೆ ಬಹಳ ಮುಖ್ಯವಾಗಿದೆ ಎಂದರು.
Also read: ಚಿನ್ನ ಪ್ರಿಯರಿಗೆ ಸಿಹಿ ಸುದ್ಧಿ: ಶಿವಮೊಗ್ಗದಲ್ಲಿ ನಾಳೆಯಿಂದ ಮೂರು ದಿನ ಆಭರಣ ಪ್ರದರ್ಶನ-ಮಾರಾಟ
ಎಂಎಸ್’ಎಂಇ ಉದ್ಯೋಗಿಗಳಿಗೆ ವಾಸ್ತವ್ಯಕ್ಕೆ ನಿವೇಶನಗಳಾಗಲಿ, ಮನೆಗಳಾಗಲಿ ಇಲ್ಲಿ ತನಕ ನೀಡದಿರುವುದು ದುರದೃಷ್ಟಕರ ಮತ್ತು ಈ ರೀತಿ ಇದ್ದರೆ ಇದರ ಉನ್ನತಿ ಕಷ್ಟಸಾಧ್ಯ. ಈ ಬಾರಿಯ ಆಯವ್ಯಯದಲ್ಲಿ ಇದ್ಯಾವುದೇ ಪ್ರಸ್ತಾಪವಿಲ್ಲದಿರುವುದು ಎಂಎಸ್’ಎಂಇಗೆ ಆತಂಕವಾಗಿದೆ, ಇದನ್ನು ನಾನು ಖಂಡಿಸುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post