ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾವಲ್ ಸಿನಿ ಫೋಕಸ್ ಅರ್ಪಿಸುವ “ಗೋರಂಟಿ ” Goranti ಎಂಬ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು ಬೆಂಗಳೂರಿನ ಜೆ.ಪಿ. ನಗರದ ಶ್ರೀವಿದ್ಯಾಗಣಪತಿ ದೇವಸ್ತಾನದಲ್ಲಿ ನೆರವೇರಿತು.
ಖ್ಯಾತ ಸಂಗೀತ ನಿರ್ದೇಶಕರಾದ ವಿ. ಮನೋಹರ್ V Manohar ಕ್ಲ್ಯಾಪ್ ಮಾಡುವುದರ ಮೂಲಕ ಚಿತ್ರತಂಡಕ್ಕೆ ಶುಭ ಕೋರಿ ಈ ಚಿತ್ರದಲ್ಲಿ ತಮ್ಮದು ವಿಶೇಷ ಪಾತ್ರವಿದೆ. ಅದೇನೆಂದು ಚಿತ್ರಮಂದಿರದಲ್ಲೇ ನೋಡಿರಿ ಎಂದರು.
ದೊಡ್ಡ ಮನೆತನ ರಾವ್ ಬಹದ್ದೂರ ವಂಶದಲ್ಲಿ ಹುಟ್ಟಿದ ತಂದೆ-ತಾಯಿ ಇದ್ದರೂ ಅನಾಥ ಎಂಬಂತೆ ಕಾಂತರಾಜ ಎಂಬ ವ್ಯಕ್ತಿಯ ಜೀವನ ನಡೆಯುತ್ತಿರುತ್ತದೆ. ಬದುಕೇ ಬೇಡ ಎಂಬ ನಿರ್ಧಾರಕ್ಕೆ ಬಂದವನ ಜೊತೆಗೆ ನಿರ್ಗತಿಕನೊಬ್ಬ ಜೊತೆಯಾಗುತ್ತಾನೆ. ಇಬ್ಬರದೂ ವಿಚಿತ್ರ ಸ್ವಭಾವ. ಇದರಿಂದಾಗಿ ಚಿತ್ರದೊಳಗೆ ತಿರುವುಗಳೇ ಘಟಿಸುತ್ತಾ ಹೋಗುತ್ತವೆ. ಜೊತೆಗೆ ಇಬ್ಬರು ಯುವತಿಯರ ಮನಸಿನ ತಿಕ್ಕಾಟದ ನಡುವೆ ಸುಂದರವಾದ ಭಾವಚಿತ್ರ ಪೆಂಟಿಂಗ್ ಮೂಡಿ ಬರುತ್ತದೆ. ಆದರೆ ಜೀವನ ವಿಚಿತ್ರವಾಗುತ್ತದೆ. ಏನು ಎಂಬುದು ಗೋರಂಟಿಯಲ್ಲಿ ಹೇಳುತ್ತಿದ್ದೇನೆ. ಕುತೂಹಲ ಚಿತ್ರದಲ್ಲಿದೆ. ಕರ್ನಾಟಕದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಿದ್ದು ಕನ್ನಡ, ತೆಲಗು, ತಮಿಳ್ ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ನಿರ್ಮಿಸುತ್ತಿರುವದಾಗಿ ನಿರ್ದೇಶಕ ರಾವಲ್ ತಿಳಿಸಿದರು.
Also read: ಗುಡ್ ನ್ಯೂಸ್! ಶೀಘ್ರವೇ ಕೆಎಸ್’ಆರ್’ಟಿಸಿಯಲ್ಲಿ 13 ಸಾವಿರ ಸಿಬ್ಬಂದಿ ನೇಮಕಾತಿ
ತಾರಾಗಣದಲ್ಲಿ ಮಹೇಶ್ ರಾವಲ್, ಅಥರ್ವ ಶೆಟ್ಟಿ, ದಿತ್ಸಾ ರಾಯ್, ಭವ್ಯಾ, ವಿ. ಮನೋಹರ್, ಆಕಾಶರಾಜ, ಮಧುಸೂದನ್, ವೆಂಕಟರಾಜು, ಶಿಲ್ಪಿ ಶ್ರೀವಾತ್ಸವ್, ಕವನ ಕಾಣಿಸಿಕೊಳ್ಳಲಿದ್ದಾರೆ. ಜೂಮ್ ರವಿ ಛಾಯಾಗ್ರಹಣ, ಚಂದ್ರು ಬಂಡೆ ಸಾಹಸ, ರಾಜು ಹಾಗೂ ಸ್ಟಾರ್ ನಾಗಿ ಅವರ ನೃತ್ಯ ಸಂಯೋಜನೆಯಿದ್ದು ಹೆಸರಾಂತ ಗೀತ ರಚನೆಗಾರ ಮನ್ವರ್ಷಿ ನವಲಗುಂದ ಸಾಹಿತ್ಯ ರಚಿಸಿದ್ದು, ವಿಕಾಸ್ ರಜತ್ ಎಂಬ ಯುವ ಸಂಗೀತ ನಿರ್ದೇಶಕರ ಸಂಗೀತ , ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ ಅವರದಿದೆ.
ಕಥೆ -ಚಿತ್ರಕಥೆ- ಸಂಭಾ?ಣೆ ಹಾಗೂ ನಿರ್ದೇಶನವನ್ನು ಮಹೇಶ್ ರಾವಲ್‌ರವರೇ ನಿರ್ವಹಿಸುತ್ತಿದ್ದಾರೆ. ಲತಾ ರಾವಲ್‌ರವರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಗೋರಂಟಿ ಚಿತ್ರ ತಂಡದ ಎಲ್ಲಾ ತಂತ್ರಜ್ಞರು, ನಟ ನಟಿಯರು ಹಾಗೂ ಹಿತೈಷಿಯರು ಪಾಲ್ಗೊಂಡಿದ್ದರು.
ವರದಿ: ಡಾ.ಪ್ರಭು ಗಂಜಿಹಾಳ, ಮೊ: 9448775346


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















