ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇದೇನು ಕರ್ನಾಟಕ ರಾಜ್ಯವೋ ಅಥವಾ ಪಾಕಿಸ್ಥಾನಿ ಆಕ್ರಮಿತ ಕಾಶ್ಮೀರವೋ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ #R Ashok ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಭಾರತ್ ಮಾತಾ ಕಿ ಜೈ ಎಂದು ಕೂಗಿದ ಬಿಜೆಪಿ ಕಾರ್ಯಕರ್ತರ ಮೇಲೆ ಚಾಕು ಇರಿದ ಘಟನೆ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ರಾಮನ #Lord Rama ಹೆಸರು ಹೇಳುವುದೂ ತಪ್ಪು, ಭಾರತ್ ಮಾತಾ ಕೀ #Bharath Matha ki Jai ಜೈ ಎಂದರೂ ತಪ್ಪು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರ ಮೇಲೆ ಕಠಿಣ ಕ್ರಮ ಕೈಗೊಂಡು ಜೈಲಿಗಟ್ಟಿದ್ದರೆ ಇವತ್ತು ಭಾರತ್ ಮಾತಾ ಕಿ ಜೈ ಎನ್ನುವವರ ಮೇಲೆ ಕಲ್ಲು ತೂರುವ ಧೈರ್ಯ ಮಾಡುತ್ತಿರಲಿಲ್ಲ ಎಂದಿದ್ದಾರೆ.

Also read: ಈ ನಗರವೇ ಇನ್ನು ಮುಂದೆ ಆಂಧ್ರಪ್ರದೇಶ ರಾಜಧಾನಿ: ಚಂದ್ರಬಾಬು ನಾಯ್ಡು ಘೋಷಣೆ
ಬಿ.ವೈ. ವಿಜಯೇಂದ್ರ ಆಕ್ರೋಶ
ಇನ್ನು, ಈ ಕುರಿತಂತೆ ಕಿಡಿ ಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರವು ಮೂಲಭೂತವಾದಿಗಳನ್ನು ಓಲೈಸುತ್ತಿರುವ ಕಾರಣ ಮತ್ತು ಅವರು ಕಾನೂನಿಗೆ ಹೆದರುವುದಿಲ್ಲ ಎಂಬ ಕಾರಣದಿಂದಾಗಿ ಇಂಥ ಘಟನೆಗಳು ನಡೆಯುತ್ತಿವೆ ಎಂದು ಟೀಕಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post