Monday, September 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ಐದನೆಯ ಬಾರಿ ಸಚಿವರಾಗಿ ಈಶ್ವರಪ್ಪ ಪ್ರಮಾಣ ವಚನ: ಜನನಾಯಕನಿಗೆ ಮತ್ತೆ ಒಲಿದ ಅದೃಷ್ಟ

August 4, 2021
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 4 minutes

ಕಲ್ಪ ಮೀಡಿಯಾ ಹೌಸ್

ಬೆಂಗಳೂರು: ರಾಜ್ಯ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಮತ್ತೊಮ್ಮೆ ಅದೃಷ್ಟ ಒಲಿದಿದ್ದು, ಐದನೆಯ ಬಾರಿಗಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈಶ್ವರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರ ಪತ್ನಿ ಜಯಲಕ್ಷ್ಮೀ, ಹೊಳಲೂರು ಜಿಪಂ ಸದಸ್ಯ ಕೆ.ಇ. ಕಾಂತೇಶ್ ಸೇರಿದಂತೆ ಕುಟುಂಬಸ್ಥರು ಹಾಗೂ ಆಪ್ತರು ಪಾಲ್ಗೊಂಡಿದ್ದರು.

ಹಿಂದೆ ಬಿಜೆಪಿ ಜೆಡಿಎಸ್ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಈಶ್ವರಪ್ಪ ನಂತರ ಯಡಿಯೂರಪ್ಪ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು. ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ, ಅಂದಿನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪರಿಷತ್, ವಿರೋಧ ಪಕ್ಷದ ಪ್ರತಿಪಕ್ಷ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಕೇಂದ್ರ ಸಿಲ್ಕ್ ಬೋರ್ಡ್ ಅಧ್ಯಕ್ಷರಾಗಿ , ಯುವಜನ ಹಾಗೂ ಕ್ರೀಡಾ ಸಚಿವರಾಗಿ ನಂತರ ಐದನೆಯ ಬಾರಿ ಸಚಿವರಾಗಿ, ಗ್ರಾಮೀಣಾಭಿವೃಧ್ಧಿ ಪಂಚಾಯತ್ ರಾಜ್ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಕೆ.ಎಸ್.ಈಶ್ವರಪ್ಪ ವ್ಯಕ್ತಿ ಪರಿಚಯ:
ಬಳ್ಳಾರಿ ಮೂಲದ ಕೌಡಿಕ ಕುಟುಂಬದ ಹಲವಾರು ದಶಕಗಳ ಕೆಳಗೆ ಶಿವಮೊಗ್ಗೆಯಲ್ಲಿ ನೆಲೆಸಿದ್ದರು. ಈ ಕುಟುಂಬದ ಶರಣಪ್ಪ ಮತ್ತು ಬಸಮ್ಮನವರ 4ನೇ ಪುತ್ರರಾಗಿ ಶ್ರೀ ಕೆ.ಎಸ್.ಈಶ್ವರಪ್ಪನವರು 1948 ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು.

ಶಾಲಾ ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್.ಎಸ್.ಎಸ್) ಶಾಖೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಂಡರು. ನಗರದ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ ವಿದ್ಯಾಭ್ಯಾಸ ಮುಗಿಸಿ ನಂತರ ನ್ಯಾಶನಲ್ ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಯಾದರು. ಎರಡನೇ ವರ್ಷದ ಬಿ.ಕಾಂ. ಓದುವಾಗಲೇ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕನಾಗಿ ತಮ್ಮ ನಾಯಕತ್ವದ ಗುಣ ತೋರಿದ್ದರು. ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಮೂಲಕ ವಿದ್ಯಾರ್ಥಿಗಳ ನಂಬಿಕೆಗೆ ಪಾತ್ರರಾದರು. ಈ ಸಂದರ್ಭದಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಸಕ್ರಿಯರಾದರು. ಸದಾ ಮುನ್ನುಗ್ಗುವ ಸ್ವಭಾವದಿಂದಾಗಿ ಶೀಘ್ರವಾಗಿ ಎಬಿವಿಪಿಯ ರಾಜ್ಯ ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಜವಾಬ್ದಾರಿ ಹೊತ್ತರು.

ಸಂಘದ ಶಾಖೆಗಳಲ್ಲಿ ಮೈಗೂಡಿಸಿಕೊಂಡಿದ್ದ ರಾಷ್ಟ್ರಪ್ರೇಮ, ಸಾಮಾಜಿಕ ಕಳಕಳಿಯ ಗುಣಗಳಿಂದಾಗಿ 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇವರು ಸಹಜವಾಗಿಯೇ ಹೋರಾಟಕ್ಕೆ ಧುಮುಕಿದರು. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಚಳುವಳಿ ನಡೆಸಿ, ಹಲವಾರು ತಿಂಗಳ ಸೆರೆಮನೆ ವಾಸ ಅನುಭವಿಸಿದರು.

ವಿದ್ಯಾಭ್ಯಾಸದ ನಂತರ ತಮ್ಮದೇ ಸ್ವಂತ ವ್ಯವಹಾರ ಆರಂಭಿಸಿದ ಕೆ.ಎಸ್.ಈಶ್ವರಪ್ಪನವರು, ಸ್ವಾಮಿ ವಿವೇಕಾನಂದರಿಂದ ತೀವ್ರವಾಗಿ ಆಕರ್ಶಿತರಾಗಿದ್ದರು ಎಂದೇ ಅವರ ಉದ್ದಿಮೆಗಳೆಲ್ಲವೂ ‘ವಿವೇಕ್’ ಎಂಬ ಏಜನ್ಸೀಸ್ ಹಾಗೂ ವಿವೇಕ್ ಅಗರಬತ್ತಿ ಮೊದಲಾದ ಘಟಕಗಳು ಇವರಲ್ಲಿದ್ದ ‘ಉದ್ದಿಮೆದಾರ’ನನ್ನು ಹೊರತಂದವು.

ಈ ಹಂತದಲ್ಲೇ ಜಯಲಕ್ಷ್ಮೀಯವರನ್ನು ವರಿಸಿದ ಶ್ರೀಯುತರದ್ದು, ತೃಪ್ತಿದಾಯಕ, ಸಂತಸದ ವೈವಾಹಿಕ ಜೀವನ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಜನ ಸಂಘ ನಂತರ ಭಾರತೀಯ ಜನತಾ ಪಾರ್ಟಿಯ ತಳಹಂತದ ಕಾರ್ಯಕರ್ತರಾಗಿ ರಾಜಕೀಯ ಚಟುವಟಿಕೆಗಳನ್ನು ಆರಂಭಿಸಿದ ಕೆ.ಎಸ್.ಈಶ್ವರಪ್ಪನವರು ಶಿವಮೊಗ್ಗ ನಗರ ಘಟಕದ ಕಾರ್ಯದರ್ಶಿಯಾಗಿ, ನಂತರ ಶಿವಮೊಗ್ಗ ನಗರ ಸಮಿತಿಯ ಬಿ.ಜೆ.ಪಿ. ಅಧ್ಯಕ್ಷರಾಗಿ ಕೆಲಸ ಮಾಡಿದರು. ಎಲ್ಲರೊಡನೆ ಬೆರೆಯುವ ಸ್ನೇಹ ಪ್ರವೃತ್ತಿ, ಹಾಸ್ಯಭರಿತ ಮಾತುಗಳು ಹಾಗೂ ಸರಳ ವ್ಯಕ್ತಿತ್ವ ಇವರಿಗೆ ಬೇಗನೆ ಹೆಸರು ತಂದಿತು. ಎಲ್ಲಾ ವರ್ಗದ ಜನರೊಂದಿಗೆ, ಎಲ್ಲಾ ಹಂತಗಳ ಕಾರ್ಯಕರ್ತರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರಿಂದಲೇ 1989 ರಲ್ಲಿ ಪಕ್ಷವು ಇವರಿಗೆ ಶಿವಮೊಗ್ಗ ವಿಧಾನ ಸಭೆಗೆ ಸ್ಪರ್ಧಿಸಲು ಅವಕಾಶ ನೀಡಿತು.

ಕೆ.ಎಸ್.ಈಶ್ವರಪ್ಪ ಎದುರಿಸಿದ ಮೊದಲ ಚುನಾವಣೆಯಲ್ಲೇ (1989) ವಿಜಯಮಾಲೆ ಧರಿಸಿದರು. ಅಂದು ಸಚಿವರಾಗಿದ್ದ,  ಕೆ.ಹೆಚ್.ಶ್ರೀನಿವಾಸರಂತಹ ದೊಡ್ಡನಾಯಕರನ್ನು ಸೋಲಿಸುವ ಮೂಲಕ ರಾಜ್ಯದ ಗಮನ ಸೆಳೆದರು.

ಮೊದಲ ಅವಧಿಯಲ್ಲೇ ಶಿವಮೊಗ್ಗದ ಕುಡಿಯುವ ನೀರಿನ ಯೋಜನೆ, ಸರ್ಕಾರಿ ಬಸ್ ಸ್ಟಾಂಡ್, ವಸತಿಯುಕ್ತ ಮಹಿಳಾ ಪಾಲಿಟೆಕ್ನಿಕ್, ದೂರದರ್ಶನ ಕೇಂದ್ರ ಮೊದಲಾದವು ಇವರ ಪ್ರಯತ್ನದಿಂದಲೇ ಸಾಕಾರಗೊಂಡವು.

ಇದರ ಜೊತೆಗೆ ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊತ್ತರು. ಜಿಲ್ಲಾ ಘಟಕದ ನಂತರ 1991 ರಲ್ಲಿ ಬಿ.ಜೆ.ಪಿ. ಯುವಮೋರ್ಚಾದ ರಾಜ್ಯಾಧ್ಯಕ್ಷರಾದರು. ಎಲ್ಲೆಡೆ ಯುವ ವೃಂದವನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ರಾಜ್ಯಾದ್ಯಂತ ಪ್ರವಾಸ ಕೈಗೊಂಡರು, ಬಿರುಸಿನಿಂದ ಪಕ್ಷದ ಸಂಘಟನೆಗೆ ಮುಂದಾದರು. ಅವರು ತೋರಿದ ಕುಶಲತೆ, ಜಾಣ್ಮೆ ಹಾಗೂ ಅಚಲ ನಿಷ್ಠೆಗಳು, ಸಹಜವಾಗೆ ಇವರಿಗೆ ಒಳ್ಳೆಯ ಹೆಸರು ತಂದಿತು. ಶ್ರೀ ಯಡಿಯೂರಪ್ಪನವರ ನಂತರ ರಾಜ್ಯ ಘಟಕದ ಅಧ್ಯಕ್ಷರಾದರು(1993) ಈ ಮೂಲಕ, ರಾಜಕೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಾದ ಮೊದಲ ಹಿಂದುಳಿದ ವರ್ಗದ (ಕುರುಬ ಜನಾಂಗದ) ನೇತಾರ ಎಂಬ ಕೀರ್ತಿಗೆ ಇವರು ಪಾತ್ರರಾದರು.

ತಮ್ಮ ಸಾಮರ್ಥ್ಯದಿಂದಲೇ 1995 ರಲ್ಲಿ ಎರಡನೇ ಅವಧಿಗೂ ರಾಜ್ಯಾಧ್ಯಕ್ಷರಾಗಿ ಚುನಾಯಿತರಾದರು. ಅಂದು ವಿಧಾನ ಸಭೆಯಲ್ಲಿ ಕೇವಲ 4 ಶಾಸಕರನ್ನು ಹೊಂದಿದ್ದ ಬಿ.ಜೆ.ಪಿ. ಶ್ರೀ ಕೆ.ಎಸ್.ಈಶ್ವರಪ್ಪನವರ ನಾಯಕತ್ವದಲ್ಲಿ 40 ಸ್ಥಾನಗಳನ್ನು ಪಡೆಯಿತು. ಶಾಸಕಾಂಗ ಪಕ್ಷದ ನಾಯಕತ್ವವು ಕೆ.ಎಸ್.ಈಶ್ವರಪ್ಪನವರ ಹೆಗಲೇರಿತು. ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟ, ಶ್ರೀನಗರಕ್ಕೆ ತಿರಂಗಯಾತ್ರೆ, ಬಗರ್ ಹುಕುಂ ಚಳವಳಿ, ಅಯೋಧ್ಯೆಯ ರಾಮಮಂದಿರದ ಹೋರಾಟಗಳಲ್ಲಿ ತಮ್ಮ ಗಡುಸಾದ ನಾಯಕತ್ವ ಹಾಗೂ ಮುತ್ಸದ್ಧಿತನದಿಂದ ಕೆ.ಎಸ್.ಈಶ್ವರಪ್ಪನವರು ಪ್ರಸಿದ್ಧಿ ಪಡೆದರು.

1989 ಹಾಗೂ 1994 ರಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಶಾಸಕರಾದ ಶ್ರೀ ಕೆ.ಎಸ್.ಈಶ್ವರಪ್ಪನವರು 1999 ರಲ್ಲಿ ಅನಿರೀಕ್ಷಿತವಾಗಿ ಸೋಲಬೇಕಾಯಿತು. ಆದರೆ ಇವರಲ್ಲಿನ ಕಾರ್ಯದಕ್ಷತೆ ಗುರುತಿಸಿದ ಕೇಂದ್ರ ಸರ್ಕಾರವು ಇವರನ್ನು ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾನ್ನಾಗಿ ನೇಮಿಸಿತು. ಅಲ್ಲಿಯವರೆಗೂ ಕೇವಲ ಸಂಶೋಧನಾ ಲ್ಯಾಬ್ ಗಳಿಗೆ ಮಾತ್ರ ಸೀಮಿತವಾಗಿದ್ದ ರೇಷ್ಮೆ ಮಂಡಳಿಯನ್ನು ರೈತರ ಹೊಲಗಳಿಗೆ ತಂದ ಕೆ.ಎಸ್.ಈಶ್ವರಪ್ಪ ತಾವು ರೈತರ ಜನಸಾಮಾನ್ಯರ ಸ್ನೇಹಿತ ಎಂಬುದನ್ನು ಸಾಬೀತುಪಡಿಸಿದರು.
2001ರ ಕನಕಪುರ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರನ್ನು ಎದುರಿಸುವ ಮೂಲಕ ಸಂಸತ್ತಿಗೆ ಸ್ಪರ್ಧಿಸಿದ ಈಶ್ವರಪ್ಪ ರಾಷ್ಟ್ರದ ಗಮನ ಸೆಳೆದರು. ಚುನಾವಣೆಯ ನಂತರ ಮತ್ತೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ನಿಯೋಜನೆಗೊಂಡರು. ಎರಡು ಬಾರಿ ಈ ಅವಕಾಶ ಪಡೆದ ಮೊದಲಿಗರಾದರು.

2004ರ ವಿಧಾನಸಭಾ ಚುನಾವಣೆಯಲ್ಲಿ ಮೂರನೆ ಅವಧಿಗೆ ಶಿವಮೊಗ್ಗದಿಂದ ಶಾಸಕರಾದರು. ವಿಧಾನಸಭೆಯಲ್ಲಿ ಬಿಜೆಪಿಯ ಹಿರಿಯ ಸದಸ್ಯರಾಗಿದ್ದು, ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

2007 ರಲ್ಲಿ ಬಿಜೆಪಿಯ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಅದ್ಭುತವಾಗಿ ಸಾಧನೆ ಮಾಡಿದರು. ಕಳಸಾ ಬಂಡೂರಿ ಯೋಜನೆಯನ್ನು ಆರಂಭಿಸುವಲ್ಲಿ ಇವರು ತೋರಿದ ಧೈರ್ಯ ಜನ ಮೆಚ್ಚುಗೆ ಗಳಿಸಿತು. ಹತ್ತಾರು ವರ್ಷಗಳಿಂದ ಕುಂಟುತ್ತಾ ಸಾಗಿದ್ದ 39 ಯೋಜನೆಗಳನ್ನು ಮುಗಿಸಿದ್ದೂ ಗಮನಾರ್ಹ ಸಾಧನೆ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನ, ಕೆರೆಗಳ ಪುನರುಜ್ಜೀವನದಂತಹ ಜನಪರ ಕಾರ್ಯಗಳಿಂದ ‘ಜ್ಹಿ’ ಟೆಲಿವಿಷನ್ ನಡೆಸಿದ ಸ್ಪರ್ಧೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಎಸ್.ಎಂ.ಎಸ್. ಗಳಿಸಿ ರಾಜ್ಯದ ಅತ್ಯುತ್ತಮ ಸಚಿವ ಎಂಬ ಜನ ಮನ್ನಣೆ ಗಳಿಸಿದರು.

2008ರಲ್ಲಿ ನಡೆದ ಚುನಾವಣೆಯಲ್ಲಿ 4ನೇ ಬಾರಿಗೆ ಗೆದ್ದದ್ದು ಅಲ್ಲದೇ, ಶ್ರೀ ಯಡಿಯೂರಪ್ಪನವರ ನೇತೃತ್ವದ ಬಿ.ಜೆ.ಪಿ ಸರ್ಕಾರದಲ್ಲಿ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿ, ನಂತರ ಭಾರತೀಯ ಜನತಾ ಪಾರ್ಟಿ-ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತದನಂತರ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

2014 ರಲ್ಲಿ ವಿಧಾನಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಲೆ ಮತ್ತು ಕ್ರೀಡೆಗಳಲ್ಲಿ ತೀವ್ರ ಆಸಕ್ತಿ ಹೊಂದಿರುವ ಕೆ.ಎಸ್.ಈಶ್ವರಪ್ಪನವರು ಕಾಲೇಜಿನ ದಿನಗಳಲ್ಲಿ ಉತ್ತಮ ಖೋ-ಖೋ ಹಾಗೂ ಫುಟ್ ಬಾಲ್ ಪಟುವಾಗಿದ್ದರು. ಸಂಘದ ಘೋಷ್ ನಲ್ಲಿ ಆನಕ (Side Drum) ವಾದಕರಾಗಿಯೂ ತಮ್ಮ ಕೈಚಳಕ ತೋರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಭಿರುಚಿ ಹೊಂದಿರುವ ಶ್ರೀಯುತರು 1975ರಲ್ಲಿ Malnad Associates ಎಂಬ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಪ್ರಸಕ್ತ ಶಿವಮೊಗ್ಗದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರೂ ಆಗಿದ್ದು, ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ ಚಂದ್ರಗುಪ್ತಮೌರ್ಯ ಟ್ರಸ್ಟ್, ಕನಕ ವಿದ್ಯಾಸಂಸ್ಥೆ, ಕುರುಬರ ಸಹಕಾರ ಸಂಘ, ಶನಿದೇವರ ದೇವಸ್ಥಾನದ ಸಮಿತಿಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ.

2018 ರಲ್ಲಿ ನಡೆದ 15ನೇ ಕರ್ನಾಟಕ ವಿಧಾನ ಸಭೆಯ ಚುನಾವಣೆಯಲ್ಲಿ ಶಾಸಕರಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿಯಾಗಿ ಅಭೂತಪೂರ್ವ ಬಹುಮತದಿಂದ ಆಯ್ಕೆಯಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಶ್ರೀ ಯಡಿಯೂರಪ್ಪನವರ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇದೆಲ್ಲಕ್ಕಿಂತ ವಿಶೇಷವಾಗಿ, ಅವರೊಬ್ಬ ಕೌಟುಂಬಿಕ ವ್ಯಕ್ತಿ, ಬಿಡುವಿನ ವೇಳೆಯಲ್ಲಿ ಮಡದಿ ಮಕ್ಕಳೊಡನೆ ಕಾಲ ಕಳೆಯುವುದನ್ನು ಬಯಸುತ್ತಾರೆ. ಇಂದಿಗೂ ಪ್ರತಿ ಭಾನುವಾರ ಕುಟುಂಬದ ಸದಸ್ಯರೊಡನೆ ಮನೆಯಲ್ಲಿ ತಪ್ಪದೇ ಭಜನೆ ನಡೆಸುವ ಕೆ.ಎಸ್.ಈಶ್ವರಪ್ಪನವರ ಧೈವಭಕ್ತಿ ಅಪಾರ. ಸದಾ ತೀರ್ಥಕ್ಷೇತ್ರಗಳಿಗೆ, ದೇವಾಲಯಗಳಿಗೆ ತಪ್ಪದೇ ಭೇಟಿ ನೀಡುತ್ತಾರೆ. ಜನತೆ ಹಾಗೂ ಜನಾರ್ಧನರ ಸೇವೆಯಲ್ಲೇ ತಮ್ಮನ್ನು ತಾವು ತೊಡಗಿಕೊಂಡಿರುವ ಅಪರೂಪದ ಸರಳ ರಾಜಕಾರಣಿ ಶ್ರೀ ಕೆ.ಎಸ್.ಈಶ್ವರಪ್ಪ.

• 2006 ರಲ್ಲಿ ಬಿಜೆಪಿಯ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಸಮ್ಮಿಶ್ರ ಸರ್ಕಾರ.
• 2008ರಲ್ಲಿ ಬಿ.ಜೆ.ಪಿ ಸರ್ಕಾರದಲ್ಲಿ ಇಂಧನ ಸಚಿವರಾಗಿ ಸೇವೆ
• 2012 ರಲ್ಲಿ ಬಿಜೆಪಿ ಸರ್ಕಾರದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾಗಿ, (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಕಂದಾಯ ಸಚಿವರಾಗಿ ಸೇವೆ.
• 2019ರಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಸೇವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Bangaloreಬೆಂಗಳೂರು
Previous Post

ಬಿ.ವೈ. ವಿಜಯೇಂದ್ರಗೆ ತಪ್ಪಿದ ಅಧಿಕಾರ: ಮಾಜಿ ಸಿಎಂ ಬಿಎಸ್‌ವೈ ಹಿಡಿತ ಕಡಿಮೆಯಾಯಿತೇ?

Next Post

ಹಾಲಪ್ಪ ಹಾಗೂ ರೇಣುಕಾಚಾರ್ಯರಿಗೆ ತಪ್ಪಿದ ಸಚಿವ ಸ್ಥಾನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹಾಲಪ್ಪ ಹಾಗೂ ರೇಣುಕಾಚಾರ್ಯರಿಗೆ ತಪ್ಪಿದ ಸಚಿವ ಸ್ಥಾನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮುಂಜಾನೆ ಸುವಿಚಾರ | ಸ್ವಯಂ ಪ್ರಶಂಸೆಗಿಂತ ನಮ್ಮ ಗುಣಗಳನ್ನು ಪ್ರಪಂಚ ಗುರುತಿಸಬೇಕು

August 31, 2025
Image Courtesy: Internet

ತಿರುಪತಿ, ಚಿಕ್ಕಜಾಜೂರು ರೈಲು ಪ್ರಯಾಣಿಕರಿಗೆ ಇಲ್ಲಿದೆ ತುರ್ತು ಬಿಗ್ ಅಪ್ಡೇಟ್

August 31, 2025

ರಾಜ್ಯದಲ್ಲಿ ಸನಾತನ ಧರ್ಮವನ್ನು ಘಾಸಿಗೊಳಿಸುವ ಶಕ್ತಿಗಳು ಹೆಚ್ಚುತ್ತಿವೆ | ಸಂಸದ ಕಾಗೇರಿ ಆತಂಕ

August 31, 2025

ಸೆ.1ರಿಂದ ನಿಮ್ಮ ಜೀ ವಾಹಿನಿಯಲ್ಲಿ ಬರಲಿದ್ದಾರೆ ಕಲಿಯುಗ ಕಾಮಧೇನು ಗುರುಸಾರ್ವಭೌಮರು

August 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮುಂಜಾನೆ ಸುವಿಚಾರ | ಸ್ವಯಂ ಪ್ರಶಂಸೆಗಿಂತ ನಮ್ಮ ಗುಣಗಳನ್ನು ಪ್ರಪಂಚ ಗುರುತಿಸಬೇಕು

August 31, 2025
Image Courtesy: Internet

ತಿರುಪತಿ, ಚಿಕ್ಕಜಾಜೂರು ರೈಲು ಪ್ರಯಾಣಿಕರಿಗೆ ಇಲ್ಲಿದೆ ತುರ್ತು ಬಿಗ್ ಅಪ್ಡೇಟ್

August 31, 2025

ರಾಜ್ಯದಲ್ಲಿ ಸನಾತನ ಧರ್ಮವನ್ನು ಘಾಸಿಗೊಳಿಸುವ ಶಕ್ತಿಗಳು ಹೆಚ್ಚುತ್ತಿವೆ | ಸಂಸದ ಕಾಗೇರಿ ಆತಂಕ

August 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!