ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಯಾವುದೇ ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್ ಖಚಿತಗೊಂಡರೆ ಅಂತಹವರು 7 ದಿನಗಳ ಕಾಲ ಕಡ್ಡಾಯವಾಗಿ ಹೋಂ ಐಸೋಲೇಷನ್’ನಲ್ಲಿರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ Minister Dinesh Gunurao ಹೇಳಿದ್ದಾರೆ.
ಕೋವಿಡ್ Covid ಸಂಪುಟ ಉಪಸಮಿತಿ ಸಭೆ ಬಳಿಕೆ ಮಾತನಾಡಿರುವ ಅವರು, ಕೊರೋನಾ ಪಾಸಿಟಿವ್ Corona Positive ಬಂದರೆ 7 ದಿನ ಹೋಂ ಐಸೋಲೇಷನ್ ಆಗುವುದು ಕಡ್ಡಾಯವಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಹರಡುತ್ತಿರುವ ಕುರಿತಾಗಿ ಜನರ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಹಾಗೂ ಆರೋಗ್ಯ ತಜ್ಞರ ಸೂಚನೆಗಳನ್ನು ಪಾಲಿಸಿ ಎಂದಿದ್ದಾರೆ.
ಇನ್ನು, ಕೆಮ್ಮು, ಜ್ವರ ಸೇರಿದಂತೆ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಮಕ್ಕಳಲ್ಲಿ ಕಂಡುಬಂದರೆ ತತಕ್ಷಣವೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿ, ಅಲ್ಲದೇ ಶಾಲೆಗೆ ಕಳುಹಿಸದೇ ಇರುವುದು ಉತ್ತಮವಾದುದು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post