No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Saturday, August 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಇದು ನೀವು ಈವರೆಗೂ ಕೇಳಿರದ ಅಪರೂಪದ ಶಸ್ತ್ರಚಿಕಿತ್ಸೆ! ಏನಿದು?

ಟ್ರಸ್ಟ್ ವೆಲ್ ಆಸ್ಪತ್ರೆಯ ತಜ್ಞ ಡಾ. ಸತೀಶ್ ಅವರಿಂದ ಅತಿ ಅಪರೂಪದ ಶಸ್ತ್ರಚಿಕಿತ್ಸೆ

kalpa News by kalpa News
April 3, 2021
in Small Bytes, ಬೆಂಗಳೂರು ನಗರ
0
ಇದು ನೀವು ಈವರೆಗೂ ಕೇಳಿರದ ಅಪರೂಪದ ಶಸ್ತ್ರಚಿಕಿತ್ಸೆ! ಏನಿದು?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಬೆಂಗಳೂರು: 53 ವರ್ಷದ ರಾಜೇಶ್ (ಹೆಸರನ್ನು ಬದಲಾಯಿಸಲಾಗಿದೆ) ಬೆಂಗಳೂರಿನಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳ ಹಿಂದೆ ಅವರಿಗೆ ನಾಲಗೆಯ ಮೇಲೆ ಸಣ್ಣ ಹುಣ್ಣು ಕಾಣಿಸಿಕೊಂಡಿತು. ತಂಬಾಕು ಸೇವನೆಯ ಅಭ್ಯಾಸ ಇಲ್ಲದೇ ಇರೋದ್ರಿಂದ ಹುಣ್ಣಿನ ಬಗ್ಗೆ ಅವರು ಹೆಚ್ಚೇನೂ ತಲೆ ಕೆಡಿಸಿಕೊಳ್ಳಲಿಲ್ಲ. ಆದ್ರೆ ಕೆಲವು ವಾರಗಳವರಗೆ ನಾನಾ ಬಗೆಯ ಔಷಧಗಳನ್ನು ತೆಗೆದುಕೊಂಡರೂ ಅವರ ಬಾಯಿಯ ಹುಣ್ಣು ಸ್ವಲ್ಪವೂ ಕಡಿಮೆಯಾಗಲೇ ಇಲ್ಲ. ಕೊನೆಗೆ ಪರಿಚಿತರ ಸೂಚನೆಯಂತೆ ಟ್ರಸ್ಟ್ ವೆಲ್ ಆಸ್ಪತ್ರೆಯ ಡಾ ಸತೀಶ್ ಅವರರನ್ನು ಭೇಟಿಯಾದರು.

ಆಸ್ಪತ್ರೆಯ ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಆಗಿರುವ ಡಾ ಸಿ. ಸತೀಶ್, ನಾಲಗೆಯ ಬಯಾಪ್ಸಿ ಮತ್ತು ಸಿಟಿ ಸ್ಕ್ಯಾನ್ ಮಾಡಲು ತಿಳಿಸಿದರು. ಆಗ ರಾಜೇಶ್ ಅವರ ಅರ್ಧದಷ್ಟು ನಾಲಗೆ ಮತ್ತು ಕುತ್ತಿಗೆಯ ಲಿಂಫ್ ನೋಡ್ಗಳಿಗೆ ಕ್ಯಾನ್ಸರ್ ಹರಡಿರುವುದು ತಿಳಿಯಿತು. ಅದು ಇನ್ನಷ್ಟು ಹರಡದಂತೆ ತಡೆಯಲು ಮುಕ್ಕಾಲು ಭಾಗ (ಶೇ.75ರಷ್ಟು) ನಾಲಗೆ ಮತ್ತು ಕುತ್ತಿಗೆಯ ಎರಡೂ ಬದಿಯ ಲಿಂಫ್ ನೋಡ್ಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಲಾಯಿತು. ಇದಾದ ನಂತರ ಮಾರ್ಚ್ 5, 2021ರಂದು ನಾಲಗೆಯ ಪುನರ್ ನಿರ್ಮಾಣದ ವಿಶಿಷ್ಟ ಶಸ್ತ್ರಚಿಕಿತ್ಸೆಯನ್ನು ಡಾ ಸತೀಶ್ ಸಿ ನೇತೃತ್ವದಲ್ಲಿ ಮಾಡಲಾಯಿತು.
ಅತಿ ಅಪರೂಪದ ಪುನರ್ ನಿರ್ಮಾಣದ ಶಸ್ತ್ರಚಿಕಿತ್ಸೆ ನಿರ್ವಹಿಸಿದ ಟ್ರಸ್ಟ್‌ವೆಲ್ ಹಾಸ್ಪಿಟಲ್‌ನ ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಆಗಿರುವ ಡಾ. ಸತೀಶ್ ಮಾತನಾಡಿ, ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಬದಲಿ ನಾಲಗೆಯನ್ನು ಜೋಡಿಸುವಾಗ ದೇಹದ ಹೊರಭಾಗದ ಚರ್ಮವನ್ನು ಪಡೆದು ಅದನ್ನು ನಾಲಗೆಯ ಹೊರಮೈಗೆ ಜೋಡಿಸಲಾಗುತ್ತದೆ. ಇಂಥಾ ನಾಲಗೆ ಇದ್ದಾಗ ಚರ್ಮದ ಮೇಲ್ಭಾಗದಲ್ಲಿ ಕೂದಲು ಬೆಳೆದು ರೋಗಿ ಬಾಯಿ ತೆರೆದಾಗ ಅಸಹ್ಯವಾಗಿ ಕಾಣುತ್ತದೆ. ಅಲ್ಲದೇ ಚರ್ಮ ಸದಾ ಒಣಗಿದಂತೆ ಇರುವುದರಿಂದ ರೋಗಿಗೆ ಯಾವಾಗಲೂ ಬಾಯಾರಿಕೆ ಎನಿಸುತ್ತಿರುತ್ತದೆ. ನಾಲಗೆಯ ಮೇಲೆ ತೇವಾಂಶ ಇರುವುದರಿಂದಲೇ ಮಾತನಾಡಲು ಸಾಧ್ಯ, ಅದೇ ಇಲ್ಲದಿದ್ದಾಗ ಮಾತು ಕೂಡಾ ಕಷ್ಟವಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ನಾವು ವಿಭಿನ್ನವಾದ ಪರಿಹಾರ ಕಂಡುಕೊಂಡೆವು. ರೋಗಿಯ ಜಠರದ ಪದರವನ್ನು ತೆಗೆದು ಅದನ್ನೇ ನಾಲಗೆಯ ಆಕಾರಕ್ಕೆ ಬದಲಿಸಿದೆವು. ಜಠರದ ಒಳಮೈಯ ಭಾಗವನ್ನು ನಾಲಗೆಯ ಮೇಲ್ಪದರವಾಗಿ ಇರಿಸಿ ಜೋಡಿಸಿದೆವು. ಇದರಿಂದಾಗಿ ಹೊಸಾ ನಾಲಗೆಯ ಮೇಲ್ಪದರ ಹಿಂದಿನಂತೆಯೇ ತೇವದಿಂದ ಕೂಡಿದ್ದು, ರೋಗಿ ಮೊದಲಿನಂತೆಯೇ ಮಾತನಾಡಲು ಹಾಗೂ ಊಟವನ್ನು ನುಂಗಲು ಸಾಧ್ಯವಾಗುತ್ತಿದೆ ಎಂದರು.
ಟ್ರಸ್ಟ್‌ವೆಲ್ ಹಾಸ್ಪಿಟಲ್‌ನ ಸಿಎಂಡಿ ಡಾ. ಹೆಚ್.ವಿ. ಮಧುಸೂಧನ್ ಮಾತನಾಡಿ, ಈಗಾಗಲೇ ಉಳಿದಿದ್ದ ರೋಗಿಯ ನಾಲಗೆಯ ಶೇ.25ರಷ್ಟು ಭಾಗಕ್ಕೆ ಹೊಸ ಭಾಗವನ್ನು ಜೋಡಿಸಲಾಗಿದೆ. 8 ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯಿಂದ ರೋಗಿ ಆರಾಮಾಗಿ ಮಾತನಾಡಲು ಮತ್ತು ಊಟಮಾಡಲು ಸಾಧ್ಯವಾಗಿದೆ. ಅರಿವಳಿಕೆ ತಂಡ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಐಸಿಯು ಆರೈಕೆ ರೋಗಿಯನ್ನು ಚೆನ್ನಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿದೆ. ಕರ್ನಾಟಕದಲ್ಲಿ ಈ ರೀತಿಯ ಮೊಟ್ಟಮೊದಲ ಶಸ್ತ್ರಚಿಕಿತ್ಸೆ ಇದಾಗಿದೆ. ಈ ಪ್ರಕರಣದ ಮೂಲಕ ಟ್ರಸ್ಟ್‌ವೆಲ್ ಹಾಸ್ಪಿಟಲ್‌ನ ಡಾ. ಸತೀಶ್ ಮತ್ತು ತಂಡವು ಇದೇ ಬಗೆಯ ಸಮಸ್ಯೆಗಳಿಂದ ಬಳಲುವ ಹಲವಾರು ರೋಗಿಗಳಿಗೆ ಭರವಸೆ ಮೂಡಿಸಿದ್ದಾರೆ ಎಂದರು.
ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯಿಂದ ಹೊಸ ನಾಲಿಗೆಯನ್ನು ಪಡೆದ ಆಟೋ ಡ್ರೈವರ್ ರಾಜೇಶ್ (ಹೆಸರು ಬದಲಿಸಲಾಗಿದೆ) ಮಾತನಾಡಿ, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ನನಗೆ ಟ್ರಸ್ಟ್ ವೆಲ್ ಆಸ್ಪತ್ರೆಯಿಂದ ಬಹಳಷ್ಟು ನೆರವಾಗಿದೆ. ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯಿಂದ ನಾನು ಈಗ ಮಾತನಾಡಲು ಸಾಧ್ಯವಾಗಿದೆ. ಇಲ್ಲದಿದ್ದರೆ ಬಹಳ ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತಿತ್ತು ಎಂದರು.
ಈ ಸಂಧರ್ಭದಲ್ಲಿ ಟ್ರಸ್ಟ್ ವೆಲ್ ಆಸ್ಪತ್ರೆಯ ನಿರ್ದೇಶಕರಾದ ಡಾ ದೀಪಕ್ ಹಲ್ದೀಪುರ್, ಡಾ ಎನ್ ಎಸ್ ಚಂದ್ರಶೇಖರ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaoncologistOperationTrust Well Hospitalಆಂಕೊಲಾಜಿಸ್ಟ್ಟ್ರಸ್ಟ್ ವೆಲ್ ಆಸ್ಪತ್ರೆಬೆಂಗಳೂರುಶಸ್ತ್ರಚಿಕಿತ್ಸೆ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ರಾಮೇಶ್ವರ ಜಾತ್ರೆ ಸಂಪನ್ನ

Next Post

ಕಬ್ಜ ಚಿತ್ರೀಕರಣ ವೇಳೆ ನಟ ಉಪೇಂದ್ರ ತಲೆಗೆ ಪೆಟ್ಟು!

kalpa News

kalpa News

Next Post
ಉಗ್ರರನ್ನು ಮಟ್ಟ ಹಾಕಲು ನಟ ಉಪೇಂದ್ರ ಸೂಚಿಸಿದ ಐಡಿಯಾ ಏನು ಗೊತ್ತಾ?

ಕಬ್ಜ ಚಿತ್ರೀಕರಣ ವೇಳೆ ನಟ ಉಪೇಂದ್ರ ತಲೆಗೆ ಪೆಟ್ಟು!

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL