ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಿತ್ರರಂಗದ ಹಿರಿಯ ನಟ ಎಸ್. ಶಿವರಾಂ ಅವರ ನಿಧನಕ್ಕೆ ನಟ ಜಗ್ಗೇಶ್ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಶಿವರಾಂ ರವರು ಕಂಠೀರವ ಸ್ಟುಡಿಯೋದಲ್ಲಿ ಈ ಪಾತ್ರ ಮಾಡುವಾಗ ಈ ಸನ್ನಿವೇಶಕ್ಕೆ ಹುಡುಗರು ಬೇಕು ಎಂದಾಗ ಅಲ್ಲಿ ನಿಂತಿದ್ದ ನನ್ನನ್ನು ಕರೆದು ನಿಲ್ಲಿಸಿದರು ಆಗ ನನಗೆ ೧೬ ವರ್ಷ! ಅಷ್ಟಕ್ಕೆ ನಾನು ಪುಳಕಿತನಾಗಿದ್ದೆ!.
ನಾನು ನಾಯಕನಟ ಆದಮೇಲೆ ನನ್ನ ಅನೇಕ ಚಿತ್ರದಲ್ಲಿ ನಟಿಸಿದ್ದರು! ಮುನಿಸಿನ ಸ್ವಭಾವದ ವ್ಯಕ್ತಿ!ಬಹಳ ತಿಳಿದಿದ್ದವರು! ಇಂದಿನ ತಲೆಮಾರಿಂದ ಸ್ವಲ್ಪ ದೂರ ಉಳಿಯುತ್ತಿದ್ದರು! ಎಂದಿದ್ದಾರೆ.
ಶಿವರಾಂ ರವರು ಕಂಠೀರವ ಸ್ಟುಡಿಯೋದಲ್ಲಿ ಈ ಪಾತ್ರ ಮಾಡುವಾಗ ಈ ಸನ್ನಿವೇಶಕ್ಕೆ ಹುಡುಗರು ಬೇಕು ಎಂದಾಗ ಅಲ್ಲಿ ನಿಂತಿದ್ದ ನನ್ನನ್ನು ಕರೆದು ನಿಲ್ಲಿಸಿದರು ಆಗ ನನಗೆ 16ವರ್ಷ!
ಅಷ್ಟಕ್ಕೆ ನಾನು ಪುಳಕಿತನಾಗಿದ್ದೆ!
ನಾನು ನಾಯಕನಟ ಆದಮೇಲೆ ನನ್ನ ಅನೇಕ ಚಿತ್ರದಲ್ಲಿ ನಟಿಸಿದ್ದರು! ಮುನಿಸಿನ ಸ್ವಭಾವದ ವ್ಯೆಕ್ತಿ!ಬಹಳ ತಿಳಿದಿದ್ದವರು!ಇಂದಿನ ತಲೆಮಾರಿಂದ pic.twitter.com/rNAp7dbxko— ನವರಸನಾಯಕ ಜಗ್ಗೇಶ್ (@Jaggesh2) December 4, 2021
ಕಲಾವಿದರ ಸಂಘಕ್ಕೆ ಅಣ್ಣನ ಜೊತೆ ಬಹಳ ಕಷ್ಟಪಟ್ಟವರು! ಯಾವುದೆ ಸಂಘವಿಷಯಕ್ಕೆ ಅಣ್ಣ ಇವರ ಕರೆಸುತ್ತಿದ್ದರು! ಪುಟ್ಟಣ್ಣ ಕಣಗಾಲ್, ಅಂಬರೀಶ್, ವಿಷ್ಣುರವರ ಆತ್ಮೀಯ ಬಳಗದವರು! ಉದ್ಯಮದಲ್ಲಿ ಯಾರೆ ಕಾಲವಾದರು ಹಿರಿಯನಾಗಿ ನಿಲ್ಲುತ್ತಿದ್ದರು! ಅಯ್ಯಪ್ಪನ ಪರಮ ಭಕ್ತರು! ಪೂಜೆ ಮಾಡುತ್ತಾ ಸಾವಿಗೆ ಶರಣು !ನಿಮ್ಮ ಆತ್ಮಕ್ಕೆ ಶಾಂತಿ ಎಂದು ಕಂಬನಿ ಮಿಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post