ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಿಜ್ಬುಲ್ ಮುಜಾಹಿದ್ದೀನ್ Hijbul Mujahiddin ಉಗ್ರ ಸಂಘಟನೆಗೆ ಸೇರಿದ ತಾಲಿಬ್ ಹುಸೇನ್ ಎಂಬ ಶಂಕಿತ ಭಯೋತ್ಪಾದಕನನ್ನು ಜಮ್ಮು ಪೊಲೀಸರು ಬಂಧಿಸಿದ್ದಾರೆ.
ಕಣಿವೆ ರಾಜ್ಯ ಜಮ್ಮು ಪೊಲೀಸರು ಬೆಂಗಳೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತ ಉಗ್ರ ತಾಲಿಬ್’ನನ್ನು ನಿನ್ನೆ ಬಂಧಿಸಿ ಕರೆದೊಯ್ದಿದ್ದಾರೆ.
ಶ್ರೀರಾಂಪುರದ ಓಕಳಿಪುರಂನಲ್ಲಿ ಹೆಂಡತಿ ಹಾಗೂ ಮಗುವಿನೊಂದಿಗೆ ವಾಸವಿದ್ದ ಈಗ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಈತನ ಬಳಿ ಆಧಾರ್ ಕಾರ್ಡ್ ಸಹ ಇದ್ದು, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಎಂಟು ವರ್ಷಗಳಿಂದ ವಾಸವಿದ್ದ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಎರಡು ಹಾಗೂ ಜಮ್ಮುವಿನಲ್ಲಿ ಒಂದು ಮದುವೆಯಾಗಿ ಇಲ್ಲಿಯೇ ವಾಸವಿದ್ದ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post