ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದ #Shri Purandharadasara Aradhane ಅಂಗವಾಗಿ ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಜನವರಿ 20-29ವರೆಗೂ ವಿವಿಧ ರೀತಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಲ್ಲೇಶ್ವರಂನ ಸುಧೀಂದ್ರನಗರ ಈಜುಕೊಳದ ಬಡಾವಣೆ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendraswamy Mutt ಕಲ್ಲಾಪುರ ಪವಮಾನಾಚಾರ್ಯರಿಂದ ಶ್ರೀ ಪುರಂದರದಾಸರು ವಿಷಯವಾಗಿ ಧಾರ್ಮಿಕ ಪ್ರವಚನ ಸೇರಿ ಎಲ್ಲ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿವೆ.
Also read: ಭದ್ರಾವತಿ | ಭೀಕರ ರಸ್ತೆ ಅಪಘಾತ | ವೈದ್ಯಕೀಯ ವಿದ್ಯಾರ್ಥಿನಿ ದಾರುಣ ಸಾವು
ಯಾವತ್ತು ಏನು ಕಾರ್ಯಕ್ರಮ ನಡೆಯಲಿದೆ?
- ಜ.20, ಸೋಮವಾರ: ಉಡುಪಿ ಭಂಡಾರಕೇರಿ ಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರಿAದ ಕಾರ್ಯಕ್ರಮದ ಉದ್ಘಾಟನೆ ಮತ್ತು ಅನುಗ್ರಹ ಸಂದೇಶ.
- ಜ.21, ಮಂಗಳವಾರ: ಶ್ರೀ ವೇಣುಗೋಪಾಲ ಭಂಡಾರಿ ಮತ್ತು ಸಂಗಡಿಗರಿAದ ಕೊಳಲು ವಾದನ
- ಜ.22, ಬುಧವಾರ: ವಿ|| ಶಾಂಭವಿ ಎ.ಎಚ್. ಮತ್ತು ಸಂಗಡಿಗರಿAದ ಹರಿದಾಸ ವಾಣಿ
- ಜ.23, ಗುರುವಾರ: ಕು|| ಅಹಿಕಾ ನಾಗದೀಪ್ ಮತ್ತು ಸಂಗಡಿಗರಿAದ ವೀಣಾ ವಾದನ
- ಜ.24, ಶುಕ್ರವಾರ: ಕು|| ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿAದ ಸ್ಯಾಕ್ಸೋಫೋನ್ ವಾದನ
- ಜ.25, ಶನಿವಾರ: ಶ್ರೀ ಗುಲ್ಬರ್ಗ ಗುರುರಾಜದಾಸರು ಮತ್ತು ಸಂಗಡಿಗರಿAದ ಹರಿ ಭಜನೆ
- ಜ.26, ಭಾನುವಾರ: ಕು|| ಅಭಿಜ್ಞಾ ಪಿ. ಕಶ್ಯಪ್ ಮತ್ತು ಸಂಗಡಿಗರಿAದ ಹರಿನಾಮ ಸಂಕೀರ್ತನೆ
- ಜ.27, ಸೋಮವಾರ: ಕು|| ಸುಶ್ರಾವ್ಯ ಆಚಾರ್ಯ ಮತ್ತು ಸಂಗಡಿಗರಿAದ ಹರಿದಾಸ ಮಂಜರಿ
- ಜ. 28, ಮಂಗಳವಾರ: ಕು|| ಹಂಸ ಬಿ.ಎನ್. ಮತ್ತು ಸಂಗಡಿಗರಿAದ ಹರಿದಾಸ ಝೇಂಕಾರ
- ಜ.29, ಬುಧವಾರ: ಮ||ಶಾ||ಸಂ|| ಶ್ರೀ ಕ¯್ಲÁಪುರ ಪವಮಾನಾಚಾರ್ಯರಿಂದ ಶ್ರೀ ಪುರಂದರದಾಸರು ವಿಷಯವಾಗಿ ಧಾರ್ಮಿಕ ಪ್ರವಚನ.
ಮಹಾಭಾರತ (ಆದಿಪರ್ವ) ಪ್ರವಚನ
ಪೂರ್ಣಪ್ರಜ್ಞ ಪ್ರತಿಷ್ಠಾನದ ವತಿಯಿಂದ ಜ.20 ರಿಂದ 25ರವರೆಗೆ ಪ್ರತಿದಿನ ಸಂಜೆ 6-30ಕ್ಕೆ `ರಾಷ್ಟ್ರಪ್ರಶಸ್ತಿ’ ಪುರಸ್ಕೃತ’ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರಿಂದ ಮಹಾಭಾರತ (ಆದಿಪರ್ವ) ಪ್ರವಚನ ಏರ್ಪಡಿಸಿದೆ.
ಕತ್ರಿಗುಪ್ಪೆಯಲ್ಲಿರುವ ಶ್ರೀಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಪ್ರವಚನ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post