ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಹಂತ ಜ್ಯೋತಿ ಟ್ರಸ್ಟ್ 70ನೇ ಕನ್ನಡ ನಾಡ ಹಬ್ಬದ ಪ್ರಯುಕ್ತ ಹಂಸ ಸಾಂಸ್ಕೃತಿಕ ಸಾಮಾಜಿಕ ಸಿಂಚನ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ನಗರದ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ರೋಗಿಗಳಿಗೆ ಉಚಿತವಾಗಿ ಹಣ್ಣು ಹಂಪಲು ಬನ್ನು ಮತ್ತು ಸಿಹಿ ವಿತರಣೆ ಕಾರ್ಯಕ್ರಮವನ್ನು ನ.20 ಗುರುವಾರ ಆಯೋಜಿಸಲಾಗಿದೆ.
ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಯ ನಿರ್ದೇಶಕ ಡಾ. ಟಿ ನವೀನ್ ಸಮಾರಂಭ ಉದ್ಘಾಟಿಸಲಿದ್ದು ಹಿರಿಯರಂಗ ಸಂಘಟಕ ಶ್ರೀನಿವಾಸ ಜಿ ಕಪ್ಪಣ್ಣ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟ ಮತ್ತು ನೃತ್ಯಪಟು ಡಾ. ಶ್ರೀಧರ್, ಲವ್ಲಿ ಸ್ಟಾರ್ ಪ್ರೇಮ್, ವಿದ್ಯಾರ್ಥಿ ಭವನದ ಮಾಲೀಕ ರಾಮಕೃಷ್ಣ ಅಡಿಗ, ಮಾಜಿ ಶಾಸಕ ಎಸ್ ಬಾಲರಾಜ್, ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಎಲ್ ನರಸಿಂಹಮೂರ್ತಿ, ವಿಶ್ವ ವೆಂಕಟೇಶ್ವರ ಇಂಟರ್ನ್ಯಾಷನಲ್ ಸ್ಕೂಲ್ ನ ವ್ಯವಸ್ಥಾಪಕ ನಿರ್ದೇಶಕ ಕೆ ಬಾಲಾಜಿ ಬಾಬು, ವಾಣಿಜ್ಯೋದ್ಯಮಿ ಎಸ್ ಟಿ ಉದಯಕುಮಾರ್, ಸಮಾಜಸೇವಕ ಎಂ ಜಯಕುಮಾರ್, ಕರ್ನಾಟಕ ಪದ್ಮಶಾಲಿ ಸಂಘದ ಅಧ್ಯಕ್ಷ ಎನ್ ಜಗದೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಕೆ ಮತ್ತು ಆರ್ ಗೀತಾ, ಚಲನಚಿತ್ರ ನಿರ್ಮಾಪಕಿ ಡಾ. ಸುಕನ್ಯಾ ಹಿರೇಮಠ, ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ನಿರ್ವಾಹಕಿ ಶ್ರೀ ಲಕ್ಷ್ಮಿ ಪ್ರಸಾದ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post