ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾಡಪ್ರಭು ಕೆಂಪೇಗೌಡರು Kempegowda ದೂರದೃಷ್ಟಿಯಿಂದ ಚಿಂತನೆಯಿಂದ ನಿರ್ಮಿಸಿದ ಕನಸಿನ ಬೆಂಗಳೂರು ನಗರ ವಿಶ್ವದ ಗಮನ ಸೆಳದಿದೆ ಎಂದು ಸಚಿವ ವಿ. ಸೋಮಣ್ಣ Minister V Somanna ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಪಾಲಿಕೆ ಸೌಧ ಅವರಣದಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಅಚರಿಸಲಾಯಿತು.
ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಸ್ಥಳೀಯ ಶಾಸಕರು ,ವಸತಿ ಸಚಿವರಾದ ವಿ.ಸೋಮಣ್ಣ, ವಿಧಾನಪರಿಷತ್ ಸದಸ್ಯರಾದ ಅ. ದೇವೇಗೌಡ, ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜ ಸೋಮಣ್ಣ, ಶ್ರೀಮತಿ ದಿವ್ಯಾ ಅವಿನಾಶ್ ನಾಡಪ್ರಭು ಕೆಂಪೇಗೌಡ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
Also read: ಬೆಂಗಳೂರಿನ ಅಭಿವೃದ್ಧಿಗೆ ಕೆಂಪೇಗೌಡರು ನೀಡಿದ ಕೊಡುಗೆ ಸದಾ ಸ್ಮರಣೀಯ: ಸಚಿವ ಗೋಪಾಲಯ್ಯ
ಸಚಿವ ವಿ.ಸೋಮಣ್ಣ ಮಾತನಾಡಿ, ಸಮರ್ಥ, ಶೇಷ್ಠ ಆಡಳಿತಗಾರ, ಜಾತ್ಯತೀತ ಸಿದ್ದಾಂತದ ಹರಿಕಾರ ನಾಡಪ್ರಭು ಕೆಂಪೇಗೌಡರು ಕಾಯಕ ಸಮಾಜವನ್ನು ವೃತ್ತಿಯಾಧಾರಿತ 64 ಪೇಟೆಗಳನ್ನು ಬೆಂಗಳೂರು ನಗರದಲ್ಲಿ ನಿರ್ಮಿಸಿದರು. ಕಬ್ಬನ್ ಪೇಟೆ, ಅರಳೆಪೇಟೆ, ಗಾಣಿಗರಪೇಟೆ, ಮಡಿವಾಳ ಪೇಟೆ, ಅಕ್ಕಿಪೇಟೆ, ಹೂವಾಡಿಗರ ಪೇಟೆ, ತರಗುಪೇಟೆ ಈಗೇ 64ಪೇಟೆಗಳನ್ನು ವೃತ್ತಿಗೆ ತಕ್ಕಂತೆ ಪೇಟೆಗಳನ್ನು ನಿರ್ಮಿಸಿದರು.
ಪರಿಸರದ ಬಗ್ಗೆ ಅಪಾರ ಕಾಳಜಿ ಇದ್ದ ನಾಡಪ್ರಭುಗಳು 200ಕ್ಕೂ ಹೆಚ್ಚು ಕೆರೆ ಮತ್ತು ಕಲ್ಯಾಣಿಗಳನ್ನು ನಿರ್ಮಿಸಿದರು. ಬೆಂಗಳೂರು ನಗರದಲ್ಲಿ ಪರಿಸರ ಉಳಿಸಲು ಬೀದಿ ಬದಿಯಲ್ಲಿ ಸಸಿ ನೆಡಿಸಿ, ಪರಿಸರ ಉಳಿಸಲು ಶ್ರಮಿಸಿದರು. ನಗರದಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದರು.
ಮಾಜಿ ಪ್ರಧಾನಿ ವಾಜಪೇಯಿರವರ ಆಡಳಿತದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರು ಇಡಲಾಯಿತು ಮತ್ತು ನಮ್ಮ ಸರ್ಕಾರದ ಅವಧಿಯಲ್ಲಿ ಯಲಹಂಕದಲ್ಲಿ ಅತಿ ಎತ್ತರದ ನಾಡಪ್ರಭುಕೆಂಪೇಗೌಡರ ಪ್ರತಿಮೆ ಲೋಕರ್ಪಣೆಯಾಗಲಿದೆ.
ನಾಡಪ್ರಭು ಕೆಂಪೇಗೌಡರ ಆದರ್ಶ ಚಿಂತನೆಗಳು, ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವ ಸಮೂಹ ಸಾಗಿದರೆ ಸಮಾಜ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಮಾಜಿ ಬಿಬಿಎಂಪಿ ಸದಸ್ಯರುಗಳಾದ ಕೆ. ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ವಾಗೇಶ್, ಡಾ. ಎಸ್.ರಾಜು, ದಾಸೇಗೌಡರು,
ಜಯರತ್ನ, ರೂಪ ಲಿಂಗೇಶ್ವರ್, ಪಲ್ಲವಿ ಚನ್ನಪ್ಪ, ಕೊಳಗೇರಿ ಅಭಿವೃದ್ದಿ ಮಂಡಳಿ ನಿರ್ದೇಶಕರಾದ ಕ್ರಾಂತಿ ರಾಜು ರವರು ಪಾಲ್ಗೊಂಡಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post