ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಡ್ರಗ್ಸ್ ಮಾಫಿಯಾ ಜೊತೆ ಸ್ಯಾಂಡಲ್‌ವುಡ್ ಮಂದಿ ತಳುಕು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನಟಿ, ನಿರೂಪಕಿ ಅನುಶ್ರೀ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಡ್ರಗ್ಸ್ ಪ್ರಕರಣ ಎ2 ಆರೋಪಿ ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆ ಪ್ರಕಾರ ನಿರೂಪಕಿ ಅನುಶ್ರೀ ಕೂಡ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಸ್ಪೋಟಕ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಚಾರ್ಜ್ ಶೀಟ್ ನಲ್ಲಿ ಎ2 ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆ ದಾಖಲಿಸಲಾಗಿದೆ. ಅನುಶ್ರೀ ಅವರು ಸಾಕಷ್ಟು ಬಾರಿ ಡ್ರಗ್ಸ್ ಸೇವನೆ ಮಾಡಿದ್ದಾರೆ. ಡ್ಯಾನ್ಸ್ ಪ್ರ್ಯಾಕ್ಟಿಸ್ ನಲ್ಲಿ ಹಲವು ಬಾರಿ ಡ್ರಗ್ಸ್ ಸೇವನೆ ಜೊತೆಗೆ ಡ್ರಗ್ಸ್ ಸಾಗಿಸಿದ್ದಾರೆ ಎನ್ನಲಾಗಿದ್ದು, ಕಿಶೋರ್ ಮತ್ತು ತರುಣ್ ಜತೆ ಡ್ರಗ್ಸ್ ಸೇವಿಸಿದ್ದಾರೆ ಎಂದು ಕಿಶೋರ್ ಶೆಟ್ಟಿ ಆರೋಪಿಸಿರುವುದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ.
ಅಲ್ಲದೆ ಅನುಶ್ರೀಗೆ ಡ್ರಗ್ಸ್ ಪೆಡ್ಲರ್‌ಗಳ ಬಗ್ಗೆ ಚೆನ್ನಾಗಿ ಗೊತ್ತಿದ್ದು, ಅವರೇ ನಮಗೆ ಡ್ರಗ್ಸ್ ಮಾತ್ರೆಗಳನ್ನ ತಂದು ಕೊಡುತ್ತಿದ್ದರು. ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಸುಸ್ತಾಗಲ್ಲ ಎಂದು ಹೇಳುತ್ತಿದ್ದರು ಎಂದು ಕಿಶೋರ್ ಶೆಟ್ಟಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post