ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತುಮಕೂರಿನ ನಾಡಿಗ್ ಸಾಹಿತ್ಯ ಪ್ರತಿಷ್ಠಾನ ಕೊಡುವ ೨೦೨೦ ಹಾಗೂ 2020-21ನೇ ಸಾಲಿನ ರಾಜ್ಯಮಟ್ಟದ ದಿ.ಡಾ.ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿ ಪ್ರಕಟವಾಗಿದೆ.
೨೦೨೦ನೇ ಸಾಲಿನ ದಿ.ಡಾ.ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿಗೆ ಗ್ರಾಮೀಣ ಭಾಗದಲ್ಲಿ ಕಳೆದ 35 ವರ್ಷಗಳಿಂದ ರೂರಲ್ ಎಕ್ಸ್ಪ್ರೆಸ್ ಎಂಬ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಪತ್ರಿಕೆಯ ಸಂಪಾದಕರಾದ ಸೊರಬ ತಾಲೂಕಿನ ಆನವಟ್ಟಿಯ ಎಂ. ಜಗನ್ನಾಥ್’ಗೂ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಆರ್. ವಾದಿರಾಜುರವರ ಸಾರ್ಥಕ ಸಾಧನೆ ಕೃತಿಯನ್ನು ಆಯ್ಕೆ ಮಾಡಲಾಗಿದೆ.
2021ನೇ ಸಾಲಿನ ದಿ. ಡಾ.ನಾಡಿಗ್ ಕೃಷ್ಣಮೂರ್ತಿ ಪತ್ರಿಕೋದ್ಯಮ ಪ್ರಶಸ್ತಿಗೆ ಕಳೆದ ೨೫ ವರ್ಷಗಳಿಂದ ಸಾಹಿತ್ಯಕ್ಕೆ ಮೀಸಲಾದ ಮಂಡ್ಯದ ಅಡ್ವೈರ್ಸ ಮಾಸಪತ್ರಿಕೆಯನ್ನು ಯಶಸ್ವಿಯಗಿ ನಡೆಸುತ್ತಿರುವ ಸಂಪಾದಕರಾದ ಸಿ. ಬಸವರಾಜು ಹಾಗೂ ಡಾ. ಕವಿತಾಕೃಷ್ಣ ಸಾಹಿತ್ಯ ಪ್ರಶಸ್ತಿಗೆ ಪ್ರದೀಪ್ ಬೇಲೂರ್ ಅವರ ಎಲವೋ ವಿಭೀಷಣ ಕಥಾ ಸಂಕಲನವನ್ನು ಆಯ್ಕೆ ಮಾಡಲಾಗಿದೆ.
Also read: ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆ: 60 ಅಡಿ ಆಳದ ಬಾವಿಗೆ ಬಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರು
ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳ ಕೊನೆಯಲ್ಲಿ ತುಮಕೂರಿನಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಚಾಲಕರಾದ ಅಶ್ವಿನಿ ಪಿ. ನಾಡಿಗ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post