ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸರ್ಕಾರದ ಅವಗಣನೆಗೆ ಗುರಿಯಾಗಿರುವ ರಾಜ್ಯದ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಅಸ್ತಿತ್ವ ಉಳಿಸುವ ನಿಟ್ಟಿನಲ್ಲಿ ಸಂಘ ಕಾರ್ಯೋನ್ಮುಖವಾಗಲಿದ್ದು, ಸಂಘದ ಸರ್ವ ಸದಸ್ಯರ ಬೆಂಬಲ ಅತಿಮುಖ್ಯ ಎಂದು ರಾಜ್ಯ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಮತ್ತೀಕೆರೆ ಜಯರಾಂ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರಕಾರಿ ನೌಕರರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಅಯ್ಕೆ ನಂತರ ಸಂಘದ ಸಾಮಾನ್ಯಸಭೆ ಉದ್ದೇಶಿಸಿ ಮಾತನಾಡಿದರು.
ಸಂಘಟಿತರಾಗಿ ಸಂಘವನ್ನು ಅಸ್ತಿತ್ವಕ್ಕೆ ತರುವುದು ಏತಕ್ಕಾಗಿ ಎಂಬ ಪ್ರಶ್ನೆ ಈಗ ಎದುರಾಗಿದೆ. ಸದಸ್ಯರ ಹಿತಕಾಯದ ಯಾವುದೇ ಸಂಘ ಉಳಿಯುವುದಿಲ್ಲ. ಸಂಘ ಮುನ್ನಡೆಸಿಕೊಂಡು ಬಂದವರು ಇಂಥಾ ಸಾಮಾನ್ಯ ಸಂಗತಿ ಕಡೆಗಣಿಸಿದ್ದರಿಂದ ಇಂದು ಸಂಪಾದಕರ ಬದುಕು ಮೂರಾಬಟ್ಟೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಮಹತ್ವವನ್ನು ಸರ್ಕಾರ ಕಡೆಗಣಿಸಿದೆ. ಸರ್ಕಾರದ ಇಂಥಾ ಧೋರಣೆಗೆ ನಮ್ಮವರೇ ಕಾರಣರು ಎಂಬುದು ಕೂಡ ದುರಂತ ಎನ್ಮಬಹುದು. ಆದರೆ, ಸರ್ಕಾರ ನಾಲ್ಕಾರು ಮಂದಿ ನೀಡಿರುವ ದೂರಿಗೆ ಆದ್ಯತೆ ನೀಡಿ ರಾಜ್ಯದಲ್ಲಿನ ಇಡೀ ಸಣ್ಣಪತ್ರಿಕೆಗಳ ವಿರುದ್ಧ ಮರಣಶಾಸನ ಬರೆಯಲು ಹೊರಟಿರುವುದು ಸಮಂಜಸವಲ್ಲ. ಸರ್ಕಾರದ ಇಂಥಾ ನಡೆಯನ್ನು ಸಂಘದ ಅಧ್ಯಕ್ಷನಾಗಿ ಕಟುವಾಗಿ ಖಂಡಿಸುತ್ತೇನೆ. ಈ ಕುರಿತು ವಿಧಾನಸೌಧ ಮುತ್ತಿಗೆ ಹಾಕಲು ಹಿಂಜರಿಯುವುದಿಲ್ಲ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ನಾಯಕನಹಟ್ಟಿ ಮಾತನಾಡಿ, ಈ ಚುನಾವಣಾ ವರ್ಷದಲ್ಲಿ ರಾಜ್ಯ ಸರ್ಕಾರ ಜಾಹೀರಾತು ನೀಡಿಕೆಯಲ್ಲಿ ಮಾಡುತ್ತಿರುವ ತಾರತಮ್ಯ ಖಂಡನಾರ್ಹ. ಯಾವ ಸರಗಕಾರಗಳು ಇದುವರೆಗೂ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಇಂಥಾ ಅನ್ಯಾಯ ಮಾಡಿರುವ ನಿದರ್ಶನ ಇಲ್ಲ. ಈ ರೀತಿಯ ಮಲತಾಯಿ ಧೋರಣೆಯನ್ನು ಸರ್ಕಾರ ಮಾಡುವುದಿದ್ದರೆ ಜಾಹೀರಾತಿ ನೀತಿಯನ್ನು ಏಕೆ ಜಾರಿಗೊಳಿಸಬೇಕಿತ್ತು. ಇದನ್ನು ನಾವುಗಳು ಶಕ್ತಿಯಾಗಿ ಪ್ರತಿಭಟಿಸಬೇಕಿದೆ. ಅದಕ್ಕೆ ಸಂಪಾದಕರು ಅನಗತ್ಯ ಟೀಕಿಸುವುದನ್ನು ಬಿಟ್ಟು ಹೋರಾಟಕ್ಕೆ ಇಳಿಯೋಣ ಎಂದರು.
ಹಿರಿಯ ಪತ್ರಕರ್ತ ಸೋಮಶೇಖರ್ ಕೆರೆಗೋಡು ಮಾತನಾಡಿ, ಸಂಪಾದಕರ ಸಮಸ್ಯೆಗಳು ನೂರಾರು. ಇಂಥಾ ಸಂದರ್ಭದಲ್ಲಿ ಸರ್ಕಾರ ಜಾಹೀರಾತು ಹಂಚಿಕೆಯಲ್ಲಿ ಅನುಸರಿಸುತ್ತಿರುವ ತಾರತಮ್ಯ ನೀತಿ ವಿರುದ್ಧ ಸಂಪಾದಕರು ಪುಟಿದೇಳಬೇಕು. ಸಂಘದ ಪದಾಧಿಕಾರಿಗಳು ಸಕ್ರಿಯರಾಗಬೇಕು ಎಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ರವಿಕುಮಾರ್ ಟೆಲೆಕ್ಸ್ ಮಾತನಾಡಿ, ಸಂಘದ ಏಳುಬೀಳುಗಳಿಂದಾಗಿ ಸಂಪಾದಕರ ಬದುಕು ಸಂತ್ರಸ್ಥ ಸ್ಥಿತಿಗೆ ತಲುಪಿದೆ. ಏಕೆ ಹೀಗಾಗಿದೆ ಎಂಬುದು ಆತ್ಮವಲೋಕನ ಆಗಿರುವ ಪರಿಣಾಮ ಇಂದು ಸಂಪಾದಕರು ಇಲ್ಲಿ ಸೇರಿದ್ದೇವೆ. ಮತ್ತೆ ಇಂಥಾ ತಪ್ಪುಗಳಾಗದಂತೆ ಜಾಗ್ರತೆ ವಹಿಸಿ ಸಂಘ ಪುನರುಜ್ಜೀವನಗೊಳಿಸಬೇಕಿದೆ. ಆ ನಿಟ್ಟಿನಲ್ಲಿ ಸಮಸ್ತರು ಕೈಜೋಡಿಸಿದಾಗ ಮಾತ್ರ ಸಂಪಾದಕರ ಬದುಕು ಸದೃಢವಾಗಲು ಸಾಧ್ಯ ಎಂದರು.
Also read: 7 ವರ್ಷದ ನಂತರ ಹೆತ್ತವರ ಮಡಿಲು ಸೇರಿದ ಬಾಲಕಿ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಅಧಿಕಾರಿಗಳು
ಮತ್ತೊಬ್ಬ ಹಿರಿಯ ಪತ್ರಕರ್ತ ಚೆಲುವರಾಜ್ ಮಾತನಾಡಿ, ಹಿತಕಾಡುವ ಹೊಣೆಹೊತ್ತವರು ಇಂದು ಏನು ಮಾಡಿದ್ದಾರೆ ಎಂಬುದು ಗೊತ್ತೇ ಇದೆ. ಈಗದರ ವಿಮರ್ಶೆ ಬೇಕಿಲ್ಲ. ಸದ್ಯ ಚುನಾವಣಾ ವರ್ಷದಲ್ಲಿ ಜಾಹೀರಾತು ತಾರತಮ್ಯದ ವಿರುದ್ಧ ಸಂಪಾದಕರು ಹೋರಾಟ ತೀವ್ರಗೊಳಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು ಸಭೆಯಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷರು- ಮತ್ತೀಕೆರೆ ಜಯರಾಮ್
ಪ್ರಧಾನ ಕಾರ್ಯದರ್ಶಿ-
ಮಲ್ಲೇಶ್ ನಾಯಕನಹಟ್ಟಿ, ಚಿತ್ರದುರ್ಗ.
ಸಂಚಾಲಕರು- ಮಲ್ಲಿಕಾರ್ಜುನ ಕಬ್ಬೂರು.ದಾವಣಗೆರೆ.
ಸಂಘಟನಾ ಸಂಚಾಲಕರು-
ಸೋಮಶೇಖರ್ ಕೆರಗೋಡು.
ಎನ್.ರವಿಕುಮಾರ್ ಟೆಲೆಕ್ಸ್.
ಉಪಾಧ್ಯಕ್ಷರುಗಳು-
ಚೆಲುವರಾಜು.
ಕೆ.ವಿ.ಶಿವಕುಮಾರ್.
ಡಾ.ಸ್ವಾಮಿ.
ಭೀಮರಾಯ ಹದ್ದಿನಾಳ್.
ಸುರೇಶ್ ಸಿಂಧೆ.ಗುಲ್ಬರ್ಗ.
ಕಾರ್ಯದರ್ಶಿಗಳು-
ರಶ್ಮಿಪಾಟೀಲ್.
ಸೋಮಶೇಖರ್ ಗಾಂಧಿ
ಮಂಜುನಾಥ್ ಮಾಸ್ತಮ್ಮ ವಾಣಿ
ಗಣೇಶ್ ಕೋಲಾರ
ಕಲ್ಯಾಣಕುಮಾರ್.
ಖಜಾಂಚಿ-
ಎಂ.ಎಸ್.ಶಿವಪ್ರಕಾಶ್.
ನಿರ್ದೇಶಕರು-
ರವಿನಾಕಲುಗೂಡು.
ಕೆ.ಸಿ.ಮಂಜುನಾಥ್.
ಶಶಿಧರ್.
ಕುಮಾರಸ್ವಾಮಿ ಯಾದಗಿರಿ
ಮೈಲಾರಪ್ಪ.
ಎನ್.ಶಿವಶಂಕರ್
ವೀರೇಶ್ ದಾವಣಗೆರೆ
ಸಚೀಂದ್ರ ವೈ ಲಂಬು
ಅಮಾನ್ ಕೊಡಗಲಿ
ಮಹೇಂದ್ರ
ಶಾಂಭವಿ ದಾವಣಗೆರೆ.
ಅನೂಪ್ ಕುಮಾರ್
ಪೋಷಕರು-
ಮದನ್ ಗೌಡ
ಸು ತಾ ರಾಮೇಗೌಡ
ಸೊಗಡು ವೆಂಕಟೇಶ್
ಶ.ಮಂಜುನಾಥ
ಏಕಾಂತಪ್ಪ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post