ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಹೊಟೇಲ್ ಒಂದರಲ್ಲಿ ಸಿಲಿಂಡರ್ ಆಕಸ್ಮಿಕವಾಗಿ ಸ್ಪೋಟಗೊಂಡ CylinderBlast ಪರಿಣಾಮ ವ್ಯಕ್ತಿಯೊಬ್ಬರು ದುರ್ಮರಣವನ್ನಪ್ಪಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಇಲ್ಲಿನ ಡೈರಿ ಸರ್ಕಲ್ ಬಳಿಯಲ್ಲಿನ ಹೊಟೇಲ್ ಒಂದರಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ. ಸ್ಫೋಟದ ರಭಸಕ್ಕೆ ಹೋಟೆಲ್ ಶೆಟರ್ ಮುಂದೆ ಮಲಗಿದ್ದ ವೃದ್ಧ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಹೋಟೆಲ್‌ನಲ್ಲಿದ್ದ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಆಡುಗೋಡಿ ಪೊಲೀಸರು, ಅಗ್ನಿಶಾಮಕ ದಳ ಭೇಟಿ ನೀಡಿದ್ದು, ಹೋಟೆಲ್‌ನಲ್ಲಿ ಬೆಂಕಿ ನಂದಿಸಿದ್ದಾರೆ.
Also read: ಒತ್ತಡಕ್ಕೆ ಮಣಿದ ಸರ್ಕಾರ: ತಮಿಳುನಾಡಿಗೆ ನೀರು ಹರಿವಿನ ಪ್ರಮಾಣ ಇಳಿಕೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















