ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಹಲವು ಕಡೆಗಳಲ್ಲಿ ಬರಗಾಲ ಹಾಗೂ ನೀರಿನ ಕೊರತೆ ಉಂಟಾಗಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಜೂನ್ 5ರಿಂದ ರಾಜ್ಯದಾದ್ಯಂತ ಉತ್ತಮ ಮುಂಗಾರು #Good Monsoon ಆರಂಭವಾಗಲಿದೆ ಎಂದಿದೆ.
ಈ ಕುರಿತಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮೇ 31 ರಿಂದ ರಾಜ್ಯದಲ್ಲಿ ಮಾನ್ಸೂನ್ ಪ್ರಾರಂಭವಾಗಲಿದ್ದು, ಜೂನ್ 5 ರ ಸುಮಾರಿಗೆ ಎಲ್ಲೆಡೆ ಮಳೆ ಆರಂಭವಾಗಲಿದೆ ಎಂದಿದೆ.
ಇನ್ನು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳವರೆಗೆ ಮೇ 31 ರವರೆಗೆ ಪ್ರತ್ಯೇಕ ಮಳೆಯಾಗಲಿದೆ. ಅಲ್ಲದೇ, ಅಲ್ಲಲ್ಲಿ ಮಳೆ ಮುಂದುವರಿಯುತ್ತದೆ ಎಂದು ವರದಿಯಾಗಿದೆ.
Also read: ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರುವ ಡೇಟ್ ಫಿಕ್ಸ್ | ಯಾವತ್ತು ಬರ್ತಾರೆ? ನಂತರ ಏನು?
ಈ ಬಾರಿ ರಾಜ್ಯದಾದ್ಯಂತ ಅದರಲ್ಲೂ ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎನ್ನಲಾಗಿದೆ.
ನಿರೀಕ್ಷೆಯಂತೆ ರಾಜ್ಯದಲ್ಲಿ ಈ ಬಾರಿ ಉತ್ತಮ ಮುಂಗಾರು ಆರಂಭವಾದರೆ ಕೃಷಿ ಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನೀರಿನ ಕೊರತೆಯನ್ನು ನಿವಾರಿಸಲು ಇದು ಗಮನಾರ್ಹವಾಗಿ ಸಹಾಯ ಮಾಡುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post