ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು; ಜಾನಪದ ಹಾಗೂ ಸಿನಿಮಾಗಳಿಗೆ ವಿಭಿನ್ನ ಹಾಡು ನಿರ್ಮಿಸುತ್ತಿದ್ದ ಬಾಗಲಕೋಟೆ ಆರ್‌ಟಿ ರೆಕಾರ್ಡಿಂಗ್ ಸ್ಟುಡಿಯೋ ಹಾಗೂ ರೇಣುಕಾ ಹಾದಿಮನಿ ನಿರ್ಮಾಣದ ಮೊದಲನೇ ಪ್ರಯತ್ನ ಮುದ್ದು ಮಾಡೋ ಗೆಳೆಯ ಆಫೀಶಿಯಲ್ ಮ್ಯೂಸಿಕ್ ವಿಡಿಯೋ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.
ಹಲವು ಹಾಡುಗಳನ್ನು ನಿರ್ಮಿಸಿ ಉತ್ತರ ಕರ್ನಾಟಕದಾದ್ಯಂತ ಹೆಸರು ಗಳಿಸಿದ್ದ ಆರ್‌ಟಿ ರೆಕಾರ್ಡಿಂಗ್ ಸ್ಟುಡಿಯೋ ಇದೀಗ ಮುದ್ದು ಮಾಡೋ ಗೆಳೆಯ ಎಂಬ ಹೊಸ ಪ್ರಯತ್ನದೊಂದಿಗೆ ಹಾಡಿನ ಆಲ್ಬಂ ಪೂರ್ಣಗೊಂಡಿದ್ದು, ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ.
ಟೀಮ್ ಆರ್ ಟಿ ರೆಕಾರ್ಡಿಂಗ್ ಸ್ಟುಡಿಯೋ ತಂಡದ ಕಲಾವಿದರು ಅತಿ ಕಡಿಮೆ ವೆಚ್ಚದಲ್ಲಿ ಅದ್ದೂರಿ ಗೀತೆ ( ನಿರ್ಮಿಸುವ ಹೊಸ ಪ್ರಯತ್ನ ಮಾಡಿದ್ದು, ಬಾಗಲಕೋಟೆ ಉದ್ಯಮಿ ರೇಣುಕಾ ಹಾದಿಮನಿ ಅವರು ಈ ಹಾಡಿಗೆ ನಿರ್ಮಾಪಕರಾಗಿದ್ದಾರೆ.
ಉತ್ತರ ಕರ್ನಾಟಕದ ಹಳ್ಳಿ ಬೆಡಗನ್ನು ತೋರಿಸುವ ಗುರಿ ಇಟ್ಟುಕೊಂಡ ತಂಡ ಬಾಗಲಕೋಟೆ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಚಿತ್ರೀಕರಣ ಮಾಡಿದ್ದಾರೆ. ಮುದ್ದು ಮಾಡೋ ಗೆಳೆಯ ಆಲ್ಬಂ ಗೀತೆ ಪ್ರೇಮಿಗಳಿಗೆ ಹೊಸ ಕೊಡುಗೆಯಾಗಲಿದೆ ಎಂದು ಮುದ್ದು ಮಾಡೋ ಗೆಳೆಯ ತಂಡ ಅಭಿಪ್ರಾಯಪಟ್ಟಿದೆ.
ಮೊದಲ ಬಾರಿ ಆಲ್ಬಂ ನಿರ್ದೇಶನಕ್ಕಿಳಿದಿರುವ ಜವಾರಿ ಲವ್ ಸಿನಿಮಾದ ನಿರ್ದೇಶಕ ಸದಾಶಿವ ಹಿರೇಮಠ ಅವರ ಚೊಚ್ಚಲ ನಿರ್ದೇಶನ ಹಾಗೂ ರವಿ ತೇಜ ಅವರ ಸಂಗೀತ ನಿರ್ದೇಶನವಿರುವ ಈ ಹಾಡಿಗೆ ತುಷಾರ್ ಮಲಗೊಂಡ ನಟಿಸಿ, ಶಿವಾರಂಜಿನಿ ಸಾಹಿತ್ಯ ಬರೆದು ಸರಿಗಮಪ ಖ್ಯಾತಿಯ ಶ್ರೀರಕ್ಷಾ ಆಚಾರ್ಯ ಧ್ವನಿಯಾಗಿದ್ದಾರೆ. ರುಕ್ಷಾನಾ ರುಕ್ಕು ನಾಯಕಿ ನಟಿಯಾಗಿ ನಟಿಸಿದ್ದಾರೆ.
ಹಲವು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಸದಾಶಿವ ಹಿರೇಮಠ ಅವರು ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಮೋಹನ್ ಬಾಬು ರೋಣ ಅವರು ಸಹ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ, ಉದಯ ಆನಂದ್ ಬರ್ಕೆ ಅವರ ಸಂಕಲನದಲ್ಲಿ ಹಾಗೂ ಬಾಗಲಕೋಟೆ ರಾಜು ಗೋಗಿ ಮೇಕಪ್ ಮ್ಯಾನ್ ಆಗಿದ್ದು, ಬಾಳು ಬೆಳಗುಂದಿ, ಶಿವಕಾಂತ್ ಪೂಜಾರಿ, ಬೀರಣ್ಣ ಮರಿಯಾಯಿ, ಬೊಂಬಾಟ್ ಬಸಣ್ಣ, ಜೀವಾ ಅಂಬಿಗೇರ, ಶಿವು ಅಂಬಿಗೇರ, ಡಿ ವಾಯ್ ನಾಯಕ, ಡಿಜೆ ಬೀರು, ರಾಕಿ ವಾಲ್ಮೀಕಿ, ಸಂತೋಷ್ ವಿಂತ್ರಿ, ಡಿಜೆ ಅರವಿಂದ್ ಉಮರಾಣಿ, ಇಮ್ತಾಜ್, ಪರಶು ಕೋಲಾರ, ಬಸವರಾಜ ನರೇಂದ್ರ, ಬಸು ಕೋಲಾರ, ಸುದೀಪ್ ಹಳವಾರ, ಲಗಮಣ್ಣ ಮರಿಯಾಯಿ, ಮಾಳು ನಿಪ್ಪಿನಾಳ, ಮಂಜುನಾಥ ಹೆಗ್ಗೆಣವರ, ಪ್ರಕಾಶ್ ರೂಗಿ, ಮಂಜುನಾಥ ಸಂಗಳದ, ಜಕ್ಕು ಹಿರೇಕೋಡಿ, ಬೀರಾ ಬೆನ್ನಿ, ಸಿದ್ದು ಹುಕ್ಕೇರಿ, ಭೀಮಣ್ಣ ಹಿರೇಕೋಡಿ, ಭೀರಣ್ಣ ಹಿರೇಕೋಡಿ, ಭೀಮಣ್ಣ ಕಾರತ್, ತುಕಾರಾಮ ಕಾರತ್, ಮಲ್ಲಣ್ಣ ಮಂತ್ರಿ, ಮುತ್ತಣ್ಣ ಬುದಿಹಳ್ಳಿ, ನಾಗರಾಜ್ ಹೊನ್ನ ಸಿಂಗಾರಿ ಮುಂತಾದವರು ಮುದ್ದು ಮಾಡೋ ಗೆಳೆಯ ಮ್ಯೂಸಿಕ್ ಆಲ್ಬಂ ಸಾಂಗ್‌ಗೆ ಸಹಕಾರ ನೀಡಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳಿನ ಕೊನೆಯ ವಾರದಲ್ಲಿ ಆಲ್ಬಂ ಬಿಡುಗಡೆಯಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post