ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಮೈಸೂರು |
ಇತ್ತೀಚೆಗೆ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ Power Star Puneeth Rajkumar ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಮೈಸೂರು ವಿಶ್ವವಿದ್ಯಾಲಯ Mysore University ಘೋಷಣೆ ಮಾಡಿದೆ.
ಈ ಕುರಿತಂತೆ ಮಾತನಾಡಿರುವ ವಿವಿ ಕುಲಪತಿ ಪ್ರೊ.ಹೇಮಂತಕುಮಾರ್, ಇತ್ತೀಚಿಗೆ ನಮ್ಮನ್ನು ಅಗಲಿದ ಅಭಿಮಾನಿಗಳ ಆರಾಧ್ಯ ದೈವ, ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದಿದ್ದಾರೆ.
ದಿ. ಪುನೀತ್ ಪತ್ನಿ ಅಶ್ವಿನಿ Ashwini Puneeth ಅವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಲಾಗಿದೆ. ಅವರು ಘಟಿಕೋತ್ಸವಕ್ಕೆ ಬರಲು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು, ವಿವಿಯ ಆಹ್ವಾನವನ್ನು ಸ್ವೀಕರಿಸಿ ಮಾತನಾಡಿರುವ ಅಶ್ವಿನಿ ಅವರು, ಪುನೀತ್ ಅವರು ಬದುಕಿದ್ದಾಗ ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದ್ದವು. ಆದರೆ, ಇದನ್ನು ನಯವಾಗಿಯೇ ನಿರಾಕರಿಸಿದ್ದ ಅವರು, ಅಪ್ಪಾಜಿ ಡಾ.ರಾಜಕುಮಾರ್ ಅವರಿಗೂ ಗೌರವ ಡಾಕ್ಟರೇಟ್ ದೊರೆತಿದ್ದು ಪ್ರಸ್ತಾಪಿಸಿದಾಗ, ಅವರ ಸಮಾನಕ್ಕೆ ನನ್ನ ಹೋಲಿಕೆ ಬೇಡ. ಅವರೆಲ್ಲಿ, ನಾನೆಲ್ಲಿ. ನಾನಿನ್ನೂ ಸಣ್ಣವನು. ನನಗೆ ಇವೆಲ್ಲ ಬೇಡ ಎಂದು ನಿರಾಕರಿಸಿದ್ದರು ಎಂದಿದ್ದಾರೆ.
Also read: ಕಾರ್ಕಳ ಸಮಾಜಕ್ಕಾಗಿ ಮಿಡಿಯುತ್ತಿದ್ದ ಸುದೀಪ್ ಶೆಟ್ಟಿ ಅಕಾಲಿಕ ನಿಧನ
ಮೈಸೂರು ವಿಶ್ವವಿದ್ಯಾನಿಲಯದ 102ನೆಯ ಘಟಿಕೋತ್ಸವ ಮಾರ್ಚ್ 22ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಸರಕಾರಕ್ಕೆ 12 ಹೆಸರನ್ನು ಕಳುಹಿಸಿದ್ದೆವು. ಉನ್ನತ ಮಟ್ಟದ ಸಮಿತಿ ಮೂವರ ಹೆಸರನ್ನು ಶಿಫಾರಸು ಮಾಡಿತ್ತು. ಸರಕಾರಕ್ಕೆ ಇದಕ್ಕೆ ಒಪ್ಪಿಗೆ ಸೂಚಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post