ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೂಚಿಪುಡಿ ಫೌಂಡೇಶನ್ Koochipudi Foundation ಹಾಗೂ ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಸಹಕಾರದೊಂದಿಗೆ ಜೂನ್ 29ರಂದು ನಗರದಲ್ಲಿ ನಂದನಾರ್ ಚರಿತ್ರಂ ನೃತ್ಯನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಮಲ್ಲೇಶ್ವರಂ ಸೇವಾ ಸದನ್ ಆಡಿಟೋರಿಯಂನಲ್ಲಿ ಸಂಜೆ 6 ಗಂಟೆಯಿಂದ ಉಚಿತ ಪ್ರದರ್ಶನ ನಡೆಯಲಿದೆ.
ವೆಂಕಟ್ ಗಡೇಪಲ್ಲಿ ರಾಜಮಂಡ್ರಿ ತೆಲುಗಿನಲ್ಲಿ ಬರೆದ ಚಿತ್ರಕಥೆಗೆ, ಹೈದರಾಬಾದ್ ಸ್ವೇತಾ ಪ್ರಸಾದ್ ಅವರ ಸಂಗೀತ ಸಂಯೋಜನೆ ಮತ್ತು ಆಡಿಯೋ ಆರ್ಕೆಸ್ಟ್ರಾ ಇದೆ. ಆಚಾರ್ಯ ದೀಪಾ ನಾರಾಯಣನ್ ಸಶಿಂದ್ರನ್ ಅವರ ಪರಿಕಲ್ಪನೆ, ನೃತ್ಯ ಸಂಯೋಜನೆ ಮತ್ತು ನಿರ್ದೇಶನ ಒಳಗೊಂಡಿದೆ. ಅವರು ಕೂಚಿಪುಡಿ ನೃತ್ಯಪಟು ಹಾಗೂ ಕೂಚಿಪುಡಿ ಪರಂಪರಾ ಫೌಂಡೇಷನ್ ಟ್ರಸ್ಟ್ ನ ಲೈಫ್ ಟ್ರಸ್ಟಿ ಆಗಿದ್ದಾರೆ.
ನಂದನಾರ್ ದಕ್ಷಿಣ ಭಾರತದಲ್ಲಿ 12ನೇ ಶತಮಾನದಲ್ಲಿ ಶಿವ ಭಗವಾನನ ಬಹುದೊಡ್ಡ ಭಕ್ತನಾಗಿದ್ದು ಬಡ ರೈತ ಕುಟುಂಬದಿಂದ ಜನಿಸಿದ್ದನು. ಈ ಕಥೆಯು ಆತನಿಗೆ ಸಂಬಂಧಿಸಿದ ಎರಡು ವಿಸ್ಮಯಗಳಿಗೆ ಆದ್ಯತೆ ನೀಡುತ್ತದೆ. ತಿರುಪುಂಕುರ್ನ ಸಿವಲೋಕಾಂಥರ್ ದೇವಾಲಯದಲ್ಲಿ ಆತನ ಪ್ರಾರ್ಥನೆಯಿಂದ ಬೃಹತ್ ಕಲ್ಲಿನ ಬಸವ ಚಲಿಸಿತು, ಅದು ಇಂದಿಗೂ ದೇವಾಲಯದಲ್ಲಿ ಚಲಿಸಿದ ಸ್ಥಾನದಲ್ಲಿ ಕಾಣುತ್ತದೆ. ನಂದನಾರ್ ಚಿದಂಬರಂನ ತಿಲ್ಲೈ ನಟರಾಜ ದೇವಾಲಯದಲ್ಲಿ ತನ್ನನ್ನು ತಾನು ಅಗ್ನಿಯಿಂದ ಶುದ್ಧೀಕರಿಸಿಕೊಂಡನು ಎಂದು ಹೇಳಲಾಗುತ್ತದೆ. ನಂದನಾರ್ ಕಥೆಯು ಈ ಎರಡೂ ದೇವಾಲಯಗಳ ಧಾರ್ಮಿಕ ಸಾಹಿತ್ಯದಲ್ಲಿದೆ.
Also read: ಪ್ರಧಾನಿ ಮೋದಿ ಆಡಳಿತ 8 ವರ್ಷ ಪೂರ್ಣ: ಬಂಟ್ವಾಳದಲ್ಲಿ ಅರ್ಥಪೂರ್ಣ ಸಂಭ್ರಮಾಚರಣೆ ಹೇಗಿತ್ತು ನೋಡಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post