ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ108 ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ ಶ್ರೀ ನರಸಿಂಹ ಜಯಂತಿ ಮಹಾಭಿಷೇಕ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಶ್ರೀ ಮಠದ ಪೂರ್ವಿಕ ಗುರುಗಳಾದ ಶ್ರೀ ವಿಭುದೇಂದ್ರ ಶ್ರೀ ಪಾದಂಗಳವರಿಗೆ ಸ್ವಪ್ನ ಲ ಲಬ್ಧವಾಗಿ ದೊರೆತ ಷೋಡಷ ಬಾಹು ಶ್ರೀ ನರಸಿಂಹ ದೇವರಿಗೆ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, “ಷೋಡಶಬಾಹು” ಶ್ರೀನರಸಿಂಹದೇವರಿಗೆ “ಮಹಾಭಿಷೇಕ”ವನ್ನು ನೆರವೇರಿಸಿ, ಶ್ರೀ ನರಸಿಂಹ ದೇವರಿಗೆ ಶ್ರೀಗಂಧ ಲೇಪನದ ಅಲಂಕಾರವನ್ನು ಮಾಡಿದರು.
ಶ್ರೀ ಮಠದ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರ ಆಚಾರ್ಯರು, ಸಾವಿರಾರು ಭಕ್ತರು ಈ ಪೂಜಾ ವೈಭವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
Also read: ಶಿವಮೊಗ್ಗ ಜಿಲ್ಲೆಗೆ ಅಗತ್ಯ ರೈಲ್ವೇ ಸೇವೆ ಒದಗಿಸಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ರಿಗೆ ಮನವಿ



ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















