ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಬ್ಯಾನ್ಯನ್ ಟ್ರೀಸ್ ವತಿಯಿಂದ ಮಾರ್ಚ್ 14ರ ಭಾನುವಾರ ಸಂಜೆ 6 ಗಂಟೆಗೆ ರುಹನಿಯತ್ ಸಂಗೀತೋತ್ಸವನ್ನು ಏರ್ಪಡಿಸಲಾಗಿದೆ.
ಕೋವಿಡ್ ಕಾರಣದ ಹಿನ್ನಲೆಯಲ್ಲಿ ಈ ಬಾರಿ ಸಂಗೀತೋತ್ಸವವು ವರ್ಚುವಲ್ ಮಾದರಿಯಲ್ಲಿ ನಡೆಯಲಿದ್ದು, ಪಶ್ಚಿಮ ಬಂಗಾಳದ ಭಕ್ತಿ ಪಂಥದ ಗಾಯಕಿ ಪಾರ್ವತಿ ಬೌಲ್, ಜಾನಪದ ಗಾಯಕ ಮುಖ್ತಿಯಾರ್ ಅಲಿ, ರಷ್ಯಾದ ಗಾಯಕಿ ಒಲೆನಾ ಉಟೈ, ಕವ್ವಾಲಿ ಗಾಯಕರಾದ ಚಿಸ್ಟಿ ಬ್ರದರ್ಸ್ ಸೇರಿದಂತೆ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ ಪ್ರಸಿದ್ಧ ಸಂಗೀತಗಾರರು ಸಂಗೀತ ಕಚೇರಿಯನ್ನು ನಡೆಸಿಕೊಡಲ್ಲಿದ್ದಾರೆ.
ಮುಂಬೈನಲ್ಲಿ ಸಂಗೀತೋತ್ಸವ ನಡೆಯಲಿದ್ದು, ಸೀಮಿತ ಸದಸ್ಯರಿಗೆ ಮಾತ್ರ ಅಲ್ಲಿ ಅವಕಾಶ ಇರುತ್ತದೆ. ಉಳಿದವರು ಆನ್ಲೈನ್ ವೇದಿಕೆಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಚಿನ್ ಮಾನೆ ಮೊ:9223231359, ಆನ್ಲೈನ್ ವೀಕ್ಷಣೆಯ ಟೀಕೆಟ್‌ಗಳುwww.bookmyshow.com ನಲ್ಲಿ ಲಭ್ಯವಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post