Read - 2 minutes
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜೋಲಾರಪೇಟ್’ನಲ್ಲಿ ನಡೆಯುತ್ತಿರುವ ಸುರಕ್ಷತಾ ಕಾಮಗಾರಿಗಳ ಹಿನ್ನೆಲೆಯಲ್ಲಿ, ಜುಲೈ 7 ರಿಂದ ಜುಲೈ 10, 2025 ರವರೆಗೆ ನಾಲ್ಕು ದಿನಗಳ ಕಾಲ ಕೆಳಗಿನ ಮೆಮು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
- ರೈಲು ಸಂಖ್ಯೆ 66550 ಕೆಎಸ್ಆರ್ ಬೆಂಗಳೂರು – ಜೋಲಾರಪೇಟ್ಟೈ ಮೆಮು ಎಕ್ಸ್ ಪ್ರೆಸ್ ರೈಲು ಸೋಮನಾಯಕನಪಟ್ಟಿ ಮತ್ತು ಜೋಲಾರಪೇಟ್ಟೈ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಇದು ಜೋಲಾರಪೇಟ್ಟೈ ಬದಲಿಗೆ ಸೋಮನಾಯಕನಪಟ್ಟಿಯಲ್ಲಿ ತನ್ನ ಸಂಚಾರವನ್ನು ಕೊನೆಗೊಳಿಸಲಿದೆ.
- ರೈಲು ಸಂಖ್ಯೆ 66549 ಜೋಲಾರಪೇಟ್ಟೈ – ಕೆಎಸ್ಆರ್ ಬೆಂಗಳೂರು ಮೆಮು ಎಕ್ಸ್ ಪ್ರೆಸ್ ರೈಲು ಜೋಲಾರಪೇಟ್ಟೈ ಮತ್ತು ಸೋಮನಾಯಕನಪಟ್ಟಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಇದು ಜೋಲಾರಪೇಟ್ಟೈ ಬದಲಿಗೆ ಸೋಮನಾಯಕನಪಟ್ಟಿಯಿಂದ ತನ್ನ ಸಂಚಾರವನ್ನು ಆರಂಭಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post