ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಿಂದೂಸ್ಥಾನಿ ಸಂಗೀತ ದಿಗ್ಗಜ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರ ಸ್ಮರಣಾರ್ಥ `ಧ್ವನಿ’ ಸಂಗೀತ ಕಾರ್ಯಕ್ರಮವನ್ನು ಬೆಂಗಳೂರು ಕಿಡ್ನಿ ಫೌಂಡೇಶನ್ ಸಂಸ್ಥೆ ಪ್ರತಿ ವರ್ಷವೂ ಆಯೋಜಿಸುತ್ತಾ ಬಂದಿದೆ. ಈ ವರ್ಷ 17ನೇ ಧ್ವನಿ’ ಸಂಗೀತ ಸಂಭ್ರಮವನ್ನು ಇದೇ ಅ. 15-16 ಶನಿವಾರ-ಭಾನುವಾರದಂದು ನಗರದ ಜಯನಗರ 8ನೆಯ ಬ್ಲಾಕ್ ನಲ್ಲಿರುವ ಜೆಎಸ್’ಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಿಕೆಎಫ್ ಸಂಸ್ಥೆಯು ಪ್ರತಿವರ್ಷ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸಂಸ್ಮರಣ ಸಂಗೀತೋತ್ಸವ ಸಂದರ್ಭದಲ್ಲಿ ನಾಡಿನ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದ ಹಾಗೂ ಗುರುವಿಗೆ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಈ ವರ್ಷ ಹಿಂದೂಸ್ತಾನಿ ಸಂಗೀತ ಪ್ರಪಂಚಕ್ಕೆ ಅನುಪಮ ಕೊಡುಗೆ ನೀಡಿರುವ ಪಂಡಿತ್ ಅಜಯ್ ಚಕ್ರವರ್ತಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅ 15 ಶನಿವಾರ ಸಂಜೆ 6.45ಕ್ಕೆ ನೆಯುವ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರು ಮುಖ್ಯ ಅತಿಥಿಗಳಾಗಿ ಮತ್ತು ಖ್ಯಾತ ಗಾಯಕ ಪಂ ಡಾ.ನಾಗರಾಜ್ ರಾವ್ ಹವಲ್ದಾರ್ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಜಿ.ಎ. ಶ್ರೀನಿವಾಸ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಧನಂಜಯ ಹೆಗ್ಡೆ ರವರ ಸಂಗೀತ ಕಚೇರಿ ಏರ್ಪಾಡಾಗಿದೆ.
ಅ.16 ಭಾನುವಾರ ಬೆಳಿಗ್ಗೆ 10 ರಿಂದ ಸಮೀರ್ ಕುಲಕರ್ಣಿ ಗಾಯನ ; 11.15 ರಿಂದ ರಾಜಾಸ್ತಾನದ ಕಲಾವಿದರಾದ ಮಂಗಾನಿರ್ಸ್ – ಉಸ್ತಾದ್ ಅನ್ವರ ಖಾನ್ ಮತ್ತು ತಂಡದ ಗಾಯನ; ಸಂಜೆ 5.30ರಿಂದ ಕುಮಾರಿ ಪೂರ್ವಿ ಗರುಡ್ ಅವರ ಹಾಡುಗಾರಿಕೆ; 7.15 ರಿಂದ ಪಂ. ರೋನು ಮಂಜುಮದಾರ್ ಮತ್ತು ಅನಿಲ್ ಶ್ರೀನಿವಾಸನ್ ಅವರ ಜುಗಲ್ಬಂದಿ ನಡೆಯಲಿದೆ.
ಕರ್ನಾಟಕದ ಬೆಂಗಳೂರು ಕಿಡ್ನಿ ಫೌಂಡೇಶನ್ ಸಂಸ್ಥೆಯು ಮೂತ್ರಜನಕಾಂಗ, ಮೂತ್ರಪಿಂಡಗಳಿಗೆ ಸಂಬಅಧಿಸಿದ ಕಾಯಿಲೆಗಳ ಚಿಕಿತ್ಸೆಗಾಗಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. (ಕಿಡ್ನಿ ಫೌಂಡೇಶನ್ ಟ್ರಸ್ಟ್) 1979 ರಲ್ಲಿ ಪ್ರಾರಂಭವಾದ ಸಂಸ್ಥೆಯು ಮೂತ್ರಜನಕಾಂಗ ಸಂಬಂಧಿತ ರೋಗಗಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವ ಕೇಂದ್ರಸ್ಥಾನವಾಗಿ ರೂಪುಗೊಂಡಿದೆ.
Also read: ಬೆಂಗಳೂರು ಗ್ರಾಮಾಂತರ ಜಿಲ್ಲೆ: ವಿವಿಧ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆ
ಬೆಂಗಳೂರು ಕಿಡ್ನಿ ಫೌಂಡೇಶನ್ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಈ ಪ್ರತಿಷ್ಠಿತ ಸಂಸ್ಥೆಯ ನೂತನ ಡಯಾಲಿಸಿಸ್ ಕೇಂದ್ರದ ನಿರ್ಮಾಣ ಪೂರ್ಣಗೊಂಡು ಕಾರ್ಯಾರಂಭ ಮಾಡುತ್ತಲಿದ್ದು. ಈ ನೂತನ ಕೇಂದ್ರವು 85 ಡಯಾಲಿಸಿಸ್ ಯಂತ್ರಗಳನ್ನು ಹೊಂದಿದ್ದು, ಆರ್ಥಿಕವಾಗಿ ಕೆಳಸ್ತರದ ರೋಗಗಳಿಗೆ ಅನುಕೂಲಕರವಾಗಿದೆ. ಈ ನೂತನ ಡಯಾಲಿಸಿಸ್ ಕೇಂದ್ರವು ಡಯಾಲಿಸಿಸ್ ತಂತ್ರಜ್ಞರಿಗೆ ತರಬೇತಿಯನ್ನು ಸಹ ನೀಡಲಾಗುವುದು.
ಕಳೆದ ಹದಿನಾರು ವರ್ಷಗಳಿಂದ ಈ ಸಂಗೀತ ಉತ್ಸವ ಯಶಸ್ವಿಯಾಗಿ ನಡೆದು ಬರಲು ದಾನಿಗಳ, ಸಂಗೀತ ಕಲಾರಾಧಕರ, ಸಮಾಜ ಶ್ರೇಯೋಭಿಲಾಷಿಗಳ ಒತ್ತಾಸೆಯೇ ಕಾರಣವಾಗಿದೆ. ಸಂಗೀತ ಉತ್ಸವವಗಳ ಮೂಲಕ ಸಂಗ್ರಹವಾದ ಹಣ ಬಡರೋಗಿಗಳ ಉಚಿತ ಡಯಾಲಿಸಿಸ್ ವೆಚ್ಚವನ್ನು ಭರಿಸಲು ಹಾಗೂ ಬಿಕೆಎಫ್’ನ ಮೂಲಧನ ಕ್ರೋಢೀಕರಣಕ್ಕೆ ಸಹಾಯಕವಾಗಿದ್ದು, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಸಹಾಯಕವಾಗುತ್ತದೆ. ಎಂದು ಸಂಸ್ಥೆಯ ಅಧ್ಯಕ್ಷ ಶ್ರೀರಾಮ್ ತಿಳಿಸಿದ್ದಾರೆ.
ವಿವರಗಳಿಗೆ: 9901788354 ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post